newsfirstkannada.com

ಬಿಗ್‌ಬಾಸ್‌ ಜೋಡಿಯ ಕಲ್ಯಾಣ.. ಅರವಿಂದ್‌, ದಿವ್ಯಾ ಉರುಡುಗ ಇನ್ವಿಟೇಶನ್ ಕಾರ್ಡ್​ ವೈರಲ್‌!

Share :

10-11-2023

    ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 8ರಲ್ಲಿ ಈ ಇಬ್ಬರು ಭಾಗಿ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅರವಿಂದ್ ಕೆ.ಪಿ & ದಿವ್ಯಾ

    ಅರ್ಧಂಬರ್ಧ ಪ್ರೇಮಕಥೆ ಸಿನಿಮಾ ಪ್ರಮೋಶನ್​ನಲ್ಲಿ ಬ್ಯುಸಿಯಾದ ಜೋಡಿ

ಬಿಗ್​ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಅವರು ಅಭಿಮಾನಿಗಳಿಗೆ ಗುಡ್​​ನ್ಯೂಸ್​​ವೊಂದನ್ನು ಕೊಟ್ಟಿದ್ದಾರೆ. ಹೌದು ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 8ರಲ್ಲಿ ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು.

ಬಿಗ್​​ಬಾಸ್ ಮನೆಯಲ್ಲಿದ್ದಾಗ ಈ ಇಬ್ಬರ ಮಧ್ಯೆ ಸ್ನೇಹ ಬೆಳೆಯಿತು. ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಕೂಡಲೇ ಇಬ್ಬರ ನಡುವಿನ ಅನುಬಂಧ ಮುಂದುವರೆದಿದೆ. ಈಗ ತಮ್ಮ ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಇದೀಗ ಬಿಗ್​ಬಾಸ್​​ ಬೆಡಗಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಇದರ ಭಾಗವಾಗಿ ಮದುವೆಯ ಆಮಂತ್ರಣ ಪತ್ರಿಕೆಗೆ ಪೂಜೆ ಮಾಡಿಸಿದ್ದಾರೆ. ವಿಘ್ನ ವಿನಾಶಕನ ದೇವಸ್ಥಾನಕ್ಕೆ ಭೇಟಿ ಕೊಟ್ಟ ದಿವ್ಯಾ ಉರುಡುಗ ಹಾಗೂ ಅರವಿಂದ್, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಈ ಇಬ್ಬರು ಅರ್ಧಂಬರ್ಧ ಪ್ರೇಮಕಥೆ ಸಿನಿಮಾ ಪ್ರಮೋಶನ್​ನಲ್ಲಿ ಬ್ಯುಸಿಯಾಗಿದ್ದಾರೆ. ಅರ್ಧಂಬರ್ಧ ಪ್ರೇಮಕಥೆ ಸಿನಿಮಾ ರಿಲೀಸ್​ಗೆ ರೆಡಿ ಇದೆ.

ಇದರ ಮಧ್ಯೆ ತಮ್ಮ ಮದುವೆಗೆ ಎಲ್ಲ ರೀತಿಯಲ್ಲಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್‌ಬಾಸ್‌ ಜೋಡಿಯ ಕಲ್ಯಾಣ.. ಅರವಿಂದ್‌, ದಿವ್ಯಾ ಉರುಡುಗ ಇನ್ವಿಟೇಶನ್ ಕಾರ್ಡ್​ ವೈರಲ್‌!

https://newsfirstlive.com/wp-content/uploads/2023/11/bigg-boss-2023-11-10T061047.521.jpg

Load More