newsfirstkannada.com

ಐ ಆ್ಯಮ್​ ಸಾರಿ ವಿರಾಟ್​​ ಕೊಹ್ಲಿ ಸಾರ್! ಕೊನೆಗೂ ನವೀನ್​ ಉಲ್​ ಹಕ್​​ಗೆ ತಪ್ಪಿನ ಅರಿವಾಯ್ತಾ?

Share :

26-05-2023

    ಟ್ರೋಲ್​ ಆದ್ರು ನವೀನ್​ ಉಲ್​ ಹಕ್​

    ಕೊನೆಗೂ ನವೀನ್​ ಉಲ್​ ಹಕ್​​ಗೆ ತಪ್ಪಿನ ಅರಿವಾಯ್ತಾ?

    ಐ ಆ್ಯಮ್​ ಸಾರಿ ವಿರಾಟ್​​ ಕೊಹ್ಲಿ ಸಾರ್ ಅಂದ್ರಾ ನವೀನ್​

ಮುಂಬೈ ವಿರುದ್ಧದ ಎಲಿಮಿನೇಟ್​ ಪಂದ್ಯದಲ್ಲಿ ಲಕ್ನೋ ಸೋತು ಸಪ್ಪೆ ಮೋರೆ ಹಾಕಿದ್ದೇ ತಡ ನವೀನ್​ ಉಲ್​ ಹಕ್​ ಸಿಕ್ಕಾಪಟ್ಟೆ ಟ್ರೋಲ್​ ಅಗಿ ಬಿಟ್ರು. ಆರ್​ಸಿಬಿ ಫ್ಯಾನ್ಸ್​ಗಂತೂ ಈ ಸಂಗತಿ ಸಂತಸಕ್ಕೆ ಕಾರಣವಾಯ್ತು. ಕೊಹ್ಲಿ ಕೆಣಕ್ಕಿದ್ದ ನವೀನ್​ ಅವರನ್ನು ಸ್ವೀಟ್​ ಮ್ಯಾಂಗೋ, ಮ್ಯಾಂಗೋ ನವೀನ್​ ಎಂದು ಯರ್ರಾ ಬಿರ್ರಿ ಟ್ರೋಲಿಗರು ಟ್ರೋಲ್​ ಮಾಡಿದರು. ಆದರೆ ಅದರ ಬೆನ್ನಲ್ಲೇ ನವೀನ್​ ಉಲ್​ ಹಕ್ ಎಂಬ ಖಾತೆಯಿಂದ​ ‘ಐ ಆ್ಯಮ್​ ಸಾರಿ ವಿರಾಟ್​​ ಕೊಹ್ಲಿ ಸಾರ್​‘ ಎಂಬ ಟ್ವೀಟ್​ವೊಂದು ವೈರಲ್​ ಆಗಿದೆ. ಆದರೆ ನಿಜವಾಗಿಯೂ ನವೀನ್​ ಉಲ್​-ಹಕ್​ ವಿರಾಟ್​​ಗೆ ಕ್ಷಮಾಪಣೆ ಕೇಳಿದ್ರಾ? ಏನಿದು ಘಟನೆ? ನೋಡೋಣ.

ಏನಿದು ಘಟನೆ?

ಆರ್​ಸಿಬಿ ಮತ್ತು ಲಕ್ನೋ ಪಂದ್ಯದ ವೇಳೆ ಕೊಹ್ಲಿ ಮತ್ತು ನವೀನ್​ ಉಲ್​ ಹಕ್​ ನಡುವೆ ಘರ್ಷಣೆ ಏರ್ಪಟ್ಟಿತ್ತು. ಈ ಪಂದ್ಯ ಮುಗಿದ ಬಳಿಕವೂ ನವೀನ್​ ಮತ್ತು ಕೊಹ್ಲಿ ನಡುವೆ ಮಾತುಕತೆ ನಡೆಯಿತು. ಈ ವೇಳೆ ನವೀನ್​ ಜೊತೆಗೆ ಗಂಭೀರ್​ ಎಂಟ್ರಿ ಕೊಟ್ಟಿರುವುದು ಕೂಡ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ನಂತರ ಮುಂಬೈ ಇಂಡಿಯನ್ಸ್​ ಮತ್ತು ಆರ್​ಸಿಬಿ ಪಂದ್ಯದ ವೇಳೆ ನವೀನ್​ ಉಲ್​ ಹಕ್​ ಮ್ಯಾಂಗೋ ಹಣ್ಣ ಸೇವಿಸುತ್ತಾ ಮುಂಬೈ ಬೌಲರ್​ ಪಿಯುಷ್​ ಚಾವ್ಲಾನನ್ನು ಹೊಗಳಿದ್ದರು. ಮಾತ್ರವಲ್ಲದೆ ಮ್ಯಾಂಗೋ ಹಣ್ಣಿನ ಫೋಟೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಈ ಪಂದ್ಯದಲ್ಲಿ ಆರ್​ಸಿಬಿ ಸೋತಿದ್ದಲ್ಲದೆ, ನವೀನ್​ ಹಂಚಿಕೊಂಡ ಪೋಸ್ಟ್​ ಆರ್​ಸಿಬಿ ಫ್ಯಾನ್ಸ್​ ಬೇಸರಕ್ಕೆ ಮತ್ತೆ ಕಾರಣವಾಗಿತು.

ಟ್ರೋಲ್​ ಆದ್ರು ನವೀನ್​ ಉಲ್​ ಹಕ್​

ಮೇ 24ರಂದು ಎಲಿಮಿನೀಟ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಲಕ್ನೋ ತಂಡವನ್ನ ಸೋಲಿಸಿದೆ. 81 ರನ್​ಗಳ ಭರ್ಜರಿ ಜಯದೊಂದಿಗೆ ರೋಹಿತ್​ ಪಡೆ ಲಕ್ನೋ ತಂಡವನ್ನು ಹಿಮ್ಮೆಟ್ಟಿಸಿದೆ. ಈ ಪಂದ್ಯದ ಬಳಿಕ ಅಂದು ಕೊಹ್ಲಿನಾ ಕೆಣಕಿದ ನವೀನ್​ ಉಲ್​ ಹಕ್ ಅನ್ನು ಚೆನ್ನಾಗಿ ಟ್ರೋಲ್​ ಮಾಡಲು ಪ್ರಾರಂಭಿಸಿದರು.

ಕೊಹ್ಲಿ ಜೊತೆ ನವೀನ್​ ಸಾರಿ ಕೇಳಿದ್ದು ನಿಜಾನಾ?

‘ಐ ಆ್ಯಮ್​ ಸಾರಿ ವಿರಾಟ್​​ ಕೊಹ್ಲಿ ಸಾರ್​’ ಎಂಬ ಟ್ವೀಟ್​ ಈಗ ವೈರಲ್​ ಆಗಿದೆ. ಆದರೆ ಇದು ನಕಲಿ ಖಾತೆಯಿಂದ ಹೊರಬಿದ್ದ ಟ್ವೀಟ್​​ ಆಗಿದ್ದು, ನವೀನ್​ ಉಲ್​ ಹಕ್​ ಅಧಿಕೃತ ಖಾತೆ ಬೇರೆಯೇ ಇದೆ. ಯಾರೋ ನವೀನ್​ ಉಲ್​ ಹಕ್​ ಹೆಸರಿನಲ್ಲಿ ನಕಲಿ ಖಾತೆ ತೆರೆದು. ಕ್ಷಮಾಪಣೆ ಕೇಳುವ ಟ್ವೀಟ್​ ಅನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಟ್ವೀಟ್​ ಕೂಡ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಐ ಆ್ಯಮ್​ ಸಾರಿ ವಿರಾಟ್​​ ಕೊಹ್ಲಿ ಸಾರ್! ಕೊನೆಗೂ ನವೀನ್​ ಉಲ್​ ಹಕ್​​ಗೆ ತಪ್ಪಿನ ಅರಿವಾಯ್ತಾ?

https://newsfirstlive.com/wp-content/uploads/2023/05/Kohli-Naveen-Ul-Haq.jpg

Load More