newsfirstkannada.com

ಒಂದೇ ದಿನ ಧ್ರುವ, ದೊಡ್ಮನೆ ಕುಡಿ ಯುವ ಸಿನಿಮಾ ರಿಲೀಸ್​​..? ಇಬ್ಬರಲ್ಲಿ ಗೆಲ್ಲೋದ್ಯಾರು..?

Share :

07-09-2023

  ಮದಗಜಗಳ ಕಾದಾಟಕ್ಕೆ ವೇದಿಕೆ ಸಜ್ಜಾಯ್ತಾ?

  ಧ್ರುವ ಮಾರ್ಟಿನ್ ಎಂಟ್ರಿಗೆ ಮುಹೂರ್ತ ಫಿಕ್ಸ್!

  ಬಾಕ್ಸಾಫೀಸ್​ನಲ್ಲಿ ಧ್ರುವ vs ಯುವ ಆಗುತ್ತಾ?

ಅದೆರಡು ದೊಡ್ಡ ಸಿನಿಮಾಗಳು.. ಆ ಎರಡೂ ಚಿತ್ರದ ಮೇಲೂ ದೊಡ್ಡ ಎಕ್ಸ್​ಪೆಕ್ಟೇಶನ್ನೇ​ ಇದೆ. ಮಿಗಿಲಾಗಿ ಎರಡೂ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸಂಸ್ಥೆಗಳು ಶಕ್ತಿಯಾಗಿ ನಿಂತಿವೆ. ವಿಷ್ಯ ಹೀಗಿರುವಾಗ ಎರಡೂ ಸಿನಿಮಾಗಳು ಒಂದೇ ದಿನ ಬರೋಕೆ ರೆಡಿಯಾಗಿದೆ. ಈ ಬೆಳವಣಿಗೆ ನೋಡ್ತಿದ್ರೆ ಸ್ಯಾಂಡಲ್​ವುಡ್​ನಲ್ಲಿ ಮಜಗಜಗಳ ಕಾದಾಟ ಫಿಕ್ಸ್​ ಅಂತಿದೆ ಗಾಂಧಿನಗರ.

ಮಾರ್ಟಿನ್ ಎಂಟ್ರಿಗೆ ಮುಹೂರ್ತ ಫಿಕ್ಸ್!
ಇದೇ ವರ್ಷ ಬರ್ತಾರಂತೆ ಆ್ಯಕ್ಷನ್ ಪ್ರಿನ್ಸ್​!

ಫೈನಲಿ, ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಬಿಗ್ ಸ್ಕ್ರೀನ್ ಮೇಲೆ ಬರೋಕೆ ನಿರ್ಧರಿಸಿದೆ. ಸಾಂಗ್ ಶೂಟಿಂಗ್, ಪ್ಯಾಚ್​ ವರ್ಕ್​ ಬಾಕಿ ಉಳಿಸಿಕೊಂಡಿದ್ದ ಮಾರ್ಟಿನ್​ ತನ್ನೆಲ್ಲಾ ಕೆಲಸ ಮುಗಿಸಿಕೊಂಡು ಇದೇ ವರ್ಷ ಥಿಯೇಟರ್​ಗೆ ಬರೋಕೆ ರೆಡಿಯಾಗಿದೆ.

ಹೌದು, ಮಾರ್ಟಿನ್ ಸಿನಿಮಾ ಈ ವರ್ಷವೇ ಬಿಡುಗಡೆಯಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಡಿಸೆಂಬರ್ 22ಕ್ಕೆ ಧ್ರುವ ಸರ್ಜಾ ಸಿನಿಮಾ ಪ್ಯಾನ್ ಇಂಡಿಯಾ ಗ್ರ್ಯಾಂಡ್ ಎಂಟ್ರಿ ಕೊಡುವ ಲೆಕ್ಕಾಚಾರದಲ್ಲಿದೆ. ಈ ಬಗ್ಗೆ ಚಿತ್ರತಂಡ ಅಫಿಶಿಯಲ್ ಆಗಿ ಅನೌನ್ಸ್​ ಮಾಡದೇ ಹೋದರೂ ಮಾರ್ಟಿನ್ ಚಿತ್ರತಂಡದ್ದೇ ಎನ್ನುವ ರಿಲೀಸ್ ಪೋಸ್ಟರ್​ವೊಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ.

ಮದಗಜಗಳ ಕಾದಾಟಕ್ಕೆ ವೇದಿಕೆ ಸಜ್ಜಾಯ್ತಾ?
ಬಾಕ್ಸಾಫೀಸ್​ನಲ್ಲಿ ಧ್ರುವ vs ಯುವ ಆಗುತ್ತಾ?

ಮಾರ್ಟಿನ್ ಸಿನಿಮಾ ಡಿಸೆಂಬರ್ 22ಕ್ಕೆ ಬರುತ್ತೆ ಅನ್ನೋ ಪೋಸ್ಟರ್ ಅದ್ಯಾವಾಗ ವೈರಲ್ ಆಯ್ತೋ ಆಗಲೇ ಸ್ಯಾಂಡಲ್​ವುಡ್​ನಲ್ಲಿ ಮದಗಜಗಳ ಕಾದಾಟಕ್ಕೆ ವೇದಿಕೆ ಸಜ್ಜಾಯ್ತು ಎಂಬ ವಿಶ್ಲೇಷಣೆಯೂ ಆರಂಭವಾಯ್ತು.. ಹೌದು, ಮಾರ್ಟಿನ್ ನಿಗದಿ ಮಾಡಿಕೊಂಡಿರುವ ದಿನಕ್ಕೆ ದೊಡ್ಮನೆ ಹುಡ್ಗ ಯುವರಾಜ್ ಕುಮಾರ್​ ಚೊಚ್ಚಲ ಸಿನಿಮಾನೂ ಬಿಗ್ ಸ್ಕ್ರೀನ್​ಗೆ ಬರಲಿದೆ. ಹಾಗಾಗಿ ಇದು ಧ್ರುವ ವರ್ಸಸ್ ಯುವ ಆಗಲಿದೆ ಎನ್ನಲಾಗುತ್ತಿದೆ.

ಯುವ.. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡ್ತಿರುವ ಯುವ ರಾಜ್ ಕುಮಾರ್ ನಾಯಕನಾಗಿ ನಟಿಸ್ತಿರುವ ಚೊಚ್ಚಲ ಸಿನಿಮಾ. ಕಳೆದ 65 ದಿನಗಳಿಂದ ನಾನ್​​ಸ್ಟಾಪ್​ ಶೂಟಿಂಗ್ ಮಾಡಲಾಗ್ತಿದೆ. ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಈ ಚಿತ್ರಕ್ಕೆ ಹೀರೋಯಿನ್ ಆಗಿದ್ದು, ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ. ಪವರ್ ಸ್ಟಾರ್​ ಪುನೀತ್ ರಾಜ್​​ಕುಮಾರ್​ಗೆ ವಾರಸ್ದಾರ ಎನ್ನುವ ಎಮೋಷನ್​ನೊಂದಿಗೆ ಯುವ ರೆಡಿಯಾಗ್ತಿದ್ದು, ದೊಡ್ಮನೆ ಅಭಿಮಾನಿಗಳು ಈ ಚಿತ್ರಕ್ಕಾಗಿ ಎದುರು ನೋಡ್ತಾ ಇದ್ದಾರೆ. ಯುವ ಸಿನಿಮಾನ ಬಹಳ ದೊಡ್ಡದಾಗಿ ಸೆಲೆಬ್ರೇಟ್ ಮಾಡ್ಬೇಕು ಅಂತ ಸಿಕ್ಕಾಪಟ್ಟೆ ಪ್ಲಾನ್ ಮಾಡ್ಕೊಂಡು ಕಾಯ್ತಾ ಇದ್ದಾರೆ. ಇಂಥಾ ಸಮಯದಲ್ಲಿ ಯುವ ಎದುರು ಧ್ರುವ ಸಿನಿಮಾ ಬರೋಕೆ ಮುಂದಾಗಿದೆ ಅನ್ನೋ ಸಮಾಚಾರ ದೊಡ್ಮನೆ ಅಭಿಮಾನಿಗಳಿಗೆ Extra ಎನರ್ಜಿ ತಂದುಕೊಟ್ಟಿದೆ.

ಒಂದೇ ದಿನ ಎರಡು ದೊಡ್ಡ ಸಿನಿಮಾಗಳ ರಿಲೀಸ್ ಆಗೋದು, ಇಬ್ಬರು ದೊಡ್ಡ ಸ್ಟಾರ್​ಗಳ ಚಿತ್ರಗಳು ಮುಖಾಮುಖಿ ಆಗೋದು ಹೊಸದೇನಲ್ಲ. ಇಂಥ ಸಾಕಷ್ಟು ಉದಾಹರಣೆಗಳು ಈ ಹಿಂದೆ ನಡೆದು ಹೋಗಿದೆ. ಇಂಥ ಪರಿಸ್ಥಿತಿ ನಿರ್ಮಾಣವಾದಾಗ ಸಹಜವಾಗಿ ಫ್ಯಾನ್ಸ್​ವಾರ್​ ಜೋರಾಗುತ್ತೆ. ನಿಮ್ಮ ಸಿನಿಮಾನಾ? ನಮ್ಮ ಸಿನಿಮಾನಾ? ಎನ್ನುವ ಟಾಕ್ ವಾರ್​ ಸೃಷ್ಟಿಯಾಗುತ್ತೆ. ಇದೀಗ ಮಾರ್ಟಿನ್ ಮತ್ತು ಯುವ ಚಿತ್ರಗಳ ರಿಲೀಸ್ ವಿಚಾರದಲ್ಲಿ ಇಂಥದ್ದೇ ಸಂದರ್ಭ ಸೃಷ್ಟಿಯಾಗುತ್ತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಯುವನಾ? ಧ್ರುವನಾ ಅನ್ನೋ ಎರಡು ಟೀಮ್ ಕ್ರಿಯೇಟ್ ಆಗಿದ್ದು, ಮಾರ್ಟಿನ್ನಾ? ಯುವನಾ ಅನ್ನೋ ಕಾಳಗಕ್ಕೆ ಕಾರಣವಾಗ್ತಿದೆ.

ಮದಗಜಗಳ ಕಾದಾಟಕ್ಕೆ ಬಿಗ್ ಪ್ರೊಡ್ಯೂಸರ್ಸ್​ ಸಾಥ್!

ಆಗ್ಲೇ ಹೇಳಿದಂತೆ ಯುವ ಸಿನಿಮಾನ ನಿರ್ಮಾಣ ಮಾಡ್ತಿರೋ ಹೊಂಬಾಳೆ ಸಂಸ್ಥೆ.. ಕೆಜಿಎಫ್​, ಕಾಂತಾರ ಅಂತಹ ಪ್ಯಾನ್ ಇಂಡಿಯಾ ಸಕ್ಸಸ್​ನಲ್ಲಿರುವ ಹೊಂಬಾಳೆ ಸದ್ಯ ಸಲಾರ್​ ರಿಲೀಸ್ ಮಾಡುವ ತಯಾರಿಯಲ್ಲಿದೆ. ಬ್ಯಾಕ್ ಟು ಬ್ಯಾಕ್ ದೊಡ್ಡ ಸಿನಿಮಾಗಳನ್ನೇ ಮಾಡ್ತಿರೋ ಹೊಂಬಾಳೆ ಪ್ರಮೋಷನ್ ಅಂತಾ ಬಂದಾಗ ನೆಕ್ಸ್ಟ್​ ಲೆವೆಲ್​ ಕೆಲಸ ಮಾಡುತ್ತೆ ಅನ್ನೋದು ಗೊತ್ತಿರುವ ವಿಚಾರ. ಹಾಗಾಗಿ ಯುವ ಚಿತ್ರಕ್ಕೂ ಅಷ್ಟೇ ದೊಡ್ಡ ಓಪನಿಂಗ್ ಸಿಗುತ್ತೆ! ಚೊಚ್ಚಲ ಚಿತ್ರದಲ್ಲೇ ಯುವರಾಜ್ ಕುಮಾರ್ ಕೂಡ ದೊಡ್ಡದಾಗಿಯೇ ಲಾಂಚ್ ಆಗ್ತಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

ಹಾಗಂತ ಮಾರ್ಟಿನ್ ಚಿತ್ರಕ್ಕೆ ಅಷ್ಟು ಶಕ್ತಿ ಇಲ್ವಾ ಅಂದ್ಕೋಕೊಳ್ಳೋದು ಬೇಡ.. ಈ ಸಿನಿಮಾನ ನಿರ್ಮಾಣ ಮಾಡಿರೋದು ಉದಯ್ ಕೆ ಮೆಹ್ತಾ. ಆದರೆ ಮಾರ್ಟಿನ್​ಗೆ ಪವರ್​ ಹೌಸ್​ ಆಗಿ ನಿಂತಿರೋದು ಕೆವಿಎನ್​ ಸಂಸ್ಥೆ. ಕೆವಿಎನ್ ಸಂಸ್ಥೆ ಸದ್ಯ ಸ್ಯಾಂಡಲ್​ವುಡ್​ನ ಅತಿ ದೊಡ್ಡ ಪ್ರೊಡಕ್ಷನ್ ಕಂಪನಿ. ನಿರ್ಮಾಣ, ವಿತರಣೆಯಲ್ಲಿ ಭಾರಿ ಪ್ರಭಾವ ಹೊಂದಿರುವ ಸಂಸ್ಥೆ. ತ್ರಿಬಲ್ ಆರ್ ಚಿತ್ರವನ್ನ ಕರ್ನಾಟಕದಲ್ಲಿ ಡಿಸ್ಟ್ರುಬ್ಯೂಟ್ ಮಾಡಿದ್ದು ಇದೇ ಕೆವಿಎನ್​. ಸದ್ಯ ಬಾಕ್ಸಾಫೀಸ್​ನಲ್ಲಿ ಮ್ಯಾಜಿಕ್ ಮಾಡ್ತಿರೋ ಸಪ್ತ ಸಾಗರದಾಚೆ ಎಲ್ಲೋ ವಿತರಣೆ ಮಾಡಿರೋದೇ ಇದೇ ಸಂಸ್ಥೆ. ಇಷ್ಟೇ ಅಲ್ಲ ಜೋಗಿ ಪ್ರೇಮ್ ನಿರ್ದೇಶನದ ಕೆ.ಡಿ ಸಿನಿಮಾ ಹಾಗೂ ಪ್ರೇಮ್-ದರ್ಶನ್ ಸಿನಿಮಾನೂ ಪ್ರೊಡ್ಯೂಸ್ ಮಾಡ್ತಿರೋದು ಇದೇ ಕೆವಿಎನ್​ ಸಿನಿಮಾ ಸಂಸ್ಥೆ. ಈ ನಡುವೆ ಯಶ್​ ನಟನೆಯ 19ನೇ ಚಿತ್ರವನ್ನ ಕೆವಿಎನ್ ನಿರ್ಮಾಣ ಮಾಡಲಿದೆ ಎಂಬ ಸುದ್ದಿಯೂ ಇದೆ.. ಈಗ ಮಾರ್ಟಿನ್ ಚಿತ್ರವನ್ನ ವಿಶಾಲ ಕರ್ನಾಟಕದಲ್ಲಿ ರಿಲೀಸ್ ಮಾಡುವ ಜವಾಬ್ದಾರಿಯನ್ನ ಕೆವಿಎನ್​ ಹೊತ್ತುಕೊಂಡಿದ್ದು, ಧ್ರುವ ಚಿತ್ರಕ್ಕೆ ಆನೆ ಬಲ ಸಿಕ್ಕಂತಾಗಿದೆ.

ಇಟಲಿ ಲೇಡಿ ಜೊತೆ ಆ್ಯಕ್ಷನ್ ಪ್ರಿನ್ಸ್​ ಸ್ಪೆಷಲ್ ಸಾಂಗ್!

ಮಾರ್ಟಿನ್ ಸಿನಿಮಾದ ಶೇಕಡಾ 95 ರಷ್ಟು ಸಿನಿಮಾ ಪೂರ್ಣವಾಗಿತ್ತು. ಹೆಚ್ಚು ಕಡಿಮೆ ಟಾಕಿ ಪೋಷನ್ ಕಂಪ್ಲೀಟ್ ಆಗಿತ್ತು. ಕೆಲವು ಪ್ಯಾಚ್​ ವರ್ಕ್​ ಜೊತೆಗೆ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದುಕೊಂಡಿತ್ತು. ಆದ್ರೀಗ ಬಾಕಿ ಉಳಿದಿದ್ದ ಸಾಂಗ್ಸ್​ನ ಮುಗಿಸೋಕೆ ಮುಂದಾಗಿದ್ದಾರೆ ಧ್ರುವ.. ಹೌದು, ಹೈದರಾಬಾದ್​ನಲ್ಲಿ ಮಾರ್ಟಿನ್ ಚಿತ್ರ ಸಾಂಗ್ ಶೂಟಿಂಗ್ ನಡೆದಿದ್ದು, ಇತ್ತೀಚೆಗಷ್ಟೇ ಸ್ಪೆಷಲ್ ನಂಬರ್​ನ ಚಿತ್ರೀಕರಣ ಮುಗಿದಿದೆ.. ಸ್ಪೆಷಲ್ ಅಂದ್ರೆ ಈ ಹಾಡಿನಲ್ಲಿ ಧ್ರುವ ಸರ್ಜಾ ಜೊತೆ ಇಟಲಿ ಡ್ಯಾನ್ಸರ್ ಗಾರ್ಗಿಯಾ ಆಂಡ್ರಿಯಾನಿ ಹೆಜ್ಜೆ ಹಾಕಿದ್ದು, ಇದೇ ಮೊದಲ ಸಲ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿಗಾಗಿ ಮೂರುವರೆ ಕೋಟಿ ಖರ್ಚು ಮಾಡಲಾಗಿದ್ದು, 350ಕ್ಕೂ ಹೆಚ್ಚು ವಿದೇಶಿ ಡ್ಯಾನ್ಸರ್​ಗಳು ಭಾಗಿಯಾಗಿದ್ದರಂತೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತಂತೆ.

ಯುವ ಸೆಟ್​ಗೆ ಭೇಟಿ ನೀಡಿದ್ದ ಆ್ಯಕ್ಷನ್ ಪ್ರಿನ್ಸ್​!

ಯುವ ಸಿನಿಮಾದ ಚಿತ್ರೀಕರಣವೂ ಅಷ್ಟೇ ವೇಗವಾಗಿ ನಡೀತಿದೆ. ಬೆಂಗಳೂರು, ಮಂಗಳೂರು ಸುತ್ತಮುತ್ತ 60ಕ್ಕೂ ಹೆಚ್ಚು ದಿನ ಶೂಟಿಂಗ್ ಜರುಗಿದೆ. ಇತ್ತೀಚೆಗೆ ಬೆಂಗಳೂರಿನ ಬಸವನಗುಡಿಯಲ್ಲಿ ಯುವ ಶೂಟಿಂಗ್ ಆಗಬೇಕಾದ್ರೆ ಖುದ್ದು ಧ್ರುವ ಸರ್ಜಾ ಸೆಟ್​ಗೆ ವಿಸಿಟ್ ಕೊಟ್ಟಿದ್ದರು. ಯುವ ಹೇಗೆ ತಯಾರಾಗ್ತಿದೆ ಅಂತ ವಿಚಾರಿಸಿದ್ರು.. ಆದ್ರೀಗ ಅದೇ ಯುವ ಎದುರು ಮಾರ್ಟಿನ್​ ಜೊತೆ ಸೆಣಸಾಡೋ ಸಂದರ್ಭ ಒದಗಿಬಂದಿದೆ.

ಸದ್ಯದವರೆಗೂ ಯುವ ಸಿನಿಮಾದ ರಿಲೀಸ್ ದಿನಾಂಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಸಲಾರ್ ಚಿತ್ರ ಪೋಸ್ಟ್​ಪೋನ್ ಆಗಿರುವ ಕಾರಣ ಕೊನೆ ಕ್ಷಣದಲ್ಲಿ ಪ್ರಭಾಸ್​ ಚಿತ್ರಕ್ಕಾಗಿ ಯುವ ಡಿಸೆಂಬರ್ ತಿಂಗಳನ್ನ ಬಿಟ್ಟುಕೊಟ್ಟರು ಅಚ್ಚರಿ ಇಲ್ಲ. ಈ ಕಡೆ ಮಾರ್ಟಿನ್ ಕೂಡ ಫೈನಲ್ ಕಾಪಿ ರೆಡಿ ಮಾಡ್ತಿದ್ದು, ಡಿಸೆಂಬರ್ 22ರ ಮೇಲೆ ಕಣ್ಣಾಕಿದೆ.. ಆದರೆ ಇದನ್ನ ಅಧಿಕೃತವಾಗಿ ಹೇಳಿಕೊಳ್ಳದ ಕಾರಣ ಈಗಲೇ ಏನನ್ನು ಡಿಸೈಡ್​ ಮಾಡೋಕೆ ಆಗ್ತಿಲ್ಲ. ಬಟ್ ಒಂದಂತು ನಿಜ.. ಒಂದು ವೇಳೆ ಡಿಸೆಂಬರ್ 22ಕ್ಕೆ ಯುವ ಮತ್ತು ಧ್ರುವ ಸಿನಿಮಾಗಳು ಮುಖಾಮುಖಿ ಆದ್ರೆ ಅದು ಸ್ಯಾಂಡಲ್​ವುಡ್​ ಪಾಲಿಗೆ ಮದಗಜಗಳ ಕಾದಾಟ ಆಗೋದಂತೂ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ದಿನ ಧ್ರುವ, ದೊಡ್ಮನೆ ಕುಡಿ ಯುವ ಸಿನಿಮಾ ರಿಲೀಸ್​​..? ಇಬ್ಬರಲ್ಲಿ ಗೆಲ್ಲೋದ್ಯಾರು..?

https://newsfirstlive.com/wp-content/uploads/2023/09/Dhruva_Yuva.jpg

Load More