ನೋಡುಗರ ಕಣ್ಮನ ಸೆಳೆಯುತ್ತಿದೆ ಈ ಅದ್ಭುತ ಡೈಮಂಡ್ ರಿಂಗ್
ಮಶ್ರೂಮ್ ಡಿಸೈನ್ನಂತೆ ಹೋಲುವ ಈ ಡೈಮಂಡ್ ರಿಂಗ್ ಬೆಲೆ ಎಷ್ಟು?
ಅಪರೂಪದ ಡೈಮಂಡ್ ರಿಂಗ್ ನೋಡಿ ಸಿಲಿಕಾನ್ ಸಿಟಿ ಮಂದಿ ಫುಲ್ ಫಿದಾ!
ಬೆಂಗಳೂರು: ಫಳಫಳ ಹೊಳೆಯುತ್ತಿರುವ ಫ್ಲವರ್. ಬೆಳ್ಳಿ, ಬಂಗಾರ, ವಜ್ರ, ಆಭರಣ ಅಂದ್ರೆ ಸಾಕು ನಮ್ಮ ಹೆಣ್ಣು ಮಕ್ಕಳು ಫುಲ್ ಆಕ್ಟಿವ್ ಆಗುತ್ತಾರೆ. ಅದರಲ್ಲೂ ಫಳಫಳನೆ ಹೊಳೆಯುವ ವಜ್ರಾಭರಣ ಅಂದ್ರೆ ಸಾಕು ಎಲ್ಲರೂ ಕಣ್ಣರಳಿಸಿ ನೋಡ್ತಾರೆ. ಹೀಗೆ ಇಲ್ಲೊಂದು ಡೈಮಂಡ್ ರಿಂಗ್ ಹೂವಿನೊಳಗೊಂದು ಫಳಫಳನೆ ಹೊಳೆಯುತ್ತಿದೆ. ಈ ರಿಂಗ್ ಮಶ್ರೂಮ್ ಡಿಸೈನ್ ಹೋಲುತ್ತೆ. ಈ ವಜ್ರದ ರಿಂಗ್ಗೆ ಒಂದಲ್ಲ ಎರಡಲ್ಲ ಬರೋಬ್ಬರಿ 24,679 ಡೈಮಂಡ್ ಸ್ಟೋನ್ ಬಳಸಿ ತಯಾರಿಸಲಾಗಿದೆ. ಆರು ತಿಂಗಳುಗಳ ಕಾಲ ಯಾವುದೇ ಕಂಪ್ಯೂಟರ್ ಸಹಾಯವಿಲ್ಲದೆ ನುರಿತ ವಜ್ರ ಕಲಾವಿದರಿಂದ ಇದು ರೂಪಗೊಂಡಿದೆ. ಈ ಕಾರಣಕ್ಕೆ ಡೈಮಂಡ್ ರಿಂಗ್ ವರ್ಲ್ಡ್ ಗಿನ್ನೀಸ್ ರೆಕಾರ್ಡ್ ಕೂಡ ಆಗಿದೆ.
ಇಂಥಹ ವಿಶೇಷ ಡೈಮಂಡ್ ರಿಂಗ್ ಕಂಡು ಬಂದಿದ್ದು ಸಿಲಿಕಾನ್ ಸಿಟಿಯ ಲುಲು ಮಾಲ್ನಲ್ಲಿ. ಸದ್ಯ ಈ ಡೈಮಂಡ್ ರಿಂಗ್ ಅನ್ನು ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ. ಲುಲು ಮಾಲ್‌ಗೆ ಬರುವವರು ಈ ಡೈಮೆಂಡ್ ರಿಂಗ್ ನೋಡಿ ಕಣ್ತುಂಬಿಕೊಳ್ಳಬಹುದು. ಇದು ಕೇವಲ ನೋಡಲು ಮಾತ್ರ ಲಭ್ಯ. ಮಾರಾಟಕ್ಕಿಲ್ಲ. ಇನ್ನು ಮೂರು ದಿನಗಳ ಕಾಲ ಈ ಡೈಮೆಂಡ್ ರಿಂಗ್ ಪ್ರದರ್ಶನಕ್ಕಿಡಲಾಗುತ್ತಿದೆ ಎಂದು ಅಂದಹಾಗೆ ಡೈಮೆಂಡ್ ಮ್ಯಾನೇಜರ್ ಹೇಳಿದ್ದಾರೆ. ಇಂತಹ ಅದ್ಭುತವಾಗಿರುವ ರಿಂಗ್ ಬೆಲೆ ಬರೋಬ್ಬರಿ ಒಂದು ಕೋಟಿಗೂ ಹೆಚ್ಚು. ದೇಶಿ ನಿರ್ಮಿತವಾದ ಈ ರಿಂಗ್ ಪೆಟಲ್ ಅನ್ನ ಕೂಡ ಪ್ರತ್ಯೇಕವಾಗಿ ತೆಗೆಯಲೂಬಹುದಂತೆ. ಇಲ್ಲಿಯವರೆಗೆ ದೇಶದ ಕೆಲ ಪ್ರಮುಖ ನಗರಗಳಲ್ಲಿ ಈ ಡೈಮೆಂಡ್ ಪ್ರದರ್ಶನಕ್ಕೆ ಇಡಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರದರ್ಶನಕ್ಕಿಡಲಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ