ಪಟಾಕಿ ಶಬ್ಧ, ನಗರದಲ್ಲಿನ ಲಕ್ಷಾಂತರ ಬೀದಿ ನಾಯಿಗಳ ಕತೆಯೇನು?
ಪ್ರೀತಿಯ ಪ್ರಾಣಿಗಳನ್ನ ರಕ್ಷಿಸಿಕೊಳ್ಳಲು ಮಾಲೀಕರು ಮಾಸ್ಟರ್ ಪ್ಲಾನ್
ಪಟಾಕಿಯಿಲ್ಲದೆ ದೀಪಗಳ ಹಬ್ಬವನ್ನು ಆಚರಣೆ ಮಾಡ್ತಾರಾ ಜನರು..?
ಬೆಳಕಿನ ಹಬ್ಬ ದೀಪಾವಳಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಪಟಾಕಿ ಸಿಡಿಸಿ ಸಂಭ್ರಮಿಸಲು ಜನರು ಸಜ್ಜಾಗಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿರುವ ಪ್ರಾಣಪ್ರಿಯರಿಗೆ ಟೆನ್ಷನ್ ಶುರುವಾಗಿದೆ. ಈ ಪಟಾಕಿಗಳ ಕರ್ಕಶ ಶಬ್ಧದಿಂದ ಸಾಕು ಪ್ರಾಣಿಗಳ ರಕ್ಷಿಸಿಕೊಳ್ಳಲು ಮಾಲೀಕರು ಹರಸಾಹಸ ಪಟ್ಬಿದ್ದಾರೆ. ತಮ್ಮ ಪ್ರೀತಿಯ ಪ್ರಾಣಿಗಳನ್ನ ಪಟಾಕಿ ಶಬ್ಧದಿಂದ ಬಚಾವ್ ಮಾಡಲು ಬೆಂಗಳೂರಿನ ಹೊರ ಭಾಗದ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಪಟಾಕಿ ಅರ್ಭಟ ಜೋರಾಗಿರುತ್ತೆ. ಮುಂದಿನ ಮೂರ್ನಾಲ್ಕು ದಿನ ಪಟಾಕಿ ಸಿಡಿಯದ ರಸ್ತೆಗಳನ್ನ ಹುಡುಕೋಕಾಗಲ್ಲ. ಆದ್ರೆ ಈ ಪಟಾಕಿ ಸೌಂಡ್ ಸಾಕು ಪ್ರಾಣಿಗಳಿಗೆ ಭಯ ಹುಟ್ಟಿಸಿ, ಜೀವಕ್ಕೆ ಅಪಾಯ ತರೋ ಸಾಧ್ಯತೆ ಹೆಚ್ಚು. ಹೀಗಾಗಿ ತಮ್ಮ ಪ್ರೀತಿಯ ಪ್ರಾಣಿಗಳನ್ನ ರಕ್ಷಿಸಿಕೊಳ್ಳಲು ಮಾಲೀಕರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ದೀಪಾವಳಿಯ ಮೂರ್ನಾಲ್ಕು ದಿನ ಹೊರವಲಯದ ಪೆಟ್ ಹೋಂ ಸ್ಟೇಗಳಲ್ಲಿ ಬಿಟ್ಟು ಬರಲು ತೀರ್ಮಾನಿಸಿದ್ದಾರೆ.
ಪ್ರಾಣಿಗಳಿಗಾಗಿ ಹೋಮ್ ಸ್ಟೇ!
ದೀಪಾವಳಿ ಹಿನ್ನೆಲೆ ನಗರದ ವಿವಿಧ ಭಾಗಗಳಿಂದ ಹೊರವಲಯದ ಪೆಟ್ ಬೋರ್ಡಿಂಗ್ಗಳ ಬುಕ್ಕಿಂಗ್ ಫುಲ್ ಆಗಿವೆ. ಸಾಕು ಪ್ರಾಣಿಗಳೇನೋ ಸೇಫ್, ಆದ್ರೆ, ನಗರದಲ್ಲಿರೋ ಲಕ್ಷಾಂತರ ಬೀದಿ ನಾಯಿಗಳ ಕತೆಯೇನು ಅಂತಿದ್ದಾರೆ ಪ್ರಾಣಿ ಪ್ರಿಯರು. ಪ್ರಾಣಿಗಳ ಹಿತದೃಷ್ಠಿಯಿಂದ ಪಟಾಕಿಯಿಲ್ಲದೆ ದೀಪಗಳಿಂದ ಹಬ್ಬ ಆಚರಿಸಿದ್ರೆ ಒಳ್ಳೇದು ಅನ್ನೋದು ಅವರ ಮನವಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ