newsfirstkannada.com

ಬರೋಬ್ಬರಿ ₹250 ಕೋಟಿವರೆಗೂ ದಂಡ; ಮೋದಿ ಸರ್ಕಾರದಿಂದ ಮಹತ್ವದ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್‌ ಬಿಲ್ ಮಂಡನೆ

Share :

03-08-2023

    ನಿಮ್ಮ ಮೊಬೈಲ್‌ ನಂಬರ್, ವಿಳಾಸ, ಇ-ಮೇಲ್ ID ಸೇಫ್‌!

    ಆನ್‌ಲೈನ್‌, ಆಫ್‌ಲೈನ್‌ನ ಖಾಸಗಿ ದತ್ತಾಂಶಗಳ ಸಂಸ್ಕರಣೆ

    ಉಲ್ಲಂಘಿಸಿದ ಆ ಕಂಪನಿಗಳು ದಂಡ ಕಟ್ಟಲೇಬೇಕಾಗುತ್ತೆ

ಲೋಕಸಭೆಯಲ್ಲಿ ಮಹತ್ವದ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ವಿಧೇಯಕವನ್ನು ಮಂಡಿಸಲಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಯು ಒಪ್ಪಿಗೆ ನೀಡಿದರೆ ಮಾತ್ರ, ಈ ಮಸೂದೆಯ ಅಡಿಯಲ್ಲಿ ವೈಯಕ್ತಿಕ ದತ್ತಾಂಶ ಸಂರಕ್ಷಣೆಯನ್ನು ಪ್ರಕ್ರಿಯೆಗೊಳಿಸಬಹುದು. ಒಂದು ವೇಳೆ ಈ ಕಾನೂನಿನ ಅಡಿ ನಿಯಮಗಳ ಉಲ್ಲಂಘಿಸಿದರೆ ಆ ಕಂಪನಿಗಳು ದಂಡ ಕಟ್ಟಬೇಕಾಗುತ್ತದೆ. ವೈಯಕ್ತಿಕ ದತ್ತಾಂಶಗಳ ರಕ್ಷಣೆಯ ನಿಯಮಗಳನ್ನು ಉಲ್ಲಂಘಿಸಿದರೆ ಬರೋಬ್ಬರಿ 250 ಕೋಟಿ ರೂಪಾಯಿವರೆಗೂ ದಂಡಕ್ಕೆ ಗುರಿಪಡಿಸಬಹುದು. ಭಾರತದ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್‌ ದತ್ತಾಂಶವು ಈ ಬಿಲ್ ವ್ಯಾಪ್ತಿಯೊಳಗೆ ಬರಲಿದೆ.

ದೇಶದ ನಾಗರಿಕರ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವುದು. ವೈಯಕ್ತಿಕ ಮಾಹಿತಿಗಳನ್ನು ಕಾಪಾಡುವ ಉದ್ದೇಶದಿಂದ ಈ ಮಸೂದೆಗೆ ಕಳೆದ ಜುಲೈ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. 2019ರ ಡಿಸೆಂಬರ್ 11ರಂದು ಸಂಸತ್‌ನಲ್ಲಿ ಮೊದಲ ಬಾರಿಗೆ ಈ ವಿಧೇಯಕವನ್ನು ಮಂಡಿಸಲಾಗಿತ್ತು. ವೈಯಕ್ತಿಕ ದತ್ತಾಂಶ ಖಾಸಗಿತನ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಕಾನೂನು ರೂಪಿಸೋ ಎರಡನೇ ಪ್ರಯತ್ನವಾಗಿ ಇಂದು ಲೋಕಸಭೆಯಲ್ಲಿ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್ ಅನ್ನು ಮಂಡಿಸಲಾಗಿದೆ. ದೇಶದ ನಾಗರಿಕರ ಖಾಸಗಿ ಮಾಹಿತಿಗಳು ಅಂದ್ರೆ ಡೇಟಾಗಳ ಸಂರಕ್ಷಣೆಗೆ ಖಾತರಿಪಡಿಸೋದು ಇದರ ಮೂಲ ಉದ್ದೇಶವಾಗಿದೆ. ದತ್ತಾಂಶ ಸಂರಕ್ಷಣೆ, ಡೇಟಾ ಹಂಚಿಕೆ ಮತ್ತು ಡೇಟಾ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಈ ವಿಧೇಯಕದಲ್ಲಿ ರೂಪಿಸಲಾಗಿದೆ.

ಈ ಕಠಿಣ ಕಾನೂನಿನ ಉದ್ದೇಶವೇನು?
ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್‌ ಕಾನೂನಿನಡಿ ನಿಮ್ಮ ಮೊಬೈಲ್‌ ನಂಬರ್, ವಿಳಾಸ, ಇ-ಮೇಲ್ ID, ಬ್ಯಾಂಕ್‌ ಖಾತೆ, ಬ್ಯಾಂಕ್‌ ಅಕೌಂಟ್ ವಿವರ, ಜನ್ಮ ದಿನಾಂಕ ಹೀಗೆ ಪ್ರತಿಯೊಂದು ವೈಯಕ್ತಿಕ ದತ್ತಾಂಶಗಳು ಒಳಗೊಂಡಿರುತ್ತೆ. ಇದರ ಅನ್ವಯ ಯಾವುದಾದ್ರೂ ಖಾಸಗಿ ಸಂಸ್ಥೆ ನಿಮ್ಮ ಅನುಮತಿ ಮೇರೆಗೆ ಪರ್ಸನಲ್ ವಿವರಗಳನ್ನು ಬಳಸಬಹುದು. ಅದರ ಉದ್ದೇಶ ಈಡೇರಿದ ಕೂಡಲೇ ಅದನ್ನು ಅಳಿಸಿ ಹಾಕಬೇಕು. ಉದಾಹರಣೆಗೆ ಆನ್‌ಲೈನ್‌ನಲ್ಲಿ ನೀವು ಶಾಪಿಂಗ್ ಮಾಡಿದಾಗ ಮೊಬೈಲ್ ನಂಬರ್, ವಿಳಾಸ ದಾಖಲು ಮಾಡಿರ್ತೀರಾ. ಶಾಪಿಂಗ್ ಮಾಡಿದ ವಸ್ತು ನಿಮ್ಮ ಕೈ ಸೇರುತ್ತಿದ್ದಂತೆ ಆ ಸಂಸ್ಥೆ ನಿಮ್ಮ ವೈಯಕ್ತಿಕ ದತ್ತಾಂಶವನ್ನು ಡಿಲೀಟ್ ಮಾಡಬೇಕು. ಇಲ್ಲದಿದ್ದರೆ ಅದರ ದುರುಪಯೋಗ ಆಗುವ ಸಾಧ್ಯತೆ ಇದೆ ಎಂದು ಪರಿಗಣಿಸಲಾಗುತ್ತೆ.

ಡಿಜಿಟಲ್ ಪರ್ಸನಲ್ ಡೇಟಾ ಕಾನೂನು ದೇಶದ ಒಳಗೆ ಆನ್‌ಲೈನ್‌, ಆಫ್‌ಲೈನ್‌ನಲ್ಲಿ ಸಂಗ್ರಹಿಸಿದ ಖಾಸಗಿ ದತ್ತಾಂಶಗಳ ಸಂಸ್ಕರಣೆಗೆ ಅನ್ವಯವಾಗುತ್ತದೆ. ಭಾರತದಲ್ಲಿನ ವ್ಯಕ್ತಿಗಳಿಗೆ ಸರಕು ಮತ್ತು ಸೇವೆಗಳನ್ನು ಪೂರೈಸುವಂತಿದ್ದರೆ ಇದು ಭಾರತದ ಹೊರಗೂ ಅನ್ವಯವಾಗುತ್ತದೆ ಅನ್ನೋದು ಮತ್ತೊಂದು ವಿಶೇಷ. ಖಾಸಗಿ ದತ್ತಾಂಶವನ್ನು ಪರಿಷ್ಕರಿಸುವವರು ಅದರ ಭದ್ರತೆಯನ್ನು ನಿಭಾಯಿಸಬೇಕು. ಅದರ ಉದ್ದೇಶ ಪೂರ್ಣಗೊಂಡ ಬಳಿಕ ವೈಯಕ್ತಿಕ ದತ್ತಾಂಶವನ್ನು ಅಳಿಸಿ ಹಾಕುವುದಕ್ಕೆ ಬದ್ಧವಾಗಬೇಕು. ಈ ಕಾನೂನಿನಿಂದ ಸುಳ್ಳು ಸುದ್ದಿಗಳ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವ ವಾತಾವರಣಕ್ಕೆ ಕಡಿವಾಣ ಹಾಕಲು ಸಹಾಯವಾಗುತ್ತದೆ. ನಾಗರಿಕರ ಖಾಸಗಿ ಮಾಹಿತಿ ರಕ್ಷಿಸುವುದರ ಜೊತೆಗೆ ಆಧುನಿಕ ಸೈಬರ್ ಅಪರಾಧಗಳನ್ನು ನಿಯಂತ್ರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬರೋಬ್ಬರಿ ₹250 ಕೋಟಿವರೆಗೂ ದಂಡ; ಮೋದಿ ಸರ್ಕಾರದಿಂದ ಮಹತ್ವದ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್‌ ಬಿಲ್ ಮಂಡನೆ

https://newsfirstlive.com/wp-content/uploads/2023/08/Loksaba.jpg

Load More