2023ರ ವಿಶ್ವಕಪ್‌ನಲ್ಲಿ ರಾಜ - ಯುವರಾಜನ ದರ್ಬಾರ್
ಐದೈದು ಶತಕ ಸಿಡಿಸಿ ಕೊಹ್ಲಿ - ಶುಭ್ಮನ್ ಮಿಂಚು
ಗುರು-ಶಿಷ್ಯರು ಜೊತೆಯಾಗಿ ನಿಂತ್ರೆ ಬ್ರೇಕ್ ಹಾಕೋದು ಕಷ್ಟ
ವಿರಾಟ್ ಕೊಹ್ಲಿ – ಶುಭ್ಮನ್ ಗಿಲ್. ವಿಶ್ವದ ಖತರ್ನಾಕ್ ಬೌಲರ್ಸ್ ಎನಿಸಿಕೊಂಡರೂ ಕೂಡ ಇವರಿಬ್ಬರ ಮುಂದೆ ಸೈಲೆಂಟ್ ಆಗಿದ್ದಾರೆ. ಈ ವರ್ಷದಲ್ಲಿ ಕಿಂಗ್ & ಪ್ರಿನ್ಸ್ ಆರ್ಭಟ ಹಂಗಿದೆ. ಸೆಂಚುರಿ ಸ್ಟಾರ್ಗಳಾಗಿ ಮೆರೆದಾಡ್ತಿರೋ ಇವ್ರು, ರನ್ಭೂಮಿಯಲ್ಲಿ ಅಕ್ಷರಶಃ ದರ್ಬಾರ್ ನಡೆಸ್ತಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಬ್ಯಾಟ್ ಸೈಡಿಗಿಟ್ಟು ವರ್ಷಗಳೇ ಉರುಳಿವೆ. ಆದ್ರೂ, ವಿಶ್ವ ಕ್ರಿಕೆಟ್ ಲೋಕದಲ್ಲಿ ನಡಿತಿರೋದು ಭಾರತೀಯರ ದರ್ಬಾರ್. 24 ವರ್ಷಗಳ ಕಾಲ ಅನಭಿಷಿಕ್ತ ದೊರೆಯಾಗಿ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಲೋಕವನ್ನ ಆಳಿದ್ರು. ಆ ಬಳಿಕ ಸಿಂಹಾಸನಕ್ಕೇರಿದ್ದು ಕಿಂಗ್ ಕೊಹ್ಲಿ.. ಈಗಲೂ ಕಿಂಗ್ ಕೊಹ್ಲಿಯ ಆಳ್ವಿಕೆಯೇ ನಡೀತಾ ಇರೋದು. ಆದ್ರೆ, ಕೊಹ್ಲಿ ಜೊತೆಗೆ ಪ್ರಿನ್ಸ್ ಶುಭ್ಮನ್ ದರ್ಬಾರ್ ಶುರುವಿಟ್ಟುಕೊಂಡಿದ್ದಾರೆ.
2023ರಲ್ಲಿ ರಾಜ – ಯುವರಾಜನ ದರ್ಬಾರ್.!
ಕಿಂಗ್ – ಪ್ರಿನ್ಸ್ ಭರ್ಜರಿ ಆಟ, ಎದುರಾಳಿಗಳಿಗೆ ನಡುಕ.!
ಯಾರೇನೇ ಹೇಳಿ.. 2023ನೇ ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯನ್ಸ್ ಡ್ರೀಮ್ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಎಲ್ಲದರಲ್ಲೂ ನಮ್ದೇ ಆರ್ಭಟ. ಅದ್ರಲ್ಲೂ, ಏಕದಿನದಲ್ಲಿ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಅಂತೂ ನೆಕ್ಸ್ಟ್ ಲೆವೆಲ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಕಿಂಗ್ & ಪ್ರಿನ್ಸ್ ದರ್ಬಾರ್ ಮುಂದೆ ಎದುರಾಳಿಗಳೆಲ್ಲಾ ಸೈಲೆಂಟ್ ಆಗಿದ್ದಾರೆ.
21 ಇನ್ನಿಂಗ್ಸ್
5 ಸೆಂಚುರಿ
ಕೊಹ್ಲಿ ರಣಕೇಕೆ
2023ರಲ್ಲಿ ವಿರಾಟ್ ಕೊಹ್ಲಿಯನ್ನ ಕಟ್ಟಿ ಹಾಕೋರೆ ಇಲ್ಲದಂತಾಗಿದೆ. ವಿಶ್ವಕಪ್ನಂತ ಬಿಗ್ಸ್ಟೇಜ್ನಲ್ಲೂ ಘರ್ಜಿಸ್ತಾ ಇರೋ ಕೊಹ್ಲಿ, ಪ್ರತಿ ಪಂದ್ಯದಲ್ಲೂ ಹಸಿದ ಹುಲಿಯಂತೆ ರನ್ಗಳಿಸ್ತಿದ್ದಾರೆ. ಸೆಂಚುರಿಯನ್ನ ನೀರು ಕುಡಿದಷ್ಟೇ ಸುಲಭಕ್ಕೆ ಕಂಪ್ಲೀಟ್ ಮಾಡ್ತಿರೋ ಕಿಂಗ್, ಈ ವರ್ಷದಲ್ಲಿ ಬರೋಬ್ಬರಿ 5 ಏಕದಿನ ಶತಕ ದಾಖಲಿಸಿದ್ದಾರೆ. ಅದೂ ಜಸ್ಟ್ 21 ಇನ್ನಿಂಗ್ಸ್ಗಳಲ್ಲಿ..
26 ಇನ್ನಿಂಗ್ಸ್
5 ಸೆಂಚುರಿ
ಶುಭ್ಮನ್ ಶೈನಿಂಗ್
ಯಂಗ್ಗನ್ ಶುಭ್ಮನ್ ಗಿಲ್, ಕೊಹ್ಲಿಗಿಂತ ನಾನೇನು ಕಡಿಮೆಯಿಲ್ಲ ಎಂಬಂತೆ ಬ್ಯಾಟ್ ಬೀಸಿದ್ದಾರೆ. ಈ ವರ್ಷದಲ್ಲಿ ಆಡಿದ 26 ಇನ್ನಿಂಗ್ಸ್ಗಳಲ್ಲೇ ಶುಭ್ಮನ್ ಶೈನ್ ಆಗಿದ್ದಾರೆ. 5 ಏಕದಿನ ಸೆಂಚುರಿಗಳನ್ನ ಚಚ್ಚಿ, ಪ್ರಿನ್ಸ್ ಪಟ್ಟವನ್ನ ಕಬ್ಜ ಮಾಡಿದ್ದಾರೆ. ಶುಭ್ಮನ್ ಆಟಕ್ಕೆ ಎಲ್ಲರೂ ಉಘೇ ಉಘೇ ಅಂತಿದ್ದಾರೆ.
ರನ್ಗಳಿಕೆಯಲ್ಲಿ ಗುರು-ಶಿಷ್ಯರದ್ದೇ ಆರ್ಭಟ.!
ಸೆಂಚುರಿ ಲೆಕ್ಕಾಚಾರ ಮಾತ್ರವಲ್ಲ.. ಈ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ – ಗಿಲ್ದೇ ಹವಾ. ಶುಭ್ಮನ್ ಗಿಲ್ 26 ಇನ್ನಿಂಗ್ಸ್ಗಳಲ್ಲಿ 63ರ ಸರಾಸರಿಯಲ್ಲಿ 1449 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಆಡಿದ 21 ಇನ್ನಿಂಗ್ಸ್ಗಳಲ್ಲೇ 72.18ರ ಸರಾಸರಿಯಲ್ಲಿ 1155 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.
ಜೊತೆಯಾಗಿ ನಿಂತರೆ ಬ್ರೇಕ್ ಹಾಕೋದು ಕಷ್ಟ.. ಕಷ್ಟ.!
ವಿರಾಟ್ ಕೊಹ್ಲಿ – ಶುಭ್ಮನ್ ಗಿಲ್ ಅಖಾಡದಲ್ಲಿ ತೊಡೆ ತಟ್ಟಿ ನಿಂತರೆ ಬ್ರೇಕ್ ಹಾಕೋದು ನಿಜಕ್ಕೂ ಸವಾಲಿನ ಕೆಲಸ. ಇಬ್ಬರೂ ಕ್ರೀಸ್ನಲ್ಲಿ ಜೊತೆಯಾದ್ರೆ, ಪಾರ್ಟನರ್ಶಿಪ್ ಬ್ರೇಕ್ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಈ ವರ್ಷದಲ್ಲಿ ಆಡಿದ 13 ಪಂದ್ಯದಿಂದ ಈ ಜೋಡಿ 517 ರನ್ಗಳ ಜೊತೆಯಾಟವಾಡಿದೆ. ವಿಶ್ವಕಪ್ ಮಹಾ ಸಮರದಲ್ಲೂ ಕಿಂಗ್ & ಪ್ರಿನ್ಸ್ ಸಾಲಿಡ್ ಪ್ರದರ್ಶನವನ್ನ ನೀಡ್ತಿದ್ದಾರೆ. ಜವಾಬ್ದಾರಿಯನ್ನ ಅರಿತು ಬ್ಯಾಟಿಂಗ್ ನಡೆಸ್ತಿರೋ ಈ ಜೋಡಿ ಉಳಿದ ಪಂದ್ಯಗಳಲ್ಲೂ ಘರ್ಜಿಸಲಿ. ವಿಶ್ವಕಪ್ ನಮ್ಮದಾಗಲಿ ಅನ್ನೋದೆ ಎಲ್ಲರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ