ನನ್ನದು ಕನಕಪುರ, ಅವರದ್ದು ಹಾಸನ ಎಂದ ಡಿ.ಕೆ ಶಿವಕುಮಾರ್!
ರಾಮನಗರದಲ್ಲಿ ನೀವು ಎಷ್ಟು ಜಮೀನು ತೆಗೆದುಕೊಂಡ್ರಿ? ಎಷ್ಟು ಮೌಲ್ಯ?
ನಮ್ಮದು ಬೆಂಗಳೂರು ಅಲ್ವಾ? ಇತಿಹಾಸದ ಗೆಜೆಟ್ ತೆಗೆದು ತೋರಿಸಲಾ?
ಬೆಂಗಳೂರು: ಕನಕಪುರ, ರಾಮನಗರದ ವಿಚಾರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜಿದ್ದಿಗೆ ಬಿದ್ದಿದ್ದಾರೆ. ಇಬ್ಬರು ನಾಯಕರ ವಾಗ್ಯುದ್ಧ ತಾರಕಕ್ಕೇರಿದ್ದು, ನೀನಾ, ನಾನಾ ಅನ್ನೋ ಹಂತಕ್ಕೆ ಹೋಗಿದೆ. ಕುಮಾರಸ್ವಾಮಿ ಅವರ ಮಾತಿಗೆ ಗರಂ ಆಗಿರುವ ಡಿ.ಕೆ ಶಿವಕುಮಾರ್ ಅವರು ಇದೀಗ ನೇರಾನೇರ ಅಖಾಡಕ್ಕಿಳಿದಿದ್ದು, ಬಹಿರಂಗವಾಗಿಯೇ ಸಮರ ಸಾರಿದ್ದಾರೆ.
ನಿನ್ನೆವರೆಗೂ ಸ್ವಲ್ಪ ಸಾಫ್ಟ್ ಆಗಿ ಮಾತನಾಡುತ್ತಿದ್ದ ಡಿ.ಕೆ ಶಿವಕುಮಾರ್ ಅವರು ಇಂದು ಸಿಕ್ಕಾಪಟ್ಟೆ ಗರಂ ಆದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕುಮಾರಸ್ವಾಮಿ ವಿರುದ್ಧ ನೇರಾನೇರವಾಗಿ ವಾಕ್ಸಮರ ನಡೆಸಿದ್ದಾರೆ. ನನಗೆ ಯಾಕೆ ಡಿಕೆ ಅಂತಾ ಹೆಸರಿಟ್ಟಿದ್ದಾರೆ. ಅವರಿಗೆ ಯಾಕೆ ಹೆಚ್‌ಡಿಕೆ ಅಂತಾ ಹೇಳ್ತಾರೆ. ನನ್ನದು ಕನಕಪುರ, ಅವರದ್ದು ಹಾಸನ ಎಂದು ಹೇಳುವ ಮೂಲಕ ಸಮರಕ್ಕೆ ಪಂಥಾಹ್ವಾನ ನೀಡಿದ್ದಾರೆ.
ಕುಮಾರಸ್ವಾಮಿಗೆ ಡಿಕೆಶಿ ಬಹಿರಂಗ ಸವಾಲು!
ಸುದ್ದಿಗೋಷ್ಟಿಯಲ್ಲಿ ನೇರಾನೇರ ಸವಾಲು ಹಾಕಿದ ಡಿ.ಕೆ ಶಿವಕುಮಾರ್ ಅವರು, ನಮ್ಮದು ಬೆಂಗಳೂರು ಅಲ್ವಾ? ಇತಿಹಾಸದ ಗೆಜೆಟ್ ತೆಗೆದು ತೋರಿಸಲಾ? ನಾನು ಕನಕಪುರ ಬೆಂಗಳೂರಿಗೆ ಸೇರಿಸುತ್ತೇನೆ ಅಂದಿಲ್ಲ. ರಾಮನಗರ, ಚನ್ನಪಟ್ಟಣ, ಕನಕಪುರದವರು ಬೆಂಗಳೂರಿಗರು ಎಂದು ಹೇಳಿದ್ದೇನೆ.
ರಾಮನಗರದಲ್ಲಿ ನೀವು ಎಷ್ಟು ಜಮೀನು ತೆಗೆದುಕೊಂಡ್ರಿ? ಅಲ್ಲಿ ಎಷ್ಟು ಮೌಲ್ಯ ಮಾಡಿದ್ರಿ ಹೇಳಿ ಎಂದು ಪ್ರಶ್ನಿಸಿರುವ ಡಿ.ಕೆ ಶಿವಕುಮಾರ್ ಅವರು ನಾನು ನಿಮ್ಮ ವೈಯುಕ್ತಿಕ ವಿಚಾರ ತೆಗೆಯಲ್ಲ. ಕುಮಾರಸ್ವಾಮಿಯವರೇ ನಾನು ನಿಮಗೆ ಹೇಳಲಿಲ್ಲ. ನಾನು ನಮ್ಮ ಜನರಿಗೆ ಹೇಳಿದ್ದು. ಅದು ಏನಾದ್ರೂ ತಪ್ಪಾಗಿದ್ಯಾ? ನನ್ನ ಕೊಡುಗೆ ಇರಲಿ ಅವರ ಕೊಡುಗೇಯೇನು ಹೇಳಲಿ. ಜನ ಎರಡು ಬಾರಿ ಅವರನ್ನ ಗೆಲ್ಲಿಸಿರೋದು. ಅವರು ಏನು ಮಾಡಿದ್ದಾರೆ ಅದನ್ನ ಕೇಳಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಇದೇ ವೇಳೆ ಮೂಲ, ವಲಸಿಗ ಅಸ್ತ್ರ ಪ್ರಯೋಗಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ನನ್ನ ಹೆಸರಲ್ಲಿ ಯಾಕೆ ಡಿಕೆ ಅಂತ ಇದೆ. ದೊಡ್ಡಾಲಹಳ್ಳಿ ಕೆಂಪೇಗೌಡನ ಮಗ ಆಗಿರೋದಕ್ಕೆ ಡಿಕೆ ಅಂತಾ ಹೆಸರಿದೆ. ಕುಮಾರಸ್ವಾಮಿಗೆ ಹೆಚ್‌ಡಿಕೆ ಅಂತ ಯಾಕಿದೆ. ಹೊಳೆನರಸೀಪುರದ ದೇವೇಗೌಡರ ಮಗ ಎಂಬುದಕ್ಕೆ ಹೆಚ್‌ಡಿಕೆ ಅಂತಾ ಇದೆ ಅಂತಾ ಹೇಳುವ ಮೂಲಕ ನಾನು ಬೆಂಗಳೂರಿನವನು, ಕುಮಾರಸ್ವಾಮಿ ಹಾಸನದವರು ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರು ಪ್ರಸ್ತಾಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ