newsfirstkannada.com

ಮಾರ್ಟಿನ್​​ ಅಬ್ಬರಕ್ಕೆ ದಾಖಲೆಗಳೆಲ್ಲಾ ಶೇಕ್​ ಶೇಕ್: ಹಾಲಿವುಡ್​ ರೇಂಜ್​ಗೆ ಟೀಸರ್​ ಔಟ್​​

Share :

25-02-2023

    ಮಾರ್ಟಿನ್ ತೂಫಾನ್.. ದಾಖಲೆಗಳು ಖಲ್ಲಾಸ್

    ಎಪಿ ಅರ್ಜುನ್ ಕ್ಯಾಪ್ಟನ್.. ಅರ್ಜುನ್ ಸರ್ಜಾ ಮಾಸ್ಟರ್

    ಮಾರ್ಟಿನ್​ಗೆ ಪ್ಯಾನ್ ಇಂಡಿಯಾ ಸ್ಟಾರ್ಸ್ ಸಾಥ್!

ಅಪ್ಡೇಟ್ ಕೊಡಿ, ಟೀಸರ್ ತೋರಿಸಿ, ರಿಲೀಸ್ ಯಾವಾಗ ಅಂತ ಕಾದು ಕಾದು ಸುಸ್ತಾಗಿದ್ದ ಅಭಿಮಾನಿಗಳಿಗೆ ಸುನಾಮಿ, ಸುಂಟರಗಾಳಿ ಥರಾ ಮಾರ್ಟಿನ್ ಟೀಸರ್​ ಬಂದಿದೆ. ಧ್ರುವ ಆ್ಯಕ್ಷನ್, ಎಪಿ ಅರ್ಜುನ್ ಮೇಕಿಂಗ್ ನೋಡಿ ಅಕ್ಷರಃ ಬೆಚ್ಚಿ ಬಿದ್ದಿದ್ದಾರೆ. ಹಳೆ ದಾಖಲೆಗಳು ಖಲ್ಲಾಸ್ ಆಗಿದ್ದು, ಪ್ಯಾನ್ ಇಂಡಿಯಾ ಶೇಕ್ ಆಗೋಗಿದೆ.

ಮಾರ್ಟಿನ್ ತೂಫಾನ್.. ದಾಖಲೆಗಳು ಖಲ್ಲಾಸ್! ಧ್ರುವ ಹೈ-ವೋಲ್ಟೇಜ್ ಌಕ್ಷನ್.. ಇಂಡಸ್ಟ್ರಿ ಶೇಕ್!

ನಿಜಕ್ಕೂ ಕನ್ನಡ ಸಿನಿಮಾನಾ ಅಥವಾ ಯಾವುದಾದರೂ ಹಾಲಿವುಡ್​ ಸಿನಿಮಾ ಅನ್ನುವಂತಿದೆ ಮಾರ್ಟಿನ್ ಟೀಸರ್​ ಝಲಕ್. ಇಂಗ್ಲಿಷ್​ ಸಿನಿಮಾಗಳಂತೆ ಮೇಕಿಂಗ್, ಹೆವಿ ಌಕ್ಷನ್ ಬ್ಲಾಕ್ಸ್, ಎದೆ ನಡುಗಿಸೋ ಬ್ಯಾಗ್ರೌಂಡ್ ಸ್ಕೋರ್, ಬಹುಭಾಷಾ ಕಲಾವಿದರ ಮಹಾಸಂಗಮ. ಒಂದೇ ವಾಕ್ಯದಲ್ಲಿ ಹೇಳೋದಾದರೂ ಮಾರ್ಟಿನ್ ರಭಸಕ್ಕೆ ಪ್ಯಾನ್ ಇಂಡಿಯಾ ಶೇಕ್ ಆಗೋಗಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಬಹುಕೋಟಿ ಸಿನಿಮಾ ಇದಾಗಿದ್ದು, ಕನ್ನಡದ ಜೊತೆ ಪಂಚಭಾಷೆಯಲ್ಲಿ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸದ್ದು ಮಾಡ್ತಿದೆ. ಧ್ರುವ ಹೈಟು, ವೆಯ್ಟು ಹಾಗೂ ಸ್ಟೈಲು ಮ್ಯಾನರಿಸಂಗೆ ಇದು ಹೇಳಿ ಮಾಡಿಸಿದ ಸಿನಿಮಾ ಅನಿಸ್ತಿದೆ. ಕೆಜಿಎಫ್, ಕಬ್ಜ ನಂತ್ರ ವಿಶ್ವ ಸಿನಿದುನಿಯಾದಲ್ಲಿ ಮಾರ್ಟಿನ್ ಹೊಸ ಅಧ್ಯಾಯ ಶುರು ಮಾಡಿದ್ದು, ಇತಿಹಾಸ ಮತ್ತೆ ರೀ ಕ್ರಿಯೇಟ್ ಮಾಡೋ ಮನ್ಸೂಚನೆ ನೀಡಿದೆ.

ಇದನ್ನು ಓದಿ: ದೀಪಿಕಾ ದಾಸ್​​ಗೆ ‘ಸ್ಪೆಷಲ್ ಡೇ’; ಫೋಟೋ ಶೇರ್​ ಮಾಡಿ ಖುಷಿ ಹಂಚಿಕೊಂಡ ‘ನಾಗಿಣಿ’

ಸದ್ಯ ಟೀಸರ್​ ರಿಲೀಸ್ ಆದ ಕೇವಲ 9 ಗಂಟೆಯಲ್ಲೇ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದೆ. ಹೈದಿನೈದು ಗಂಟೆ ಆಗೋಷ್ಟರಲ್ಲಿ 2 ಕೋಟಿ ವೀಕ್ಷಣೆ ಕಂಡಿದೆ. 24 ಗಂಟೆ ಆಗೋಷ್ಟರಲ್ಲಿ ಮಾರ್ಟಿನ್​ ಟೀಸರ್​ ವೀಕ್ಷಣೆಯನ್ನ ಊಹಿಸೋಕು ಕಷ್ಟ ಆಗ್ತಿದೆ. ಧ್ರುವ ಆ್ಯಕ್ಷನ್​ ರಭಸಕ್ಕೆ ಸೋಶಿಯಲ್ ಮೀಡಿಯಾ ನಡುಗಿ ಹೋಗಿದ್ದು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂಬರ್ ವನ್ ಪ್ಲೇಸ್​​ನಲ್ಲಿತ್ತು. ಡೈಲಾಗ್ಸ್ ಕಮ್ಮಿ, ಌಕ್ಷನ್ ದುಪ್ಪಟ್ಟು ಇರೋ ಮಾರ್ಟಿನ್ ಟೀಸರ್, ಬಾಲಿವುಡ್​ನ ಟೈಗರ್ ಸೀರೀಸ್ ಸಿನಿಮಾಗಳು, ವಾರ್, ಪಠಾಣ್ ಶೈಲಿಯ ಮೇಕಿಂಗ್​ನಿಂದ ವ್ಹಾವ್ ಫೀಲ್ ಕೊಡ್ತಿದೆ. ಇಷ್ಟು ದಿನ ಹಿಂದಿ ಹಾಗೂ ಇಂಗ್ಲೀಷ್​ನಲ್ಲಿ ಇಂಥಾ ಮೇಕಿಂಗ್ ನೋಡ್ತಿದ್ದ ಕನ್ನಡ ಕಲಾರಸಿಕರಿಗೆ ಮಾರ್ಟಿನ್​ ಬಾಡೂಟ ಆಗಿದೆ. ಈ ಮೂಲಕ ಧ್ರುವ ಸರ್ಜಾ ಇಂಡಿಯನ್ ಸಿನಿಮಾರಂಗಕ್ಕೆ ಆ್ಯಕ್ಷನ್​ ಕಾ ಬಾಪ್​ ಆಗೋ ಮುನ್ಸೂಚನೆ ಕೊಟ್ಟಿದ್ದಾರೆ.

ಈಗಾಗಲೇ ಗೊತ್ತಿರುವಂತೆ ಧ್ರುವರನ್ನ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡಿದ ಎಪಿ ಅರ್ಜುನ್ ಅವರೇ ಮಾರ್ಟಿನ್​​ ಅಸಲಿ ಕ್ಯಾಪ್ಟನ್. ಅರ್ಜುನ್ ಸರ್ಜಾ ಕಥೆ ಅನ್ನೋದು ಮಾರ್ಟಿನ್ ಸ್ಪೆಷಲ್. ನವಾಬ್ ಷಾ, ನಿಕಿತಿನ್ ಧೀರ್, ಮಾಳವಿಕಾ ಅವಿನಾಶ್ ರಂತಹ ಕಲಾವಿದರು ಚಿತ್ರದಲ್ಲಿದ್ದು, ಅನ್ವೇಶಿ ಜೈನ್, ವೈಭವಿ ಶಾಂಡಿಲ್ಯ ಗ್ಲಾಮರ್ ಕಿಕ್ ಇದೆ. ರವಿ ಬಸ್ರೂರು ಮ್ಯೂಸಿಕ್, ಸತ್ಯ ಹೆಗ್ಡೆ ಕ್ಯಾಮೆರಾ ವರ್ಕ್ ನೆಕ್ಸ್ಟ್ ಲೆವೆಲ್ಗಿದೆ. ಕೆಜಿಎಫ್ ಹಾಗೂ ಕಬ್ಜ ಸಿನಿಮಾಗಳ ಡಾರ್ಕ್ ಶೇಡ್ ಟಿಂಟ್ ಅನುಭವಿಸಿರೋ ಸಿನಿಪ್ರಿಯರಿಗೆ ಮಾರ್ಟಿನ್ ಈಗ ಫುಲ್ ಮೀಲ್ಸ್​. ಒಟ್ಟಾರೆ ಟೀಸರ್ ಮೂಲಕ ಮಾರ್ಟಿನ್ ಹವಾ ಶುರುವಾಗಿದೆ.

ಎರಡೂವರೆ ನಿಮಿಷದ ಟೀಸರ್ ಪ್ಯಾನ್ ಇಂಡಿಯಾ ದುನಿಯಾದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಜಬರ್ದಸ್ತ್ ಌಕ್ಷನ್ ಸೀಕ್ವೆನ್ಸ್ನಿಂದ ದೊಡ್ಡ ಮಟ್ಟದ ಬಾಕ್ಸ್ ಆಫೀಸ್ ನಿರೀಕ್ಷೆ ಹುಟ್ಟುಹಾಕಿದೆ. ಬರೀ ಯಶ್, ಪ್ರಶಾಂತ್ ನೀಲ್, ಉಪೇಂದ್ರ, ಚಂದ್ರು ಸಿನಿಮಾಗಳ ಮೇಕಿಂಗ್​ ನೋಡಿ ಬೆಚ್ಚಿಬೆದ್ದಿರುವ ಬಾಲಿವುಡ್ ಮಂದಿ ಈಗ ಮಾರ್ಟಿನ್​ ಮೇನಿಯಾ ಕೂಡ ಎದುರಿಸಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್​ನಲ್ಲಿ ಲಭ್ಯ

ಮಾರ್ಟಿನ್​​ ಅಬ್ಬರಕ್ಕೆ ದಾಖಲೆಗಳೆಲ್ಲಾ ಶೇಕ್​ ಶೇಕ್: ಹಾಲಿವುಡ್​ ರೇಂಜ್​ಗೆ ಟೀಸರ್​ ಔಟ್​​

https://newsfirstlive.com/wp-content/uploads/2023/02/martin-3.jpg

Load More