newsfirstkannada.com

ಮತ್ತೆ ನಟ ದರ್ಶನ್​ ವಿರುದ್ಧ ರಮ್ಯಾ ಕಿಡಿ; ಈ ಬಾರಿ ಮೋಹಕತಾರೆ ಹೇಳಿದ್ದೇನು?

Share :

Published June 13, 2024 at 9:27pm

Update June 13, 2024 at 9:32pm

  ರೇಣುಕಾಸ್ವಾಮಿ ಕೊಲೆ ಬಗ್ಗೆ ನಟಿ ಮೋಹಕ ತಾರೆ ರಮ್ಯಾ ಪ್ರತಿಕ್ರಿಯೆ ಏನು?

  ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನದ ಸುದ್ದಿ ಕೇಳಿ ಶಾಕ್ ಆದ ಚಿತ್ರರಂಗ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿ ರಮ್ಯಾ ಪೋಸ್ಟ್​

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ ಆರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಈಗಾಗಲೇ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನು ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಅವರ ಕ್ರೂರ ಕೊಲೆ ಕೇಸ್‌ಗೆ ದರ್ಶನ್ ಅಭಿಮಾನಿಗಳು ಹಾಗೂ​​ ಇಡೀ ಕನ್ನಡ ಚಿತ್ರರಂಗವೇ ಶಾಕ್​ಗೆ ಒಳಗಾಗಿದೆ.

ಇದನ್ನೂ ಓದಿ: ದರ್ಶನ್‌ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಬೆನ್ನಲ್ಲೇ ಮೋಹಕ ತಾರೆ ನಟಿ ರಮ್ಯಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ನಟ ದರ್ಶನ್​ ವಿರುದ್ಧ ಸ್ಯಾಂಡಲ್​ವುಡ್​ ನಟಿ ಗುಡುಗಿದ್ದಾರೆ.

ಇನ್ನು ಈ ಬಗ್ಗೆ ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ನಟಿ ರಮ್ಯಾ ಅವರು, ಸೋಷಿಯಲ್​ ಮೀಡಿಯಾದಲ್ಲಿ ಬ್ಲಾಕಿಂಗ್​ ಆಪ್ಷನ್ ಇದೆ. ಯಾರಾದರೂ ಟ್ರೋಲ್​ ಮಾಡಿದ್ರೆ ಅವರನ್ನು ಬ್ಲಾಕ್​ ಮಾಡಬಹುದು. ಇಲ್ಲದೇ ಹೋದರೆ ಕಂಪ್ಲೇಂಟ್​ ಕೊಡಬಹುದು. ನನ್ನನ್ನು ಹಲವು ಬಾರಿ ಟ್ರೋಲ್​ ಮಾಡಿದ್ದರು. ಎಷ್ಟೋ ಜನ ಹೆಣ್ಣು ಮಕ್ಕಳ ಬಗ್ಗೆಯೂ ಟ್ರೋಲಿಂಗ್ ಆಗಿದೆ. ನನ್ನನ್ನೂ ಟ್ರೋಲ್​ ಮಾಡಿದಾಗ ಬ್ಲಾಕ್ ಮಾಡಿದ್ದೇನೆ ಹೊರತು ಯಾರ ವಿರುದ್ಧವು ದುರನ್ನು ನೀಡಿಲ್ಲ. ಕಾರಣ ಅವರಿಗೂ ಒಂದು ಜೀವನ ಇರುತ್ತದೆ. ಎಷ್ಟೇ ಟ್ರೋಲ್​ ಮಾಡಿದ್ರೂ ಅವರನ್ನು ನೋಡಿಕೊಳ್ಳುವುದಕ್ಕೆ ಕಾನೂನು ಇದೆ. ಯಾರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಯಾರೇ ಕಾನೂನನ್ನು ಕೈಗೆ ತೆಗೆದುಕೊಂಡರು ಅವರಿಗೆ ಶಿಕ್ಷೆ ಆಗಬೇಕು. ಯಾವರ ಮೇಲೆಯೂ ಹಲ್ಲೆ ಮಾಡುವ ಹಕ್ಕು ಯಾರಿಗೂ ಇಲ್ಲ, ಕರ್ನಾಟಕದ ಪೋಲಿಸರು ಒಳ್ಳೆ ಕೆಲಸ ಮಾಡಿದ್ದಾರೆ. ಯಾವುದೇ ರಾಜಕೀಯ ಒತ್ತಡಕ್ಕೆ ಪೊಲೀಸರು ಮಣಿಯುವುದಿಲ್ಲ ಅಂತ ನಂಬಿದ್ದೇನೆ. ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ನಟ ದರ್ಶನ್​ ವಿರುದ್ಧ ರಮ್ಯಾ ಕಿಡಿ; ಈ ಬಾರಿ ಮೋಹಕತಾರೆ ಹೇಳಿದ್ದೇನು?

https://newsfirstlive.com/wp-content/uploads/2024/06/ramya-and-dbos.jpg

Load More