newsfirstkannada.com

Breaking News: ಬಾಲಿವುಡ್​ನ ಬಿಗ್​​ ಸ್ಟಾರ್​ಗಳ ನಿರ್ದೇಶಕ, ಧೂಮ್ ಚಿತ್ರ ಖ್ಯಾತಿಯ ಸಂಜಯ್ ಗಧ್ವಿ ನಿಧನ

Share :

19-11-2023

    ಬಾಲಿವುಡ್​ನ ದೊಡ್ಡ ದೊಡ್ಡ ಸ್ಟಾರ್​ಗಳಿಗೆ ಆ್ಯಕ್ಷನ್ ಕಟ್

    ಸಂಜಯ್ ಗಧ್ವಿ 3 ದಿನ ಕಳೆದರೆ 57 ವರ್ಷಕ್ಕೆ ಕಾಲಿಡಲಿದ್ದರು

    ಹಿರಿಯ ನಿರ್ದೇಶಕನ ಅಗಲಿಕೆಗೆ ಗಣ್ಯರಿಂದ ಕಂಬನಿ

ಹೃದಯಾಘಾತದಿಂದ ಬಾಲಿವುಡ್ ನಿರ್ದೇಶಕ ಸಂಜಯ್ ಗಧ್ವಿ ಇವತ್ತು ನಿಧನರಾಗಿದ್ದಾರೆ. ಸಂಜಯ್ ಅವರು ಧೂಮ್, ಧೂಮ್-2 ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆಗಳಿಸಿದ್ದರು.

ಹೃತಿಕ್ ರೋಷನ್, ಅಭಿಷೇಕ್ ಬಚ್ಚನ್ ಅಭಿನಯದ ಈ ಚಿತ್ರಗಳು ಭಾರೀ ಯಶಸ್ವಿ ಕಂಡಿದ್ದವು. ಸಂಜಯ್ ಅವರು 56 ವರ್ಷಕ್ಕೆ ಇಹಲೋಕ ತ್ಯಜಿಸಿದ್ದು, ಇನ್ನು ಮೂರು ದಿನ ಕಳೆದರೆ ಅಂದರೆ 57 ವರ್ಷಕ್ಕೆ ಕಾಲಿಡಲಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸಂಬಂಧಿಗಳು ನೀಡಿದ ಮಾಹಿತಿ ಪ್ರಕಾರ, ಸಂಜಯ್ ಅವರು ಎರಡ್ಮೂರು ದಿನಗಳ ಹಿಂದಷ್ಟೇ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದರು. ಸಂಜಯ್ ಅವರು, ಧೂಮ್, ಧೂಮ್-2 ಚಿತ್ರದ ಜೊತೆಗೆ ‘ಮೇರೆ ಯಾರ್​ ಕೀ ಶಾದಿ ಹೈ’ ಚಿತ್ರವನ್ನೂ ನಿರ್ದೇಶನ ಮಾಡಿದ್ದರು. ಅಮಿರ್ ಖಾನ್ ಅಭಿನಯದ ಕಿಡ್ನಾಪ್, 2012ರಲ್ಲಿ ತೆರೆ ಕಂಡ ‘ಅಜಬ್ ಗಜಬ್ ಲವ್’, 2020ರಲ್ಲಿ ರಿಲೀಸ್ ಆದ ‘ಆಪರೇಷನ್ ಪರಿಂಡೇಯ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.

ಸಂಜ್ ಗಧ್ವಿ ಅವರು ಮೊದಲು ನಿರ್ದೇಶನ ಮಾಡಿದ್ದ ಚಿತ್ರ ‘ತೇರೆ ಲಿಯೇ’. ಈ ಚಿತ್ರವು 2000ರಲ್ಲಿ ಬಿಡುಗಡೆಗೊಂಡು ಭರ್ಜರಿ ಹಿಟ್ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಬಾಲಿವುಡ್​ನ ಬಿಗ್​​ ಸ್ಟಾರ್​ಗಳ ನಿರ್ದೇಶಕ, ಧೂಮ್ ಚಿತ್ರ ಖ್ಯಾತಿಯ ಸಂಜಯ್ ಗಧ್ವಿ ನಿಧನ

https://newsfirstlive.com/wp-content/uploads/2023/11/SANJAY.jpg

Load More