newsfirstkannada.com

40, 50 ಕೋಟಿ ಅಲ್ಲವೇ ಅಲ್ಲ.. ಜ್ಯೂನಿಯರ್ NTR ಚಿತ್ರಕ್ಕೆ ಬಳಸುತ್ತಿರುವ ಕ್ಯಾಮರಾ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!

Share :

28-06-2023

    ಕ್ಯಾಮರಾ ಕಾಸ್ಟ್​ನಲ್ಲಿ ಸುಮಾರು 10 ಸಿನಿಮಾ ಮಾಡಬಹುದು

    ಕೋಟಿ, ಕೋಟಿ ಬೆಲೆಯ ಕ್ಯಾಮರಾದ ವಿಶೇಷತೆ ಏನು..?

    ಏಪ್ರಿಲ್ 5ಕ್ಕೆ Jr. NTR ಅಭಿನಯದ ‘DEVARA’ ಚಿತ್ರ ರಿಲೀಸ್

ಇವತ್ತಿನ ಸಿನಿಮಾಗಳ ರೇಂಜೂ, ಸ್ಕೇಲೇ ಬೇರೇಯಾಗಿ ಬಿಟ್ಟಿದೆ. ಸಿನಿಮಾವೊಂದರ ಓವರ್ ಆಲ್ ಬಜೆಟ್‌, ಅದೆಷ್ಟು ಪಟ್ಟು ಹೆಚ್ಚಾಗಿದೆ ಅಂತಾ ಅಂದಾಜಿಸೋದು ಕಷ್ಟವಾಗ್ತಿದೆ. ಮಾರ್ಕೆಟ್‌ನ ವಿಸ್ತಾರ ಆ ರೀತಿಯಾಗಿರೋದರಿಂದ ಬಜೆಟ್‌ ಗಾತ್ರವೂ ಹಲವು ಪಟ್ಟು ಏರಿಕೆ ಕಂಡಿದೆ. ಆಶ್ಚರ್ಯ ಅಂದ್ರೆ, ಸೂಪರ್‌ಸ್ಟಾರ್‌ಗಳ ಸಿನಿಮಾದ ಕ್ಯಾಮರಾ ಕಾಸ್ಟ್‌ನಲ್ಲಿ ಹೊಸಬರ 10 ಚಿತ್ರಗಳನ್ನ ಮಾಡ್ಬಹುದು. ಆ ಮಟ್ಟಿಗೆ ಬಜೆಟ್‌ ಇದೆ ಅಂದ್ರೆ ನೀವು ನಂಬ್ಲೇಬೇಕು. ಈ ಲಿಸ್ಟ್‌ಗೆ ಹೊಸದಾಗಿ ಸೇರ್ಪಡೆಯಾಗ್ತಿರೋ ಸಿನಿಮಾವೇ ಜ್ಯೂ. ಎನ್‌ಟಿಆರ್‌ ಅವ್ರ ದೇವರ.

‘ದೇವರ’ ಸಿನಿಮಾದಲ್ಲಿ ಬಳಸ್ತಿರೋ ಕ್ಯಾಮಾರಗೆ ಮೀಸಲಿಟ್ಟಿರೋ ಬಜೆಟ್‌ ಎಷ್ಟು ಗೊತ್ತಾ? ಬರೋಬ್ಬರಿ 80ಕೋಟಿ ರೂಪಾಯಿ. ಹೌದು, ಕೇವಲ ಕ್ಯಾಮರಾಗಾಗಿಯೇ ದೇವರ ಸಿನಿಮಾದ ಪ್ರೊಡ್ಯೂಸರ್‌ 80 ಕೋಟಿ ರೂಪಾಯಿ ಖರ್ಚು ಮಾಡ್ತಿದ್ದಾರಂತೆ.

ಅಂದ್ಹಾಗೇ, RRR ಸಿನಿಮಾದ ನಂತರ ಜೂನಿಯರ್ NTRರ ಸಿನಿಮಾಗಾಗಿ ಅಭಿಮಾನಿಗಳು ಎಷ್ಟು ಕಾದಿದ್ದಾರೆ ಅನ್ನೋದು ನಮಗೆಲ್ಲ ಗೊತ್ತೇ ಇದೆ. ಈಗಾಗ್ಲೇ ‘ದೇವರ’ ಸಿನಿಮಾದ ಶೂಟಿಂಗ್ ತುಂಬಾ ತಡವಾಗಿ ಶುರುವಾಗಿ ನಾಲ್ಕು ಶೆಡ್ಯೂಲ್ ಮುಗಿಸಿದೆ. ನಿರ್ದೇಶಕ ಕೊರಟಾಲ ಶಿವ ಈ ಚಿತ್ರವನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ . ಈ ಚಿತ್ರದ ಚಿತ್ರೀಕರಣ ಇದೇ ವರ್ಷ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಅದರ ನಂತರ ಎನ್‌ಟಿಆರ್ ಸೆಪ್ಟೆಂಬರ್‌ನಿಂದ ಹೃತಿಕ್ ರೋಷನ್ ಜೊತೆ ‘ವಾರ್​ 2’ ಮಾಡಲಿದ್ದಾರೆ. ಆಚಾರ್ಯ ಸಿನಿಮಾದ ಸೋಲಿನ ನಂತರ ಕೊರಟಾಲ ಶಿವ ಮಾಡ್ತಿರೋ ಸಿನಿಮಾ ದೇವರ. ಹೀಗಾಗಿಯೇ ಕೊರಟಲಾ ಶಿವ ಈ ಸಿನಿಮಾಗಾಗಿ ತುಂಬಾ ತಲೆಕೆಡಿಸಿಕೊಂಡು ಕೆಲಸ ಮಾಡ್ತಿದ್ದು, ಎನ್‌ಟಿಆರ್‌ಕೂಡ ತುಂಬಾ ಮುತುವರ್ಜಿವಹಿಸಿದ್ದಾರೆ.

ದೇವರ ಚಿತ್ರದ ತಾರಾಗಣವೂ ತುಂಬಾ ದೊಡ್ಡದಾಗಿದೆ. ಈಗಾಗಲೇ ಈ ಚಿತ್ರದಲ್ಲಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್ ಹೀರೋ ಸೈಫ್ ಅಲಿಖಾನ್ ಖಳನಾಯಕನಾಗಿ ನಟಿಸಿದ್ದಾರೆ. ಇವತ್ತಿನ ಕಾಲಘಟ್ಟದಲ್ಲಿ ಸಿನಿಮಾದ ಸ್ಕೇಲ್ ಕೇವಲ ನಟ-ನಟಿಯರಿಂದ ದೊಡ್ಡದಾಗೋದಿಲ್ಲ. ಟೆಕ್ನಿಕಲಿ ಕೂಡ ಸಿನಿಮಾ ಸಖತ್ ಸೌಂಡ್ ಮಾಡ್ಬೇಕು. ನಿಮ್ಗೆ ಮೊದ್ಲೇ ಹೇಳಿದ ಹಾಗೆ, ಕ್ಯಾಮರಾಗಾಗಿ 80 ಕೋಟಿ ಮೀಸಲಿಡಲಾಗಿದೆ. ಹಾಗಾದ್ರೆ, ಯಾವುದು ಆ ಕ್ಯಾಮರಾ? ಆ ಕ್ಯಾಮರಾದ ಸ್ಪೆಷಾಲಿಟಿಗಳೇನು? ಆ ಕ್ಯಾಮರಾ ಅಷ್ಟೊಂದು ಬಜೆಟ್ ಬೇಕಾಗುತ್ತಾ?

ಅಂದ್ಹಾಗೇ, ಈ ಸಿನಿಮಾಗಾಗಿ ‘ಅರ್ರಿ ಅಲೆಕ್ಸ್ LF’ ಕ್ಯಾಮೆರಾವನ್ನು ಬಳಸಲಾಗುತ್ತಿದೆ. ಇದರ ವೆಚ್ಚ ಸುಮಾರು 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಯಾವುದೇ ಒಂದು ಕ್ಯಾಮರಾಗೆ ಇಷ್ಟೊಂದು ದುಡ್ಡು ಕೊಡಬೇಕಾದ್ರೆ, ವಿಶೇಷತೆ ಇರ್ಲೇಬೇಕು. ಇಲ್ಲದಿದ್ರೆ ಯಾರು ಕೂಡ ಇಷ್ಟೊಂದು ದುಡ್ಡು ವ್ಯಯಿಸೋದಿಲ್ಲ.

  1. ಲಾರ್ಜ್ ಫಾರ್ಮ್ಯಾಟ್‌
  2. ನ್ಯಾಚುಲರ್‌ಕಲರ್ ಸೈನ್ಸ್
  3. ಬೆಸ್ಟ್‌ಕ್ವಾಲಿಟಿ
  4. ಆರ್ಟಿಸ್ಟಿಕ್‌ಎಕ್ಸ್‌ಪ್ರೆಶನ್‌ಕ್ಯಾಪ್ಚರ್‌
  5. ನಿರ್ದೇಶಕರ ಕನಸು ನನಸು ಮಾಡಲು ಸಹಾಯ
  6. ಲಾರ್ಜ್ ಫಾರ್ಮ್ಯಾಟ್ ಸೆನ್ಸರ್‌
  7. 4.5K ರೆಸಿಲ್ಯೂಶನ್‌
  8. ಮ್ಯಾಜಿಕಲ್‌ಸಿನಿಮ್ಯಾಟಿಕ್‌ಟಚ್‌
  9. ಇನ್‌ಡೆಪ್ತ್‌ಕ್ವಾಲಿಟಿ

ನಿರ್ದೇಶಕ ಮತ್ತು ಕ್ಯಾಮರಾಮನ್‌ಗಳು ಅಂದುಕೊಂಡಂತೆ ದೃಶ್ಯವನ್ನ ಸೆರೆಹಿಡಿಯುವುದು ತುಂಬಾ ಕಷ್ಟ. ಕೆಲವೊಂದು ಬಾರಿ ಕ್ಯಾಮರಾಗಳು ಇನ್‌ಡೆಪ್ತ್‌ಇಲ್ಲದಿದ್ರೆ, ಕ್ವಾಲಿಟಿ ಸಿಗೋದಿಲ್ಲ. ದೊಡ್ಡ ಪರದೆಯ ಮೇಲೆ ಇಂಪ್ಯಾಕ್ಟ್ ಮಾಡುವಂತಹ ದೃಶ್ಯಗಳು ಇರದಿದ್ರೆ, ಪ್ರೇಕ್ಷಕನ ಮೆಚ್ಚಿಸೋದು ಕಷ್ಟವೇ. ಹೀಗಾಗಿಯೇ ಅರಿ ಅಲೆಕ್ಸ್‌LF ಕ್ಯಾಮರಾ ಇವತ್ತಿಗೆ ಸಖತ್ ಸದ್ದು ಮಾಡ್ತಿರೋದು. ಈ ಕ್ಯಾಮರಾದ ಬಜೆಟ್‌ದುಬಾರಿಯೇ ಆಗಿದ್ದರು ಕೂಡ, ನಿರ್ದೇಶಕರ ಕನಸಿನ ದೃಶ್ಯವನ್ನ ಅಚೀವ್ ಮಾಡಬಹುದು. ಹೀಗಾಗಿಯೇ ಇವತ್ತಿಗೆ ಅರ್ರಿ ಅಲೆಕ್ಸ್ ಎಲ್‌ಎಫ್ ದಿ ಬೆಸ್ಟ್ ಅಂತಾ ಹೆಸರು ಮಾಡಿರೋದು.

ಅರ್ರಿ ಅಲೆಕ್ಸ್ ಎಲ್‌ಎಫ್ ಕ್ಯಾಮರಾ ಇದೇ ಮೊದಲ ಬಾರಿಗೆ ಬಳಸಲಾಗ್ತಿದೆಯಾ? ಇಲ್ಲ, ಇದು ಮೊದಲ ಬಾರಿಯಲ್ಲ. ಈ ಕ್ಯಾಮರಾದ ಸಂಪೂರ್ಣ ಲಾಭ ಪಡೆದಿರೋದು! ಅದರಲ್ಲಿ ಸಕ್ಸಸ್ ಆಗಿರೋ ಸಿನಿಮಾ ತ್ರಿಬಲ್ ಆರ್‌. ತ್ರಿಬಲ್ ಆರ್ ಸಿನಿಮಾದಲ್ಲಿ ಈ ಕ್ಯಾಮರಾವನ್ನ ಬಳಸಲಾಗಿದೆ. ಆ ಸಿನಿಮಾದ ಒಂದೊಂದು ದೃಶ್ಯವೂ ಅತ್ಯಂತ ನೈಜವಾಗಿ ಮೂಡಿಬಂದಿದೆ. ರಾಜಮೌಳಿ ಅವರ ಕನಸನ್ನ ಕೆ.ಕೆ.ಸೆಂಥಿಲ್ ಕುಮಾರ್ ಸೆರೆ ಹಿಡಿದಿದ್ದಾರೆ. ಇದಕ್ಕೆ ಸಾಥ್ ಕೊಟ್ಟ ಕ್ಯಾಮರಾವೇ ಅರ್ರಿ ಅಲೆಕ್ಸ್ ಎಲ್‌ಎಫ್ ಕ್ಯಾಮರಾ.

ಹಾಲಿವುಡ್ ಚಿತ್ರಗಳಾದ ‘ಜಾನ್ ವಿಕ್ 4’, ‘ದಿ ಬ್ಯಾಟ್ ಮ್ಯಾನ್’, ‘ಜೋಕರ್’, ‘ಆಂಟ್ ಮ್ಯಾನ್’, ‘ಸ್ಟ್ರೇಂಜರ್ ಥಿಂಗ್ಸ್’, ‘ಡ್ಯೂನ್’ ಮತ್ತು ‘ಟರ್ಮಿನೇಟರ್’ ಚಿತ್ರಗಳನ್ನು ಈ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ. ಇದೇ ಕಂಪನಿಯ ಅಲೆಕ್ಸ್ ಮಿನಿ ಎಲ್‌ಎಫ್ ಕ್ಯಾಮರಾವನ್ನ ಕನ್ನಡದ ಕಾಂತಾರ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಈ ಸಿನಿಮಾದ ಪ್ರತಿ ದೃಶ್ಯವನ್ನ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ. ದೃಶ್ಯವೂ ಚೆನ್ನಾಗಿ ಮೂಡಿಬಂದಿರೋ ಕಾರಣ, ಇದೇ ಕ್ಯಾಮರಾ.

ಇತ್ತೀಚೆಗಷ್ಟೇ ಎನ್‌ಟಿಆರ್‌ಹುಟ್ಟುಹಬ್ಬದಂದು ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದಲ್ಲಿ ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಸಮುದ್ರದ ಖನಿಜಗಳನ್ನು ಕಳ್ಳಸಾಗಣೆ ಮಾಡುವ ಕಥೆಯಿಟ್ಟುಕೊಂಡು ಬರ್ತಿರೋ ಸಿನಿಮಾವೇ ದೇವರ. ಈ ಸಿನಿಮಾದಲ್ಲಿ ನೀರೊಳಗಿನ ಫೈಟ್ ದೃಶ್ಯಗಳು ಇರಲಿವೆ. ಹೀಗಾಗಿ ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆಯಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

40, 50 ಕೋಟಿ ಅಲ್ಲವೇ ಅಲ್ಲ.. ಜ್ಯೂನಿಯರ್ NTR ಚಿತ್ರಕ್ಕೆ ಬಳಸುತ್ತಿರುವ ಕ್ಯಾಮರಾ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!

https://newsfirstlive.com/wp-content/uploads/2023/06/JR_NTR.jpg

Load More