newsfirstkannada.com

ರಾಜ್ಯದಲ್ಲಿ ಸೈಲೆಂಟ್ ಆಪರೇಷನ್ ‘ಗ್ಯಾರಂಟಿ’; ಬಜೆಟ್ ದಿನವೇ ಬಾಂಬ್ ಸಿಡಿಸಿ ಸಿದ್ದು ಸರ್ಕಾರಕ್ಕೆ ಶಾಕ್ ಕೊಟ್ಟ ಮುನಿರತ್ನ!

Share :

07-07-2023

    ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಆಪರೇಷನ್ ಕಮಲದ ಎಚ್ಚರಿಕೆ

    ಚುನಾವಣೆಯಲ್ಲಿ ಗೆದ್ದಿರೋ 135 ಶಾಸಕರಲ್ಲಿ ಸಿದ್ದು ಬಣದಲ್ಲಿ 98 ಮಂದಿ

    ಸಿದ್ದು ಆಪ್ತ 98 ರಲ್ಲಿ 30 ಜನರ ಆಪರೇಷನ್ ಈಗಾಗಲೇ ಆಗಿ ಹೋಗಿದೆ

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇವತ್ತು 2023-24ನೇ ಸಾಲಿನ ಮಹತ್ವದ ಬಜೆಟ್ ಮಂಡಿಸಿದೆ. ಈ ಮೂಲಕ ಚುನಾವಣೆಗೂ ರಾಜ್ಯದ ಜನತೆಗೆ ಕೊಟ್ಟ ಗ್ಯಾರಂಟಿ ಭರವಸೆಯನ್ನು ಈಡೇರಿಸೋ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಸಂಪನ್ಮೂಲದ ಕೊರತೆ, ಆರ್ಥಿಕತೆಯ ಬಿಕ್ಕಟ್ಟು ಎದುರಾದ್ರೂ ಬಹುಮತಕ್ಕೇನೂ ಅಡ್ಡಿಯಿಲ್ಲ. ಸುಭದ್ರ ಸರ್ಕಾರದ ಇಂತಹ ಸಂದರ್ಭದಲ್ಲೂ ಆಪರೇಷನ್ ಕಮಲದ ಬಗ್ಗೆ ಚರ್ಚೆಯಾಗಿದೆ. ಮಾಜಿ ಸಚಿವ ಮುನಿರತ್ನ ಅವರು ಬಜೆಟ್ ದಿನವೇ ಹೊಸ ಬಾಂಬ್ ಸಿಡಿಸಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ.

ಇವತ್ತು ಬಜೆಟ್ ಅಧಿವೇಶನದ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೀತು. ಈ ವೇಳೆ ಕಾಂಗ್ರೆಸ್ ಶಾಸಕರಿಗೆ ಬುದ್ಧಿವಾದ ಹೇಳಿದ ಮುಖ್ಯಮಂತ್ರಿ, ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡಬಹುದು. ಪ್ರತಿಪಕ್ಷಗಳು ನಡೆಸುವ ಟ್ರ್ಯಾಪ್‌ಗೆ ಯಾರೂ ಬಲಿಯಾಗಬೇಡಿ. ಗ್ಯಾರಂಟಿ ಯೋಜನೆಗಳ ಕಾರಣ ವಿಶೇಷ ಅನುದಾನ ಕೇಳಬೇಡಿ. ಇನ್ನು ಎಂಟು ತಿಂಗಳು ವಿಶೇಷ ಅನುದಾನ ಕೊಡುವುದು ಕಷ್ಟಸಾಧ್ಯ. ಎಲ್ಲರೂ ಇದಕ್ಕೆ ಸಹಕಾರ ನೀಡಿ ಎಂದು ಖಡಕ್ ಸೂಚನೆಯನ್ನು ನೀಡಿದ್ದರು.

ಇದನ್ನೂ ಓದಿ: ಬಜೆಟ್‌ಗೂ ಮುನ್ನ ಕಾಂಗ್ರೆಸ್ ಶಾಸಕರಿಗೆ ಬಿಸಿ ಮುಟ್ಟಿಸಿದ ಸಿಎಂ; ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ ಮೇಲೆ ಆಪರೇಷನ್ ಬಗ್ಗೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗಿದೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಬಿಜೆಪಿ ನಾಯಕರು ಸಿಎಂ ಆರೋಪವನ್ನ ತಳ್ಳಿ ಹಾಕಿದ್ದಾರೆ. ಆದರೆ ಮಾಜಿ ಸಚಿವ ಮುನಿರತ್ನ ಅವರು ಹೊಸ ಬಾಂಬ್ ಸಿಡಿಸುವ ಮೂಲಕ ಆಪರೇಷನ್ ಆರೋಪಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು ಸಿಎಂ ಸಿದ್ದರಾಮಯ್ಯನವರು ಏನ್ ಹೇಳಿದ್ದಾರೆ ಆಪರೇಷನ್ ಕಮಲ ಮಾಡಬಹುದು ಅಂತಾ. ಸದ್ಯಕ್ಕೆ ಆ ಆಲೋಚನೆ ಏನು ನಾವು ಮಾಡಿಲ್ಲ. ಆದರೆ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲದೆ ಕಾಂಗ್ರೆಸ್‌ನಲ್ಲೇ ಕಾಂಗ್ರೆಸ್‌ ಒಂದು ಆಪರೇಷನ್ ಮಾಡ್ತಾ ಇದೆ. ಕಾಂಗ್ರೆಸ್‌ನಲ್ಲಿ ಆಪರೇಷನ್ ನಡೀತಾ ಇದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಇರೋ 135 ಶಾಸಕರಲ್ಲಿ ಸಿಎಂ ಸಿದ್ದರಾಮಯ್ಯ ಬಣದಲ್ಲಿ 98 ಮಂದಿ ಇದ್ದಾರೆ. ಆ 98ರಲ್ಲಿ 30 ಜನರ ಆಪರೇಷನ್ ಈಗಾಗಲೇ ಆಗಿ ಹೋಗಿದೆ. ಇದನ್ನ ನಾವು ಮಾಡೋದಲ್ಲ, ಅಲ್ಲೇ ಆಪರೇಷನ್ ನಡೀತಾ ಇದೆ. ಸಿದ್ದರಾಮಯ್ಯ ಜೊತೆ ಇರುವ 30 ಕಾಂಗ್ರೆಸ್‌ ಶಾಸಕರನ್ನ ಈಗಾಗಲೇ ಆಪರೇಷನ್ ಮಾಡಿ ಆಗಿದೆ. ಎರಡು ಕಾಂಗ್ರೆಸ್‌ನಲ್ಲಿ ಒಂದು ಕಾಂಗ್ರೆಸ್‌ನ ಆಪರೇಷನ್ ಈಗಾಗಲೇ ಶುರುವಾಗಿದೆ ಅದರಲ್ಲೇನೂ ಅನುಮಾನವೇ ಇಲ್ಲ ಎಂದು ಮುನಿರತ್ನ ಹೇಳಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ.

ಇನ್ನು, ಮುನಿರತ್ನ ಅವರ ಮಾತಿಗೆ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರು ದನಿಗೂಡಿಸಿದ್ದಾರೆ. ನಾವಂತೂ ಆಪರೇಷನ್ ಕಮಲಕ್ಕೆ ಕೈ ಹಾಕಲ್ಲ. ಸಿಎಂ ಸಿದ್ದರಾಮಯ್ಯನವರಿಗೆ 75 ವರ್ಷ ವಯಸ್ಸಾಗಿದ್ದು ಎಕ್ಸ್‌ಪೈರಿ ಡೇಟ್ ಮುಗಿದಿದೆ. ಅವರೇ ಹತಾಶರಾಗಿ ಹೀಗೆಲ್ಲಾ ಮಾತಾಡುತ್ತಿದ್ದಾರೆ. ಅವರಾಗಿ ಅವರೇ ಕೈ ಚೆಲ್ಲಿದಾಗ ನೋಡೋಣ ಅನ್ನೋ ಮೂಲಕ ರಾಜ್ಯ ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು ಅನ್ನೋ ಸುಳಿವು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಜ್ಯದಲ್ಲಿ ಸೈಲೆಂಟ್ ಆಪರೇಷನ್ ‘ಗ್ಯಾರಂಟಿ’; ಬಜೆಟ್ ದಿನವೇ ಬಾಂಬ್ ಸಿಡಿಸಿ ಸಿದ್ದು ಸರ್ಕಾರಕ್ಕೆ ಶಾಕ್ ಕೊಟ್ಟ ಮುನಿರತ್ನ!

https://newsfirstlive.com/wp-content/uploads/2023/07/Munirathana-Siddaramaiah.jpg

Load More