newsfirstkannada.com

ಗಗನಕ್ಕೇರಿದ ಟೊಮ್ಯಾಟೋ ಬೆಲೆ; ಗ್ರಾಹಕರಿಗೆ ಗುಡ್​​ನ್ಯೂಸ್​ ಕೊಟ್ಟ ಕೇಂದ್ರ; 1 ಕೆಜಿಗೆ ಎಷ್ಟು?

Share :

16-07-2023

    ಟೊಮ್ಯಾಟೋ ಬೆಲೆ ಏರಿಕೆಯಿಂದ ತತ್ತರಿಸಿದ ಜನ

    ಗ್ರಾಹಕರಿಗೆ ಗುಡ್​ನ್ಯೂಸ್​ ಕೊಟ್ಟ ಕೇಂದ್ರ ಸರ್ಕಾರ

    ಇಂದಿನಿಂದ ಅಗ್ಗದ ಬೆಲೆಗೆ ಟೊಮ್ಯಾಟೋ ಮಾರಾಟ

ದೆಹಲಿ: ಕಳೆದ ಎರಡು ವಾರಗಳಿಂದ ಇಡೀ ದೇಶಾದ್ಯಂತ ಟೊಮ್ಯಾಟೋ ದರ ಗಗನಕ್ಕೇರುತ್ತಿದೆ. ಮೊದಲೇ ಕರೆಂಟ್​​ ಬಿಲ್​​ ಏರಿಕೆಯಿಂದ ಶಾಕ್​​​ಗೆ ಒಳಗಾಗಿದ್ದ ಜನರ ಗಾಯದ ಮೇಲೆ ಟೊಮ್ಯಾಟೋ ಬೆಲೆಯೇರಿಕೆ ತೀವ್ರವಾಗಿ ಬರೆ ಎಳೆದಿದೆ.

ಅಡುಗೆ ಮಾಡಲು ಟೊಮ್ಯಾಟೋ ಬೇಕೇ ಬೇಕು. ಎಷ್ಟು ರೇಟ್​ ಇದ್ರೂ ಜನ ಟೊಮ್ಯಾಟೋ ಖರೀದಿ ಮಾಡಲೇಬೇಕು. ಹೀಗಿದ್ದರೂ ಜನ ತರಕಾರಿ ಅಂಗಡಿಗೆ ಹೋದರೆ ಟೊಮ್ಯಾಟೋ ಕಡೆ ಮಾತ್ರ ತಲೆ ಹಾಕುತ್ತಿಲ್ಲ. ಕಾರಣ ಟೊಮ್ಯಾಟೋ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಬಿದ್ದ ಕತ್ತರಿ.

ಇಂದು ಟೊಮ್ಯಾಟೋ ಎಂದರೆ ಚಿನ್ನಕ್ಕಿಂತ ದುಬಾರಿ. ಕರ್ನಾಟಕದಲ್ಲಿ ಟೊಮ್ಯಾಟೋ ಬೆಲೆ 100 ರೂ ಮೇಲೆ ಇದೆ. ದೇಶದ ಹಲವು ಕಡೆ ಟೊಮ್ಯಾಟೋ ಬೆಲೆ 200 ರೂ ಗಡಿ ದಾಟಿ ಹೋಗಿದೆ.

ಒಂದೆಡೆ ಟೊಮ್ಯಾಟೋ ಬೆಳೆದವರು ಜೇಬು ತುಂಬಿಸಿಕೊಂಡರೆ, ಇನ್ನೊಂದೆಡೆ ಜನಸಾಮಾನ್ಯರು ಟೊಮ್ಯಾಟೋಗೆ ಅಷ್ಟು ಹಣ ನೀಡಿ ಖರೀದಿ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಟೊಮ್ಯಾಟೋ ಬೆಲೆ ಏರಿಕೆಯಿಂದ ಬೇಸತ್ತ ಜನರಿಗೆ ಕೇಂದ್ರ ಸರ್ಕಾರ ಗುಡ್​​ನ್ಯೂಸ್​​ ಕೊಟ್ಟಿದೆ.

ಒಂದು ಕಿಲೋಗೆ 80 ರೂ.!

ಯೆಸ್​​, ಕೇಂದ್ರ ಸರ್ಕಾರ ಟೊಮ್ಯಾಟೋ ಕಿಲೋಗೆ 80 ರೂ.ಗೆ ಮಾರಾಟ ಮಾಡಲು ಶುರು ಮಾಡಿದೆ. ಈ ಮೊದಲು ಒಂದು ಕಿಲೋ 90 ರೂ.ಗೆ ಟೊಮ್ಯಾಟೋ ಮಾರಲು ನಿರ್ಧರಿಸಿತ್ತು. ಈಗ ಇನ್ನಷ್ಟು ಕಡಿಮೆ ಬೆಲೆಗೆ ಅಂದರೆ 80 ರೂ.ಗೆ ಮಾರಾಟ ಮಾಡುತ್ತಿದೆ.

ಇಂದಿನಿಂದಲೇ ಜನರಿಗೆ ಸರ್ಕಾರ ಅಗ್ಗದ ಬೆಲೆಗೆ ಟೊಮ್ಯಾಟೋ ಮಾರಾಟ ಮಾಡಲು ನಿರ್ಧರಿಸಿದೆ. ಹೀಗಾಗಿ ಟೊಮೆಟೋ ಬೆಲೆ ಏರಿಕೆಯಿಂದ ತತ್ತರಿದ್ದ ಜನರಿಗೆ ಇದರಿಂದ ಬಿಗ್​​ ರಿಲೀಫ್ ಸಿಕ್ಕಿದೆ. ಕೇಂದ್ರ ಸರ್ಕಾರ ಲಕ್ನೋ, ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿ ಎನ್​ಸಿಆರ್ ಪ್ರದೇಶಗಳಲ್ಲಿ ವಾಹನಗಳಲ್ಲಿ ಟೊಮ್ಯಾಟೋ ಮಾರಲು ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಗನಕ್ಕೇರಿದ ಟೊಮ್ಯಾಟೋ ಬೆಲೆ; ಗ್ರಾಹಕರಿಗೆ ಗುಡ್​​ನ್ಯೂಸ್​ ಕೊಟ್ಟ ಕೇಂದ್ರ; 1 ಕೆಜಿಗೆ ಎಷ್ಟು?

https://newsfirstlive.com/wp-content/uploads/2023/07/Tomatoe.jpg-1.jpg

Load More