ಬಿಜೆಪಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಯ ಕೊಲೆ
ನಾಪತ್ತೆ ಎಂದು ಸುದ್ದಿಯಾಗಿದ್ದವಳನ್ನು ಕೊಲೆ ಮಾಡಿದ್ದ ಪತಿ
ಅಷ್ಟಕ್ಕೂ ಕೊಲೆಯಾಗುವಂತಹ ತಪ್ಪೇನು ಮಾಡಿದ್ದಳು ಈಕೆ?
ನಾಪತ್ತೆಯಾಗಿದ್ದ ಬಿಜೆಪಿ ನಾಯಕಿ ತನ್ನ ಪತಿಯಿಂದಲೇ ಕೊಲೆಯಾದ ಘಟನೆ ಇದೀಗ ಮುನ್ನೆಲೆಗೆ ಬಂದಿದೆ. ಸಾನಾ ಖಾನ್ ಹತ್ಯೆಯಾಗಿರುವ ದುರ್ದೈವಿ.
ಸಾನಾ ಖಾನ್ ಮಹಾರಾಷ್ಟ್ರದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿ ಗುರುತಿಸಿಕೊಂಡಿದ್ದರು. ನಾಗಪುರದ ಮೂಲದ ಸಾನಾ ಖಾನ್ ಜಬಲಪುರದ ಮೂಲದ ಅಮಿತ್ ಸಾಹುವನ್ನು ವಿವಾಹವಾಗಿದ್ದರು.
ಸಾನಾ ಖಾನ್ ಆಗಸ್ಟ್ 2 ರಂದು ನಾಗಪುರದಿಂದ ಜಬಲಪುರದಲ್ಲಿದ್ದ ಮನೆಗೆ ಬಂದಿದ್ದರು. ಆದರೆ ಮನೆಗೆ ಬಂದಿದ್ದ ಸಾನಾ ಪತಿ ಅಮಿತ್ ಸಾಹು ಕೈಯಿಂದ ಕೊಲೆಯಾಗಿದ್ದಾರೆ. ಸಾನಾ ಕೊಲೆಗೈದ ಅಮಿತ್ ಬಳಿಕ ಆಕೆಯ ಶವವನ್ನು ನದಿಗೆ ಎಸೆದಿದ್ದಾನೆ.
ಸಾನಾ ಮತ್ತು ಅಮಿತ್ ನಡುವೆ ಹಣಕಾಸು, ವೈಯಕ್ತಿಕ ಕಾರಣಗಳಿಂದ ಗಲಾಟೆ ನಡೆದಿದ್ದು, ಇದೇ ಕಾರಣಕ್ಕೆ ಬಿಜೆಪಿ ನಾಯಕಿಯನ್ನು ಪತಿ ಅಮಿತ್ ಸಾಹು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ನಾಪತ್ತೆಯಾಗಿದ್ದ ಸಾನಾ ಕೊಲೆಯಾಗಿರೋದು ಗೊತ್ತಾದಂತೆ ಪತಿ ಅಮಿತ್ ಸಾಹುವನ್ನು ಜಬಲಪುರ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ