newsfirstkannada.com

×

ವಿಜಯದಶಮಿ ಮತ್ತು ದಸರಾಗೆ ಇದೆ ವ್ಯತ್ಯಾಸ.. ತುಂಬಾ ಜನರಿಗೆ ಇದು ಗೊತ್ತೇ ಇಲ್ಲ..

Share :

Published October 12, 2024 at 2:26pm

Update October 12, 2024 at 2:33pm

    ಮೈಸೂರಲ್ಲಿ ಜಂಬೂ ಸವಾರಿಯ ಸಡಗರ ಜೋರಾಗಿದೆ

    ದುರ್ಗಾ ಮಾತೆಯ ಆರಾಧನೆ ಜೋರಾಗಿ ನಡೆಯುತ್ತಿದೆ

    ರಾಮ-ರಾವಣನ ನಡುವಿನ ಯುದ್ಧದಲ್ಲಿ ಗೆದ್ದಿದ್ದು ಒಳ್ಳೆತನ

ನವರಾತ್ರಿಯ ಪವಿತ್ರ ಹಬ್ಬವು ಇಂದು ಕೊನೆಗೊಳ್ಳುತ್ತದೆ. ದುರ್ಗಾ ದೇವಿಯ ವಿಸರ್ಜನಾ ದಿನ ವಿಜಯದಶಮಿ. ಅದೇ ದಿನ ರಾವಣನ ದಹನದ ಸಂದರ್ಭದಲ್ಲಿ ದಸರಾ ಹಬ್ಬ ಆಚರಿಸಲಾಗುತ್ತದೆ. ಆದರೆ, ವಿಜಯದಶಮಿ ಮತ್ತು ದಸರಾ ಆಚರಣೆಯಲ್ಲಿ ವ್ಯತ್ಯಾಸ ಇದೆ.

ಪ್ರತಿ ವರ್ಷದಂತೆ ಈ ವರ್ಷವೂ ವಿಜಯದಶಮಿ ಮತ್ತು ದಸರಾ ಹಬ್ಬಗಳನ್ನು ಅಶ್ವಿನ್ ಮಾಸದ ಶುಕ್ಲ ಪಕ್ಷದ 10ನೇ ದಿನದಂದು ಆಚರಿಸಲಾಗುತ್ತದೆ. ನವರಾತ್ರಿ ಹಬ್ಬವು ದುರ್ಗೆಯ ನಿಮಜ್ಜನದೊಂದಿಗೆ ಕೊನೆಗೊಳ್ಳುತ್ತದೆ. ಮತ್ತು ಅದೇ ದಿನ ರಾವಣನನ್ನು ದಹಿಸಲಾಗುತ್ತದೆ. ಈ ಎರಡೂ ಹಬ್ಬಗಳು ಒಂದೇ ದಿನದಲ್ಲಿ ಬರುವುದರಿಂದ ಜನರು ಅವುಗಳನ್ನು ಒಂದೇ ಎಂದು ಪರಿಗಣಿಸುತ್ತಾರೆ. ಆದರೆ ಇದು ಎಲ್ಲಾ ಸಂದರ್ಭದಲ್ಲಿಯೂ ಅಲ್ಲ. ಈ ಎರಡೂ ಹಬ್ಬಗಳು ವಿಭಿನ್ನವಾಗಿವೆ.

ಇದನ್ನೂ ಓದಿ:ಇಂದು ಅಂಬಾರಿ ಹೊತ್ತು ದಸರಾ ಸುತ್ತಲಿರೋ ಅಭಿಮನ್ಯು.. ರಾಜ್ಯಗಾಂಭೀರ್ಯದಿಂದ ಹೆಜ್ಜೆ ಹಾಕೋ ಆನೆಗಳ ಪರಿಚಯ ಇಲ್ಲಿದೆ

ವಿಜಯದಶಮಿ ಎಂದರೇನು?
ಪೌರಾಣಿಕ ಗ್ರಂಥಗಳ ಪ್ರಕಾರ.. ಮಹಿಷಾಸುರ ಎಂಬ ರಾಕ್ಷಸನು ಭೂಮಿಯಿಂದ ಸ್ವರ್ಗದವರೆಗೆ ತೊಂದರೆ ಕೊಡಲು ಶುರುಮಾಡ್ತಾನೆ. ಆಗ ತಾಯಿ ದುರ್ಗಾ, ಮಹಿಷಾಸುರ ಮತ್ತು ಅವನ ಸೈನ್ಯದೊಂದಿಗೆ 9 ದಿನಗಳ ಕಾಲ ಭೀಕರ ಯುದ್ಧ ನಡೆಸ್ತಾಳೆ. ಯುದ್ಧದ 10ನೇ ದಿನದಂದು ದುರ್ಗಾ ಮಾತೆ ಮಹಿಷಾಸುರ ಮತ್ತು ಅವನ ಸೈನ್ಯವನ್ನು ನಾಶಪಡಿಸ್ತಾಳೆ. ದುರ್ಗೆಯ ಈ ವಿಜಯವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ.

ಏನಿದು ದಸರಾ?
ದಸರಾಗೆ ಸಂಬಂಧಿಸಿದಂತೆ ಪುರಾಣ ಗ್ರಂಥಗಳು.. ಈ ದಿನದಂದು ಶ್ರೀರಾಮನು ರಾವಣನನ್ನು ಕೊಂದ ಎಂದು ಹೇಳುತ್ತದೆ. ರಾವಣನನ್ನು ಸೋಲಿಸಲು ರಾಮ 9 ದಿನಗಳ ಕಾಲ ದುರ್ಗೆಯನ್ನು ಪೂಜಿಸಿದ. ನಂತರ ರಾಮನು 10ನೇ ದಿನ ರಾವಣನನ್ನು ಸಾಯಿಸುತ್ತಾನೆ. ರಾಮ ಮತ್ತು ರಾವಣನ ನಡುವಿನ ಯುದ್ಧದಲ್ಲಿ ಒಳ್ಳೆಯತನ ಗೆದ್ದಿದೆ. ಈ ಕಾರಣಕ್ಕಾಗಿ ನವರಾತ್ರಿಯ 9 ದಿನಗಳಲ್ಲಿ ರಾಮಲೀಲಾವನ್ನು ವಿವಿಧ ಸ್ಥಳಗಳಲ್ಲಿ ಆಯೋಜನೆ ಮಾಡುತ್ತಾರೆ. ಮತ್ತು ಹತ್ತನೇ ದಿನದಂದು ರಾವಣ, ಕುಂಭಕರ್ಣನ ಪ್ರತಿಕೃತಿಗಳನ್ನು ದಹಿಸುವ ಮೂಲಕ ದಸರಾ ಹಬ್ಬ ಆಚರಿಸಲಾಗುತ್ತದೆ.

ಇದನ್ನೂ ಓದಿ:Mysore Dasara: ಮೈಸೂರು ದಸರಾ ಶುರುವಾಗಿದ್ದು ಹೇಗೆ? ಯಾವಾಗ? ಇಂಟ್ರೆಸ್ಟಿಂಗ್‌ ವಿಷಯಗಳು ಇಲ್ಲಿವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯದಶಮಿ ಮತ್ತು ದಸರಾಗೆ ಇದೆ ವ್ಯತ್ಯಾಸ.. ತುಂಬಾ ಜನರಿಗೆ ಇದು ಗೊತ್ತೇ ಇಲ್ಲ..

https://newsfirstlive.com/wp-content/uploads/2024/10/DASARA-AND-VIJAYADASAMI-1.jpg

Load More