newsfirstkannada.com

ವರಮಹಾಲಕ್ಷ್ಮಿ ಹಬ್ಬದಂದೇ ಸಿಹಿಸುದ್ದಿ ಹಂಚಿಕೊಂಡ ಆ್ಯಕ್ಷನ್​ ಪ್ರಿನ್ಸ್​; 2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ-ಪ್ರೇರಣಾ ದಂಪತಿ

Share :

25-08-2023

  2ನೇ ಮಗುವಿನ ನಿರೀಕ್ಷೆ ಬಗ್ಗೆ ಬಹದ್ದೂರ್​ ಗಂಡು

  ಸಿಹಿ ಸುದ್ದಿ ಹಂಚಿಕೊಂಡ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ

  ವರಮಹಾಲಕ್ಷ್ಮಿಯಂದೇ ಶುಭ ಸುದ್ದಿ ಹೊತ್ತು ತಂದ ಮಾರ್ಟಿನ್​ ಹೀರೋ

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ವರಮಹಾಲಕ್ಷ್ಮಿ ಹಬ್ಬದಂದೇ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಸಾಲು ಸಿನಿಮಾಗಳಲ್ಲಿ ನಟನೆಯ ಜೊತೆಗೆ ಇದೀಗ 2ನೇ ಮಗುವಿನ ನಿರೀಕ್ಷೆ ಬಗ್ಗೆ ಬಹದ್ದೂರ್​ ಗಂಡು ಹೇಳಿಕೊಂಡಿದ್ದಾರೆ.

ನಾಡಿನಾದ್ಯಂತ ಜನರು ವರಮಹಾಲಕ್ಷ್ಮಿ ಹಬ್ಬದ ಸಂತಸದಲ್ಲಿದ್ದಾರೆ. ಈ ಶುಭ ದಿನದಂದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ತಂದೆಯಾಗುವ ಬಗ್ಗೆ ಹೇಳಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು ಕೈಯಲ್ಲಿ ಮೊದಲ ಮಗುವನ್ನು ಹಿಡಿದುಕೊಂಡು, ಜೊತೆಗೆ ಮಡದಿ ಪ್ರೇರಣಾ ಶಂಕರ್​ ಜೊತೆಗೆ ಪ್ಯಾರಾಚೂಟ್​ನಲ್ಲಿ ಹಾರಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ ‘ನಮ್ಮ ಸಂತೋಷಕ್ಕೆ ಮತ್ತೊಂದು ಸಣ್ಣ ಕಾಲ್ಬೆರಳು ಬರಲಿದೆ’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆಯೇ ಧ್ರುವ ಸರ್ಜಾ 2019ರಲ್ಲಿ ಪ್ರೇರಣಾ ಅವರನ್ನು ವಿವಾಹವಾದರು. 2022 ಅಕ್ಟೋಬರ್ 2ರಂದು ಮೊದಲ ಮಗುವಿಗೆ ಪೋಷಕರಾದರು. ಈಗಾಗಲೇ ಧ್ರುವ ಸರ್ಜಾ ಮತ್ತು ಪ್ರೇರಣಾಗೆ ಒಂದು ಹೆಣ್ಣು ಮಗು ಇದೆ. ಇದೀಗ ವರಮಹಾಲಕ್ಷ್ಮಿಯಂದೇ ಮತ್ತೊಂದು ಮಗುವಿನ ನಿರೀಕ್ಷೆ ಬಗ್ಗೆ ಹೇಳಿಕೊಂಡಿದ್ದಾರೆ.

ಧ್ರುವ ಸರ್ಜಾ ಸಿನಿಮಾ ವಿಚಾರಕ್ಕೆ ಬರೋದಾದ್ರೆ, ಆ್ಯಕ್ಷನ್​ ಪ್ರಿನ್ಸ್​ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ನಿಧಾನಗತಿಯಲ್ಲಿ ಸಿನಿಮಾ ಮಾಡುತ್ತಾ ಧ್ರುವ ತೆರೆಗೆ ಬರುತ್ತಿರುತ್ತಾರೆ. ಅಂದಹಾಗೆಯೇ ಧ್ರುವ ಸದ್ಯ ಜೋಗಿ ಪ್ರೇಮ್​ ಜೊತೆಗೆ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಪಿ ಅರ್ಜುನ್​ ಜೊತೆಗೆ ಮಾರ್ಟಿನ್​ ಸಿನಿಮಾದಲ್ಲಿ ಬಣ್ಣ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರಮಹಾಲಕ್ಷ್ಮಿ ಹಬ್ಬದಂದೇ ಸಿಹಿಸುದ್ದಿ ಹಂಚಿಕೊಂಡ ಆ್ಯಕ್ಷನ್​ ಪ್ರಿನ್ಸ್​; 2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ-ಪ್ರೇರಣಾ ದಂಪತಿ

https://newsfirstlive.com/wp-content/uploads/2023/08/Druva-sarja.jpg

Load More