ಮತ್ತೆ ದರ್ಶನ್ ಅಂಡ್ ಗ್ಯಾಂಗ್‌ಗೆ ಜೈಲು ವಾಸವೇ ಗತಿ
ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ ನ್ಯಾಯಾಲಯ
ಸತತ ನಾಲ್ಕನೇ ಬಾರಿಗೆ ಜೈಲಲ್ಲಿ ದರ್ಶನ್ ನೋಡಿ ಮಾತು
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಮೇಲಿಂದ ಮೇಲೆ ಸಂಕಷ್ಟಗಳು ಎದುರಾಗ್ತಿವೆ. ಈಗ ಮತ್ತೆ ದಾಸನಿಗೆ ಜೈಲು ವಾಸ ಮುಂದುವರೆದಿದೆ. ಇತ್ತ ಕಸ್ಟಡಿ ವಿಸ್ತರಣೆ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಜೈಲಿಗೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಬಳ್ಳಾರಿ ಜೈಲಿನಲ್ಲಿರೋ ದಾಸನ ಹಾವ ಭಾವದಲ್ಲಿ ಕೊಂಚ ಬದಲಾವಣೆ ಕಂಡಿದೆ.
ಇದನ್ನೂ ಓದಿ: ಅಮ್ಮನ ಕಳ್ಕೊಂಡ 4 ವರ್ಷದ ಕಂದಮ್ಮ.. ಮಂಗಳೂರು ಉಪನ್ಯಾಸಕಿ ದುರಂತ ಅಂತ್ಯ; ಏನಿದು ಲಿವರ್ ದಾನ?
ಘೋರ ಹತ್ಯೆಯ ಪಾಪವನ್ನ ಹೊತ್ತು ದಾಸ ಬಳ್ಳಾರಿ ಜೈಲಿನ ವಾಸ ಅನುಭವಿಸ್ತಿದ್ದಾರೆ. ಈ ಮಧ್ಯೆ ದರ್ಶನ್ ಪತ್ನಿ, ಸ್ನೇಹಿತರು ಬಳ್ಳಾರಿ ಜೈಲಿಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಜೊತೆಗೆ ಸೆಂಟ್ರಲ್ ಜೈಲಲ್ಲಿ ಇದ್ರೂ ಕಿರಿಕ್ ಮಾಡಿಕೊಳ್ತಿದ್ದ ಕಾಟೇರನಿಗೆ ಕೆಲವೊಂದಿಷ್ಟು ಬುದ್ಧಿ ಮಾತು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ 17 ಆರೋಪಿಗಳನ್ನ ಮತ್ತೆ 14 ದಿನ ನ್ಯಾಯಾಂಗ ಬಂಧನ ನೀಡಿ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಇದೇ ಹೊತ್ತಲ್ಲಿ ದರ್ಶನ್ ಭೇಟಿಗೆ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ರು. ದಾಸನ ಆಪ್ತ, ನಟ ಧನ್ವೀರ್ ಕೂಡಾ ಜೊತೆಯಾಗಿದ್ರು. ಜೊತೆಗೆ ಬೇಲ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ರು. ಸತತ ನಾಲ್ಕನೇ ಬಾರಿಗೆ ಬಳ್ಳಾರಿ ಜೈಲಿಗೆ ದರ್ಶನ್ನನ್ನು ಕಾಣಲು ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿ ಮಾತುಕತೆ ನಡೆಸಿದ್ರು. ದರ್ಶನ್ಗಾಗಿ ಡ್ರೈಫ್ರೂಟ್ಸ್, ಸಂತೂರ್ ಸೋಪ್‌ನ ತಂದಿದ್ರು. ಇದೇ ವೇಳೆ ವಿಜಯಲಕ್ಷ್ಮಿ ಜೊತೆ 25 ನಿಮಿಷ ಕಾಲ ದರ್ಶನ್ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಜಾಮೀನು ಅರ್ಜಿಗೆ ಸಹಿ ಹಾಕಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಸದ್ಯ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ದರ್ಶನ್ ಬಂಧಿಯಾಗಿದ್ದು, ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆಯೂ ವಿಜಯಲಕ್ಷ್ಮೀ ಚರ್ಚೆ ನಡೆಸಿದ್ದಾರಂತೆ. ಅಲ್ಲದೇ ಕಾನೂನು ಹೋರಾಟದ ಬಗ್ಗೆ ಪತ್ನಿ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ ಅಂತ ತಿಳಿದುಬಂದಿದೆ. ವಿಜಯಲಕ್ಷ್ಮೀ ಭೇಟಿಗೆ ಬಂದ ದರ್ಶನ್, ಬಳ್ಳಾರಿ ಜೈಲಲ್ಲಿ ಸಂಪೂರ್ಣ ಸೊರಗಿದಂತೆ ಕಂಡುಬಂತು. ದರ್ಶನ್ ತೂಕದಲ್ಲಿ ಇಳಿಕೆಯಾಗಿದ್ದು, ಜಿಮ್ ಬಾಡಿ ಕರಗಿ ಹೋದಂತಿತ್ತು. ಅಲ್ಲದೇ ಬಿಳಿಗಡ್ಡದ ಜೊತೆಗೆ ಮುಖದಲ್ಲಿದ್ದ ಇರೋ ಕಳೆ ಕಮರಿ ಹೋಗಿತ್ತು. ಜೈಲಿಂದ ಹೊರ ಬರುವಾಗ ಬೆರಳು ಎಣಿಸುತ್ತಾ ಮಂತ್ರಜಪ ಮಾಡಿದಂತೆ ಕಂಡುಬಂತು. ಇನ್ನೂ ದರ್ಶನ್ ಭೇಟಿಗೆ ಹೋಗಿದ್ದ ಧನ್ವೀರ್ ತಮ್ಮ ಬಾಸ್‌ನ ನೋಡ್ತಿದ್ದಂತೆ ಕಣ್ಣೀರು ಹಾಕಿದ್ದಾರೆ ಅಂತ ತಿಳಿದುಬಂದಿದೆ.
ಇದನ್ನೂ ಓದಿ: ಸೀರಿಯಲ್ ಬಿಟ್ಟು ವಿದೇಶಕ್ಕೆ ಹಾರಿದ ಕಿರುತೆರೆ ನಟಿ ಮೋಕ್ಷಿತಾ ಪೈ; ಸದ್ಯದಲ್ಲೇ ಗುಡ್ನ್ಯೂಸ್ ಕೊಡ್ತಾರಾ?
ಬಾಸ್ ನಿಮ್ಮನ್ನ ಹೀಗೆ ನೋಡೋಕಾಗ್ತಿಲ್ಲ ಅಂತಾ ಕಣ್ಣೀರಿಟ್ಟಿದ್ರಂತೆ. ಈ ವೇಳೆ ಧನ್ವೀರ್ನ ಆರೋಪಿ ದರ್ಶನ್ ಸಮಾಧಾನ ಪಡಿಸಿದ್ದರಂತೆ. ಬಳಿಕ ದರ್ಶನ್ ಆರೋಗ್ಯದ ಬಗ್ಗೆ ಧನ್ವೀರ್ ವಿಚಾರಿಸಿದ್ರು ಅಂತ ತಿಳಿದುಬಂದಿದೆ. ಸೆಂಟ್ರಲ್ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಕೊಟ್ಟು ಬಳ್ಳಾರಿ ಜೈಲಿಗೆ ಹೋಗುವಂತೆ ಮಾಡಿದ್ದು ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ. ಸದ್ಯ ವಿಲ್ಸನ್ ಗಾರ್ಡನ್ ನಾಗನನ್ನ ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆಡೆ ಶಿಫ್ಟ್ ಮಾಡಲು ಕೋರ್ಟ್ ಅನುಮತಿ ನೀಡಿದೆ. ವಿಲ್ಸನ್ ಗಾರ್ಡನ್ ನಾಗ ಸೇರಿ ಕೋಕಾ ಆಕ್ಟ್ ಕೇಸ್‌ನಲ್ಲಿದ್ದ ಆರೋಪಿಗಳ ಎತ್ತಂಗಡಿಗೆ ಆದೇಶ ನೀಡಿದೆ. ಆದ್ರೆ, ಯಾಱರು ಯಾವ್ಯಾವ ಜೈಲು ಅನ್ನೋದು ಇಂದು ಗೊತ್ತಾಗಲಿದೆ. ಒಟ್ಟಾರೆ, ರೌಡಿಶೀಟರ್ ಸಹವಾಸ ಮಾಡಿ ದರ್ಶನ್ ಮತ್ತಷ್ಟು ಸಂಕಷ್ಟದ ವಾಸಕ್ಕೆ ಗುರಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ