ಹುಸಿ ಆಯ್ತು ಕ್ರಿಕೆಟ್ ಚಿಂತಕರ ಭವಿಷ್ಯವಾಣಿ
ಹೊಸತನ ಪ್ರಯೋಗವಿಲ್ಲದ D.R ಜೋಡಿ
ರಿಸ್ಕ್ ತೆಗೆದುಕೊಳ್ತಿದ್ದ ಶಾಸ್ತ್ರಿ, ದ್ರಾವಿಡ್ ಸೇಫ್ ಗೇಮ್
ಟೀಮ್ ಇಂಡಿಯಾ ರವಿ ಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿಯಂತ ಡೈಮೆಂಡ್ಗಳ ಸೇವೆ ಕಳೆದುಕೊಳ್ತಾ? ಇಂಥದ್ದೊಂದು ಪ್ರಶ್ನೆ ಈಗ ವಿಶ್ವ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿದೆ. ಇಂಥದ್ದೊಂದು ಚರ್ಚೆಗೆ ಕಾರಣವಾಗಿರೋದು ಕೋಚ್ ದ್ರಾವಿಡ್ ಕೋಚಿಂಗ್ ಹಾಗೂ ಕ್ಯಾಪ್ಟನ್ ರೋಹಿತ್ರ ಡೈರೆಕ್ಷನ್ ಆಫ್ ದಿ ಸ್ಟೈಲ್.
ರಾಹುಲ್ ದ್ರಾವಿಡ್.. ಟೀಮ್ ಇಂಡಿಯಾ ಕೋಚ್ ಆಗಿದ್ದೇ ತಡ ವಿಶ್ವ ಕ್ರಿಕೆಟ್ ಲೋಕದಲ್ಲಿ ಹೊಸ ಶಕೆಗೆ ನಾಂದಿಯಾಡಿತ್ತು. ದ್ರಾವಿಡ್ ಕೋಚ್ ಆಗಿ ಕಾರ್ಯವಹಿಸಿದ್ರೆ, ವಿಶ್ವ ಕ್ರಿಕೆಟ್ ಲೋಕದ ಇತರೆ ತಂಡಗಳು ತಂಡಾ ಹೊಡೆಯೋದು ಗ್ಯಾರಂಟಿ ಅಂತಾನೇ ದಿಗ್ಗಜರು ಭವಿಷ್ಯ ನುಡಿದಿದ್ದರು. ಅಭಿಮಾನಿಗಳು ಅಂತೂ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾರ ಜುಗಲಬಂದಿತಲ್ಲಿ ಟೀಮ್ ಇಂಡಿಯಾ ನೆಕ್ಸ್ಟ್ ಲೆವೆಲ್ ಆಫ್ ಕ್ರಿಕೆಟ್ ಆಡುತ್ತೆ ಅಂತಾನೇ ನಿರೀಕ್ಷೆ ಮಾಡಿದ್ದರು. ಆದ್ರೆ ನಂತರದ ದಿನಗಳಲ್ಲಿ ಆಗಿದ್ದೇ ಬೇರೆ.
ಹೌದು, ಕೋಚ್ ರವಿ ಶಾಸ್ತ್ರಿ ಮಾರ್ಗದರ್ಶನ. ಕೊಹ್ಲಿಯ ಲೀಡರ್ಶಿಪ್ನಲ್ಲಿ ಏನ್ ನೋಡ್ತಿದ್ವೋ, ಅದೆಲ್ಲ ಈಗ ಮಾಯವಾಗಿದೆ. ಒಂದ್ ಮಾತಲ್ಲಿ ಹೇಳೋದಾದ್ರೆ ಹಲ್ಲಿಲ್ಲದ ಹಾವಿನಂತೆ ಟೀಮ್ ಇಂಡಿಯಾ ಕಾಣ್ತಿದೆ. ಇದಕ್ಕೆಲ್ಲ ಕಾರಣ ಕೋಚ್ ದ್ರಾವಿಡ್ ಆ್ಯಂಡ್ ರೋಹಿತ್ ಶರ್ಮಾರ ಮಾಡ್ತಿರೋ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮಾಸ್ಟರ್ ಪ್ಲಾನ್ಗಳು. ಈ ಪ್ಲಾನ್ಗಳು ನಿಜಕ್ಕೂ ದ್ರಾವಿಡ್ ಆ್ಯಂಡ್ ರೋಹಿತ್ ಜೋಡಿಯನ್ನ ರೋಲ್ಗಳನ್ನೇ ಪ್ರಶ್ನಿಸುವಂತಿದೆ. ಇದಕ್ಕೆ ಕಾರಣ ರವಿ ಶಾಸ್ತ್ರಿ, ಕೊಹ್ಲಿ ಜೋಡಿ ಹಾಗೂ ರಾಹುಲ್ ದ್ರಾವಿಡ್, ರೋಹಿತ್ ಜೋಡಿಯ ಡಿಫರೆಂಟ್ ಸ್ಟ್ರೈಲ್ ಆಫ್ ಸ್ಟ್ರಾಟರ್ಜಿ.
ರಿಸ್ಕ್ ತೆಗೆದುಕೊಳ್ಳುತ್ತಿದ್ದ ರವಿ ಶಾಸ್ತ್ರಿ.. ದ್ರಾವಿಡ್ ಸೇಫ್ ಗೇಮ್
ರವಿ ಶಾಸ್ತ್ರಿ ಆ್ಯಂಡ್ ಕೊಹ್ಲಿ ಜೋಡಿ ಜುಗಲ್ಬಂದಿಯಲ್ಲಿ ಟೀಮ್ ಇಂಡಿಯಾ ರಿಸ್ಕಿ ಡಿಸಿಷನ್ಸ್ ತೆಗೆದುಕೊಂಡಿದ್ದೇ ಹೆಚ್ಚು. ಇದಕ್ಕೆ ಬೆಸ್ಟ್ ಕಂಡೀಷನ್ಸ್ಗೆ ಅನುಗಣವಾಗಿ ಪ್ಲೇಯಿಂಗ್ ಇಲೆವೆನ್ ಕಣಕ್ಕಿಳಿಸೋ ಲೆಕ್ಕಚಾರಕ್ಕಿಂತ, ಎಕ್ಸ್ಟ್ರಾ ಆಲ್ರೌಂಡರ್ಗಳನ್ನು ಅಂಗಳಕ್ಕಿಳಿದು ಸಕ್ಸಸ್ ಕಾಣ್ತಿದ್ದರು. ಆದ್ರೆ ದ್ರಾವಿಡ್ ಆ್ಯಂಡ್ ರೋಹಿತ್ ಜೋಡಿ ಮಾತ್ರ, ಕಂಡೀಷನ್ಸ್ಗಿಂತ ಎಕ್ಸಾಟ್ರಾ ಸೇಫ್ ಗೇಮ್ ಆಡುತ್ತಿದೆ. ಇದಿಷ್ಟೇ ಅಲ್ಲ, ಅಗ್ರೆಸ್ಸಿವ್ ಮೂಮೆಂಟ್ ಕೂಡ ಕಾಣದಾಗಿದೆ.
ಆನ್ಫೀಲ್ಡ್ನಲ್ಲಿ ಎನರ್ಜಿ.. ಈಗ ಫುಲ್ ಸೈಲೆಂಟ್
ರವಿ ಶಾಸ್ತ್ರಿ, ವಿರಾಟ್ ಕೊಹ್ಲಿ ಜುಗಲ್ಬಂದಿಯಲ್ಲಿ ಅಗ್ರೆಸ್ಸಿವ್ ಆಟಕ್ಕೆ ಮಾತ್ರವೇ ಟೀಮ್ ಇಂಡಿಯಾ ಸೀಮಿತವಾಗಿರಲಿಲ್ಲ. ಆಟವನ್ನೂ ಅಸ್ವಾಧಿಸುತ್ತಾ ಎದುರಾಳಿ ಮೇಲೆ ಅಟ್ಯಾಕ್ ಮಾಡುತ್ತಿದ್ದರು. ದಿನದ ಆರಂಭದಿಂದ ದಿನದ ಅಂತ್ಯದ ತನಕ ಫೀಲ್ಡ್ನಲ್ಲಿ ಕೊಹ್ಲಿ ತೋರುತ್ತಿದ್ದ ಜೋಶ್, ಆಟಗಾರಲ್ಲೂ ಇದ್ದೇ ಇರುತ್ತಿತ್ತು. ಆದ್ರೀಗ ದ್ರಾವಿಡ್ & ರೋಹಿತ್ ಜೋಡಿಯ ಕಾಮ್ನೆಸ್, ಆನ್ಫೀಲ್ಡ್ನಲ್ಲಿ ಕಾಣ್ತಿದೆ.
ಕೌಂಟರ್ ನೀಡುವಲ್ಲಿ ಸದಾ ಮುಂದು.. ದ್ರಾವಿಡ್ರಲ್ಲಿ ಮಾಯ..!
ಕ್ರಿಟಿಸಿಸಮ್ಗೆ ರವಿ ಶಾಸ್ತ್ರಿ, ವಿರಾಟ್ ಕೇರ್ ಮಾಡವ್ರೇ ಅಲ್ಲ. ಮೀಡಿಯಾಗಳ ಪ್ರಶ್ನೆಗೆ ಅಲ್ಲೇ ಕೌಂಟರ್ ನೀಡ್ತಿದ್ದ ಶಾಸ್ತ್ರಿ ಹಾಗೂ ಕೊಹ್ಲಿ, ಆನ್ಫೀಲ್ಡ್ನಲ್ಲೂ ಎದುರಾಳಿಗಳಿಗೆ ಕೌಂಟರ್ ನೀಡೋದರಲ್ಲಿ ನಿಸ್ಸೀಮಾರಾಗಿದ್ದರು. ಆದ್ರೆ, ಆರ್ಆರ್ ಜೋಡಿಯ ಜುಗಲ್ಬಂದಿಯಲ್ಲಿ ಇದೆಲ್ಲವೂ ಮಾಯವಾಗಿದೆ.
ಗುಡ್ ಮೋಟಿವೇಟರ್ ಆಗಿದ್ದರು ಕೊಹ್ಲಿ & ಶಾಸ್ತ್ರಿ
ಶಾಸ್ತ್ರಿ ಜಸ್ಟ್ ಕೋಚ್ ಮಾತ್ರವೇ ಆಗಿರಲಿಲ್ಲ. ಓರ್ವ ಮೋಟಿವೇಟರ್ ಆಗಿದ್ದರು. ಆಟಗಾರರಿಗೆ ಸದಾ ಸ್ಫೂರ್ತಿ ತುಂಬುತ್ತಿದ್ದ ರವಿ ಶಾಸ್ತ್ರಿ, ಉತ್ತಮ ಔಟ್ಫುಲ್ ಹೊರಹಾಕುವಂತೆ ಮಾಡ್ತಿದ್ದರು. ಕುಸಿದ ತಂಡ ಪುಟಿದೇಳುವ ಆತ್ಮವಿಶ್ವಾಸ ತುಂಬುತ್ತಿದ್ದರು. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. 2021ರ ಆಸ್ಟ್ರೇಲಿಯಾ ಪ್ರವಾಸದ ಮೊದಲ ಟೆಸ್ಟ್ನಲ್ಲೇ ಟೀಮ್ ಇಂಡಿಯಾ 36ಕ್ಕೆ ಆಲೌಟ್ ಆಗಿ ಸೋಲುಂಡಿ ಬಳಿಕ ಕಮ್ಬ್ಯಾಕ್ ಮಾಡಿದ್ದಾಗಿದೆ.
ಯಾವ ಮಟ್ಟಕ್ಕಂದ್ರೆ ಸ್ಟಾರ್ಗಳ ಅನುಪಸ್ಥಿತಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ನ್ಯೂ ಕಾಮರ್ಸ್ ಪ್ಲೇಯರ್ಸ್ ಬಡಿದಟ್ಟಿದ್ದರು. ಆದ್ರೀಗ ಈ ಗುಣ ಕೋಚ್ ದ್ರಾವಿಡ್ ಆ್ಯಂಡ್ ರೋಹಿತ್ ಇಬ್ಬರಲ್ಲೂ ಇಲ್ಲ. ಇದು ನಿಜಕ್ಕೂ ಟೀಮ್ ಇಂಡಿಯಾಗೆ ಡಿಸ್ ಅಡ್ವಾಂಟೇಜ್.
ದ್ರಾವಿಡ್ರಲ್ಲಿ ಹೊಸ ಐಡಿಯಾಗಳೇ ಇಲ್ಲ..!
ಹೊಸ ಕೋಚ್. ಹೊಸ ಕ್ಯಾಪ್ಟನ್ ನೇಮಕಗೊಂಡ್ರೆ, ಅವರಿಂದ ಹೊಸ ತನವನ್ನ ಎಕ್ಸ್ಪೆಕ್ಟ್ ಮಾಡೋದು ಕಾಮನ್. ಕ್ಯಾಪ್ಟನ್ ರೋಹಿತ್ ಆ್ಯಂಡ್ ಕೋಚ್ ದ್ರಾವಿಡ್ರಿಂದ ಈ ಹೊಸ ಇನ್ಟೆನ್ಶನ್ ಕಾಣಲೇ ಇಲ್ಲ. ಮಾಡ್ರನ್ ಡೇ ಕ್ರಿಕೆಟ್ನಲ್ಲಿ ಟೆಸ್ಟ್ ಫಾರ್ಮೆಟ್ ಅನ್ನೂ ಏಕದಿನ ಶೈಲಿಯಲ್ಲಿ ಆಡೋ ಕಾಲಘಟ್ಟದಲ್ಲೂ, ದ್ರಾವಿಡ್ ಹಾಗೂ ರೋಹಿತ್ ಹೋಲ್ಡ್ ಫಾರ್ಮೆಟ್ ಆಫ್ ಕ್ರಿಕೆಟ್ಗೆ ಸ್ಟ್ರಕ್ ಆಗಿರೋದು ನಿಜಕ್ಕೂ ದುರಾದೃಷ್ಟವೇ ಸರಿ.
1 ದಿನದ ಮುಂಚೆಯೇ ತಂಡ ಪ್ರಕಟಿಸೋ ಹವ್ಯಾಸ
ಸ್ವದೇಶವೇ ಆಗಲಿ, ವಿದೇಶಿ ಪ್ರವಾಸವೇ ಆಗಲಿ.. ರವಿ ಶಾಸ್ತ್ರಿ, ಕೊಹ್ಲಿ ಜೋಡಿ ವಿನೂತನ ಹವ್ಯಾಸ ಹುಟ್ಟಿಹಾಕಿದ್ದರು. ಒಂದು ದಿನದ ಮುಂಚೆಯೇ ತಂಡವನ್ನು ಪ್ರಕಟಿಸುವ ಮೂಲಕ ಎದುರಾಳಿಗೆ ಸವಾಲ್ ಎಸೆಯುತ್ತಿದ್ದರು. ಆದ್ರೆ ರೋಹಿತ್ ಶರ್ಮಾ ಹಾಗೂ ದ್ರಾವಿಡ್ ಕೋಚ್ ಆಗಿದ್ದೇ ತಡ, ಇಂತಹ ಹವ್ಯಾಸಕ್ಕೆ ಬ್ರೇಕ್ ಹಾಕಿದರು. ಭವಿಷ್ಯದ ತಂಡದತ್ತ ಚಿತ್ತ ನೆಡಬೇಕಾದ ಸಂದರ್ಭದಲ್ಲೂ ಅನುಭವಿಗಳಿಗೆ ಒತ್ತು ನೀಡ್ತಿರೋದು ನಿಜಕ್ಕೂ ದ್ರಾವಿಡ್ ಹಾಗೂ ರೋಹಿತ್ ಜೋಡಿಯ ನಡೆಯನ್ನ ಪ್ರಶ್ನೆಸುವಂತೆ ಮಾಡಿರೋದು ಸುಳ್ಳಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್