ಬಿಜೆಪಿ ಇತಿಹಾಸ ತಿರುಚುವ ಕೆಲಸ ಮಾಡಿದೆ ಎಂದ ಗುಂಡೂರಾವ್
ಹಿಂದಿನ ಸರ್ಕಾರದ ವಿರುದ್ಧ ಗುಂಡೂರಾವ್ ಗಂಭೀರ ಆರೋಪ
ಬಿಜೆಪಿ ಸರ್ಕಾರ ನೀಡಿದ್ದ 108 ಟೆಂಡರ್ಗಳು ರದ್ದು
ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಭೂಮಿಯನ್ನ ತಮ್ಮ ಸಂಸ್ಥೆಗಳಿಗೆ ಪರಭಾರೆ ಮಾಡಿದ್ದಾರೆ. ರಾಜ್ಯದ ನೂರಾರು ಎಕರೆ ಸರ್ಕಾರಿ ಜಾಗವನ್ನು ಆರ್‌ಎಸ್‌ಎಸ್ ಸೇರಿದಂತೆ ತಮ್ಮ ಸಂಸ್ಥೆಗಳಿಗೆ ನೀಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಗಂಭೀರ ಆರೋಪವನ್ನು ಮಾಡಿದ್ದಾರೆ.
ಗುಂಡೂರಾವ್ ಹೇಳಿದ್ದೇನು..?
ಅವರ ಉದ್ದೇಶ ಏನಾಗಿತ್ತು ಅಂದರೆ ಇತಿಹಾಸವನ್ನು ತಿರಿಚುವುದಾಗಿದೆ. ಜನರಲ್ಲಿ ಕೋಮು ಭಾವನೆಯನ್ನು ಹೆಚ್ಚಾಗಿ ಬೆಳಸುವಂತಹ ಕೆಲಸ ಮಾಡಿದರು. ಜನರಲ್ಲಿ ದ್ವೇಷವನ್ನು ಹೆಚ್ಚು ಬೆಳಸುವ ಕೆಲಸ ಮಾಡಿದರು. ಸರ್ಕಾರಿ ಭೂಮಿಗಳನ್ನು ಅವರ ಸಂಸ್ಥೆಗೆ ಹಸ್ತಾಂತರ ಮಾಡಿದ್ದಾರೆ. ಅನೇಕ ಸಂಸ್ಥೆಗಳಿಗೆ ಸರ್ಕಾರಿ ಭೂಮಿಗಳನ್ನು ನೀಡಿದ್ದಾರೆ. ಆರ್‌ಎಸ್‌ಎಸ್, ಸಂಘ ಪರಿವಾರದ ಅನೇಕ ಸಂಘಸಂಸ್ಥೆಗಳಿಗೆ ರಾಜ್ಯದ ನೂರಾರು ಎಕರೆಗಳನ್ನು ಅವರಿಗೆ ಕೊಟ್ಟಿದ್ದಾರೆ. ಇದರ ಉದ್ದೇಶ ಅವರ ಪಕ್ಷದ ಬೆಳವಣಿಗೆ, ಸಿದ್ಧಾಂತವನ್ನು ಬೆಳೆಸುವುದಾಗಿದೆ.ದಿನೇಶ್ ಗುಂಡೂರಾವ್, ಸಚಿವ
ಸರ್ಕಾರದ ಕಾನೂನು ಉಲ್ಲಂಘಿಸಿ ಭೂಮಿ ನೀಡಿರುವುದು ಸತ್ಯ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸಲಿದೆ. ಹೇಗೆ ಕಾನೂನಾತ್ಮಕ ನಡೆದಿದೆ ಎಂಬುದನ್ನ ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ. ಬಿಜೆಪಿಯವರು ಇತಿಹಾಸ ತಿರುಚುವ ಕೆಲಸ ಮಾಡಿದ್ದಾರೆ. ತಮ್ಮ ಅಧಿಕಾರದಲ್ಲಿ ದ್ವೇಷವನ್ನ ಬಿತ್ತುವ ಕೆಲಸ ಮಾಡುತ್ತಿದ್ದರು. ಈಗಾಗಲೇ ಕೆಲವು ಟೆಂಡರ್ಗಳನ್ನು ರದ್ದುಪಡಿಸಿದ್ದೇವೆ. 108 ಗುತ್ತಿಗೆಯನ್ನು ರದ್ದುಪಡಿಸಿದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ