newsfirstkannada.com

Share :

04-06-2023

  ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರಲು ಸಜ್ಜಾದ ರೆಬೆಲ್ ಸ್ಟಾರ್ ಪುತ್ರ

  ಅಭಿಷೇಕ್ ಅಂಬರೀಶ್ ಕಲ್ಯಾಣಕ್ಕೆ ಕೌಂಟ್​ಡೌನ್ ಶುರು

  ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಸಿದ್ಧತೆ ಜೋರು

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರನ ಕಲ್ಯಾಣಕ್ಕೆ ಕೌಂಟ್​ಡೌನ್ ಶುರುವಾಗಿದ್ದು, ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರುತ್ತಿದ್ದಾರೆ ಅಭಿಷೇಕ್. ಜೆಪಿ ನಗರದಲ್ಲಿರುವ ಅಂಬಿ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರ, ಚಪ್ಪರ ಶಾಸ್ತ್ರ ಎಲ್ಲವೂ ಆರಂಭವಾಗಿದ್ದು, ಭರ್ಜರಿ ತಯಾರಿ ನಡೀತಿದೆ. ಅಷ್ಟಕ್ಕೂ ಅಭಿಷೇಕ್ ಮದುವೆ ಆಗ್ತಿರೋ ಅವಿವಾ ಬಿದ್ದಪ್ಪ ಯಾರು? ಇವರಿಬ್ಬರಿಗು ಪರಿಚಯ ಆಗಿದ್ದೆಲ್ಲಿ? ಈ ಕೂತುಹಲಕ್ಕೆ ಉತ್ತರ ಇಲ್ಲಿದೆ.

ಅಂಬಿ ಮನೆಯಲ್ಲಿ ಕಳೆಗಟ್ಟಿದ ಮದುವೆಯ ಸಂಭ್ರಮ!

ಅಭಿಷೇಕ್-ಅವಿವಾ ಐದು ವರ್ಷಗಳ ಪ್ರೀತಿ ಈಗ ಹಸೆಮಣೆ ಏರೋವರೆಗೂ ಬಂದಿದೆ. ಇನ್ನೇನು ಇನ್ನೆರಡು ದಿನ ಕಳೆದ್ರೆ ಅಭಿ-ಅವಿವಾ ಹೊಸ ಭರವಸೆಯೊಂದಿಗೆ ಹೊಸ ಬಾಳಿಗೆ ಕಾಲಿಡಲಿದ್ದಾರೆ. ಈಗಾಗಲೇ ಅಂಬಿ ಪುತ್ರನ ಮದುವೆಗೆ ಸಕಲ ತಯಾರಿಯೂ ನಡೀತಿದ್ದು, ಗೌಡರ ಸಂಪ್ರದಾಯದಂತೆ ಎಲ್ಲಾ ಶಾಸ್ತ್ರಗಳು ಆರಂಭವಾಗಿದೆ. ಜೆಪಿ ನಗರದಲ್ಲಿರುವ ಅಂಬರೀಶ್ ನಿಲಯದಲ್ಲಿ ಮದುವೆ ಸಂಭ್ರಮ ಜೋರೋ ಜೋರಾಗಿದೆ.

ಅಭಿಷೇಕ್ ವಿವಾಹ ಹಿನ್ನೆಲೆ ಅಂಬರೀಶ್ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಒಕ್ಕಲಿಗ ಸಂಪ್ರದಾಯದಂತೆ ನಡೆಯುತ್ತಿದ್ದು, ಕಳೆದ ಒಂದು ವಾರದಿಂದ ಅಂಬಿ ನಿಲಯದಲ್ಲಿ ಕುಟುಂಬಸ್ಥರು, ಸ್ನೇಹಿತರೆಲ್ಲ ಸೇರಿ ಮದುವೆ ಶಾಸ್ತ್ರಗಳನ್ನ ಆರಂಭಿಸಿದ್ದಾರೆ. ಅಂಬಿ ಮನೆ ಮುಂದೆ ಸುಮಾರು 80 ಅಡಿ ಅಗಲಕ್ಕೆ ತೆಂಗಿನಗರಿಗಳ ಚಪ್ಪರ ಹಾಕಲಾಗಿದ್ದು, ಭಾನುವಾರ ಬೆಳಗ್ಗೆ ಚಪ್ಪರ ಪೂಜೆ ಮಾಡಲಾಗುತ್ತದೆ. ಇನ್ನು ಶುಕ್ರವಾರ ಹಳದಿ ಮತ್ತು ಮೆಹಂದಿ ಶಾಸ್ತ್ರ ನಡೆದಿದ್ದು, ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ.

ರೆಬೆಲ್ ಸ್ಟಾರ್ ಅಂಬರೀಶ್ ಹಾಗು ಸುಮಲತ ದಂಪತಿಯ ಒಬ್ಬನೇ ಒಬ್ಬ ಮುದ್ದಿನ ಮಗ ಅಭಿಷೇಕ್. ವಿದೇಶದಲ್ಲಿ ಓದಿ ಬಂದ ಅಭಿಷೇಕ್ ಚಿತ್ರರಂಗದಲ್ಲಿ ಭವಿಷ್ಯ ಕಂಡುಕೊಳ್ಳಬೇಕು ಅನ್ನೋದು ಅಂಬಿ ಕನಸಾಗಿತ್ತು. ಅದರಂತೆ ‘ಅಮರ್’ ಅನ್ನೋ ರೊಮ್ಯಾಂಟಿಕ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ಅಪ್ಪನ ರೀತಿ ಖಡಕ್ ವಾಯ್ಸ್. ಖದರ್ ಆ್ಯಕ್ಟಿಂಗ್ ಮೂಲಕ ಭರವಸೆ ಮೂಡಿಸಿದ್ದಾರೆ. ಸದ್ಯ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಜೊತೆಗೆ ಇನ್ನು ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಅಭಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದು, ಹೊಸ ಜವಾಬ್ದಾರಿ ಹೊರುತ್ತಿದ್ದಾರೆ.

ಕಳೆದ ಡಿಸೆಂಬರ್​ನಲ್ಲಿ ಅವಿವಾ ಬಿದ್ದಪ್ಪ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಅಭಿಷೇಕ್ ಜೂನ್ 5ಕ್ಕೆ ಅಂದ್ರೆ ಬರುವ ಸೋಮವಾರ ಬೆಳಗ್ಗೆ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಮಾಣಿಕ್ಯ ಚಾಮರ ವಜ್ರದಲ್ಲಿ ಬೆಳಗ್ಗೆ 9.30ರಿಂದ 10.30ರ ಕರ್ಕಾಟಕ ಶುಭ ಲಗ್ನದ ಮುಹೂರ್ತದಲ್ಲಿ ಅವಿವಾ ಅವರಿಗೆ ಮಾಂಗಲ್ಯಧಾರಣೆ ಮಾಡಲಿದ್ದಾರೆ.

ಜೂನ್ 5ಕ್ಕೆ ಮುಹೂರ್ತ.. ಜೂನ್ 7ಕ್ಕೆ ಆರತಕ್ಷತೆ

ಜೂನ್ 5ಕ್ಕೆ ಅಭಿಷೇಕ್-ಅವಿವಾ ಮದುವೆ ನಡೆಯಲಿದೆ. ಅದಾದ ಎರಡನೇ ದಿನ ಅಂದ್ರೆ ಜೂನ್ 7ಕ್ಕೆ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯುವ ಅಂಬಿ ಪುತ್ರನ ಕಲ್ಯಾಣಕ್ಕೆ ಸಾಕಷ್ಟು ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಸುಮಲತಾ ಅಂಬರೀಶ್ ಸಂಸದರಾಗಿರುವ ಕಾರಣ ಕೇಂದ್ರದ ನಾಯಕರು ಹಾಗೂ ಹಲವು ಸಂಸದರು ಈ ಮದುವೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಭಿಷೇಕ್ ಮದುವೆ ಆಮಂತ್ರಣ ಕೊಟ್ಟಿದ್ದು, ಮೋದಿ ಬರುವ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಇನ್ನು ಕರ್ನಾಟಕ ಸಿಎಂ ಸಿದ್ದರಾಮಯ್ಯ ಸೇರಿ ಕರ್ನಾಟಕದ ಹಲವು ರಾಜಕಾರಣಿಗಳು ಅಭಿ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

ಇನ್ನು ಅಂಬರೀಶ್ ಸ್ನೇಹಜೀವಿ. ಅಂಬಿಗೆ ಕನ್ನಡ ಇಂಡಸ್ಟ್ರಿ ಮಾತ್ರವಲ್ಲ ಬೇರೆ ಬೇರೆ ಇಂಡಸ್ಟ್ರಿಯಲ್ಲೂ ಆಪ್ತ ಸ್ನೇಹಿತರಿದ್ದರು. ಹಾಗಾಗಿ, ಸೂಪರ್ ಸ್ಟಾರ್ ರಜನಿಕಾಂತ್, ನಾಗಾರ್ಜುನ್, ಚಿರಂಜೀವಿ, ಮೋಹನ್ ಬಾಬು, ಶತ್ರುಜ್ಞ ಸಿನ್ಹಾ ಸೇರಿ ಹಲವು ತಾರೆಯರ ಅಂಬಿ ಪುತ್ರನ ವಿವಾಹ ಮಹೋತ್ಸವಕ್ಕೆ ಬರುವ ನಿರೀಕ್ಷೆ ಇದೆ.

ಮಂಡ್ಯ ಜನರಿಗೆ ವಿಶೇಷ ಆತಿಥ್ಯ!

ಅಂಬರೀಶ್ ಆಗ್ಲಿ ಅಭಿಷೇಕ್ ಮತ್ತು ಸುಮಲತಾ ಅವರಾಗ್ಲಿ ಮಂಡ್ಯ ಮತ್ತು ಮಂಡ್ಯ ಜನರನ್ನ ಬಹಳ ವಿಶೇಷವಾಗಿ ಕಾಣ್ತಾರೆ. ಹಾಗ್ನೋಡಿದ್ರೆ ಅಭಿಷೇಕ್ ವಿವಾಹ ಮಂಡ್ಯದಲ್ಲೇ ಆಗುತ್ತೆ ಎಂಬ ನಿರೀಕ್ಷೆ ಇತ್ತು. ಆದ್ರೆ ವೈಯಕ್ತಿಕ ಕಾರಣಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದೆ. ಆದರೂ ಮಂಡ್ಯ ಜನರನ್ನ ಮರೆಯದ ಅಂಬಿ ಕುಟುಂಬದ ಮಂಡ್ಯ ಅಭಿಮಾನಿಗಳಿಗಾಗಿ ವಿಶೇಷ ಆತಿಥ್ಯ ಕೊಡೋಕೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಮದುವೆ ಮತ್ತು ಆರತಕ್ಷತೆ ಮುಗಿಸಿ ಜೂನ್ 17ಕ್ಕೆ ಮಂಡ್ಯದಲ್ಲಿ ಬೀಗರ ಊಟ ಹಾಕಿಸೋಕೆ ಸಿದ್ಧತೆ ನಡೆಸಿದೆ. ಇದರೊಂದಿಗೆ ಅಪ್ಪನ ಆಸೆಯೂ ನೆರವೇರಬೇಕು, ಮಂಡ್ಯ ಜನರ ಅಭಿಮಾನಕ್ಕೆ ಗೌರವ ಕೊಡಬಹುದು ಅನ್ನೋ ಉದ್ದೇಶ.

ಸುಮಲತಾ ಸೊಸೆ ಆಗ್ತಿರೋ ಅವಿವಾ ಹಿನ್ನೆಲೆ ಏನು?

ಅಭಿಷೇಕ್ ಕೈ ಹಿಡೀತಿರೋ ಅವಿವಾ ಬಿದ್ದಪ್ಪ ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅನ್ನೋದು ಗೊತ್ತಿರೋ ಸಮಾಚಾರ. ಇದನ್ನ ಬಿಟ್ಟು ಅವಿವಾ ಯಾರು? ಏನು ಎಜುಕೇಶನ್ ಮಾಡಿದ್ದಾರೆ? ಅಭಿಷೇಕ್​ಗೆ ಯಾವಾಗ ಪರಿಚಯ ಆದ್ರು ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರಲ್ಲ. ಹಾಗಾಗಿ ಅವಿವಾ ಅವರ ಪೂರ್ಣ ಹಿನ್ನೆಲೆ ಏನು ಅಂತ ತಿಳ್ಕೊಂಡ್ರು ನಿಜಕ್ಕೂ ನೀವು ಬೆರಗಾಗ್ತೀರಾ.

ಖ್ಯಾತ ಪ್ಯಾಷನ್ ಡಿಸೈನರ್ ಮಗಳು

ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಸಹ ಖ್ಯಾತ ಪ್ಯಾಷನ್ ಡಿಸೈನರ್. ಓರ್ವ ಮಾಡೆಲ್ ಹಾಗೂ ನಟಿಯೂ ಹೌದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬ್ಯುಸ್ನೆಸ್ ವುಮನ್ ಇವ್ರು. 17ನೇ ವಯಸ್ಸಿನಲ್ಲಿಯೇ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಅವಿವಾ ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. 1982ರಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿನ್ನರ್ ಆಗಿದ್ದು, ಫೆಮಿನಾ ಮಿಸ್ ವರ್ಲ್ಡ್ ಕಾಂಪಿಟೇಷನ್ನಲ್ಲಿ ಭಾಗಿಯಾಗಿ ಟಾಪ್ 10ನಲ್ಲಿ ಬಂದಿದ್ದರು. ಅವಿವಾ ಬಿದ್ದಪ್ಪ ಹಲವು ಅಂತಾರಾಷ್ಟ್ರೀಯ ಕಂಪನಿಗಳ ಜೊತೆ ಟೈ-ಅಪ್ ಆಗಿದ್ದು, ಈಗಲೂ ಕೆಲಸ ಮಾಡ್ತಿದ್ದಾರೆ. ಮಾಡಲಿಂಗ್ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿರುವ ಅವಿವಾ ತಮ್ಮದೇ ಹೆಸರಿನಲ್ಲಿ ಸ್ವಂತ ಸ್ವಿಮ್ ಸೂಟ್ ಹೊಂದಿದ್ದಾರೆ.

ಬಹಳಷ್ಟು ಜನರಿಗೆ ಗೊತ್ತಿಲ್ಲದ ಸಂಗತಿ ಏನಪ್ಪ ಅಂದ್ರೆ ಅವಿವಾ ಬಿದ್ದಪ್ಪ ನಟಿಯೂ ಹೌದು. 2013ರಲ್ಲಿ ತೆರೆಕಂಡ ಅಲೆ ಎನ್ನುವ ಚಿತ್ರದಲ್ಲಿ ಇಬ್ಬರು ನಾಯಕಿಯರ ಪೈಕಿ ಒಬ್ಬರಾಗಿ ನಟಿಸಿದ್ದಾರೆ. ಈ ಸಿನಿಮಾ ನಂತರ ಮತ್ಯಾವುದೇ ಚಿತ್ರದಲ್ಲೂ ಅವಿವಾ ನಟಿಸಿರುವ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಸಿನಿಮಾ ಇಂಡಸ್ಟ್ರಿಯಲ್ಲೂ ಅವಿವಾ ಬಿದ್ದಪ್ಪ ಅವರಿಗೆ ಬಹಳಷ್ಟು ಸ್ನೇಹಿತರಿದ್ದಾರೆ.

ಅಭಿಗೆ ಪರಿಚಯ ಆಗಿದ್ದು ಎಲ್ಲಿ?

ಪ್ಯಾಷನ್ ಲೋಕದ ಅವಿವಾ ಬಿದ್ದಪ್ಪಗೂ ಸಿನಿಮಾ ಕುಟುಂಬದ ಅಭಿಷೇಕ್ಗೂ ಪರಿಚಯ ಆಗಿದ್ದೆಲ್ಲಿ ಅಂತ ಕೇಳಿದ್ರೆ ಅದಕ್ಕೆ ಉತ್ತರ ಲಂಡನ್. ಅಭಿಷೇಕ್ ಲಂಡನ್ನಲ್ಲಿ ಎಜುಕೇಷನ್ ಮಾಡ್ತಿದ್ರು ಅನ್ನೋದು ಗೊತ್ತಿರೋ ಸಂಗತಿ. ಇನ್ನು ಅವಿವಾ ಕೂಡ ಲಂಡನ್ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಡ್ರಾಮಾಟಿಕ್ ಆರ್ಟ್​​ನಲ್ಲಿ ಪದವಿ ಮಾಡಿದ್ದು, ಇವರಿಬ್ಬರಿಗೂ ಭೇಟಿ ಆಗಿದ್ದು ಇಲ್ಲಿಯೇ ಎನ್ನಲಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

Load More