newsfirstkannada.com

ಧರ್ಮಯುದ್ಧ ಬೇಡ.. ಸನಾತನ ವಿಚಾರವಾಗಿ ಮಾತನಾಡದಂತೆ ಸಚಿವರಿಗೆ ಡಿಕೆಶಿ ಸಲಹೆ; ಯಾಕೆ?

Share :

08-09-2023

  ಕ್ಯಾಬಿನೆಟ್​​ ಮೀಟಿಂಗ್​​ನಲ್ಲಿ ಟೀಮ್ ಮೇಟ್ಸ್​ಗೆ ಡಿಕೆಶಿ ಸಲಹೆ

  ಭವಿಷ್ಯದಲ್ಲಿ ಬೇಡ ಇಂಥಾ ಸಂಘರ್ಷ ಎಂದು ಡಿಕೆಶಿ ತೀರ್ಮಾನ!

  ಧರ್ಮ ದಂಗಲ್ ಬೆಂಕಿ ಆರಿಸಲು ಸದ್ಯ ಡಿಕೆಶಿ ಮೌನದ ಎಚ್ಚರಿಕೆ

ರಾಜಕೀಯದಲ್ಲಿ ಧರ್ಮವಿರಬೇಕೇ ವಿನಃ, ಧರ್ಮದಲ್ಲಿ ರಾಜಕೀಯ ನುಸುಳಬಾರದು. ಇದು ಧರ್ಮ. ಆದರೆ, ಇದೇ ಧರ್ಮದ ಬೇರಿಗಿಂತ ನೆರಳಿನ ಆಶ್ರಯವೇ ಪ್ರಜಾಪ್ರಭುತ್ವದ ಈ ವ್ಯವಸ್ಥೆ, ಎಲ್ಲರಿಗೂ ಅನಿವಾರ್ಯ ಆಗಿಸಿದೆ. ಮತ ಸೆಳೆಯುವ ಆಯುಧವಾಗಿ ದಶಕಗಳಿಂದ ಬಳಕೆ ಆಗ್ತಿದೆ. ಈಗಲೂ ಇದು ಚಿರ ನೂತನ, ನಿತ್ಯ ನವೀನ. ಸನಾತನ ವಿಚಾರವಾಗಿ ಎದ್ದ ವೈಚಾರಿಕ ಕದನ ಧಗಧಗಿಸ್ತಿದೆ. ರಾಜ್ಯದಲ್ಲೂ ಹೊತ್ತಿದ್ದ ಈ ಬೆಂಕಿ ಆರಿಸಲು ಸದ್ಯ ಡಿಕೆಶಿ ಮೌನದ ಎಚ್ಚರಿಕೆ ನೀಡಿದ್ದಾರೆ.

ಇದು ವೈಚಾರಿಕ ಕಿಚ್ಚಾ. ಅಂತ್ಯವಾಗದ ಜನಾಂಗಿಯ ವಾದ-ವಿವಾದ. ಜಾತಿ ಎಂಬ ಭುಜದ ಮೇಲೆ ತೂಫಾನ್​​​​ ಇಟ್ಟು, ದ್ರಾವಿಡ ಚಳುವಳಿ ಮತ್ತೆ ಧರ್ಮಯುದ್ಧಕ್ಕೆ ಕಾಲ್ಕೆರೆದಿದೆ. ದಕ್ಷಿಣದಲ್ಲಿನ ಈ ಸಮರ ಇಡೀ ದೇಶವನ್ನೇ ವೈಚಾರಿಕವಾಗಿ ಎರಡು ಹೋಳಾಗಿಸಿದೆ. ಬಿಜೆಪಿಗೆ ಇದೇ ಬ್ರಹ್ಮಾಸ್ತ್ರವಾಗಿ ಸಿಕ್ಕರೆ, ಈ ವಿಚಾರದಲ್ಲಿ ಕಾಂಗ್ರೆಸ್​ ಮೈತ್ರಿಕೂಟದ ಪಕ್ಷಗಳು ಭಿನ್ನ ಭಿನ್ನ ಹಾದಿಗೆ ಹೊರಳಿವೆ. ಆದ್ರೆ, ಕಾಂಗ್ರೆಸ್​​ ಆಯ್ದುಕೊಂಡ ಮಧ್ಯಮ ಮಾರ್ಗ ಸದ್ಯಕ್ಕೆ ದುಬಾರಿ ಆಗಿದೆ.

ರಾಜ್ಯದಲ್ಲಿ ಧರ್ಮ ದಂಗಲ್​ನಿಂದ ಎರಡು ಸರ್ಕಾರಗಳೇ ಪತನ!

ತಮಿಳುನಾಡಿನ ಉದಯನಿಧಿ ಎತ್ತಿದ ವಿವಾದದ ಬೆಂಕಿಗೆ ರಾಜ್ಯದಲ್ಲೂ ತುಪ್ಪ ಸುರಿಯಲಾಗಿದೆ. ಅದಕ್ಕೆ ಈ ಎರಡು ಹೇಳಿಕೆಗಳೇ ಸಾಕ್ಷಿ. ಒಂದು ಉದಯನಿಧಿ ಮಾತಿಗೆ ಪ್ರಿಯಾಂಕ್​ ಖರ್ಗೆ ಬಹಿರಂಗ ಬೆಂಬಲ. ಇನ್ನೊಂದು ಸನಾತನ ಹುಟ್ಟಿನ ಬಗ್ಗೆ ಪರಮೇಶ್ವರ್​​ ಆಡಿದ ಕೆಣಕಿನ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಕಿಡಿ ಹೊತ್ತಿಸಿದೆ. ಇದೇ ವಿಚಾರ ಕಾಂಗ್ರೆಸ್​ನ್ನ ಮುಜುಗರಕ್ಕೆ ತಳ್ಳಿದೆ. ಅಷ್ಟಕ್ಕೂ ಖರ್ಗೆ, ಪರಮೇಶ್ವರ್​ ಆಡಿದ್ದ ಆ ಮಾತುಗಳೇನು?

ಆರಂಭದಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ಸೆರಗಿನಲ್ಲಿ ಅವಚಿಕೊಳ್ಳಲು ಯತ್ನಿಸಿದ್ದ ಹೈಕಮಾಂಡ್​, ಆ ಬಳಿಕ ಕರ್ನಾಟಕ ಸಚಿವರ ಈ ಹೇಳಿಕೆಗಳಿಂದ ಪೇಚಿಗೆ ಸಿಲುಕುವಂತೆ ಮಾಡಿದೆ. ಸದ್ಯ ಆಗಿರುವ ಡ್ಯಾಮೇಜ್​ ಭರಿಸಲು ಸಾಧ್ಯವಿಲ್ಲ. ಆದರೆ, ಭವಿಷ್ಯದಲ್ಲಿ ಹೀಗಾಗದಂತೆ ಕಟ್ಟೆಚ್ಚರ ವಹಿಸಲಾಗ್ತಿದೆ. ಕೆಪಿಸಿಸಿ ಸಾರಥಿ, ಡಿಸಿಎಂ ಡಿಕೆಶಿ ಮೂಲಕ ಹೈಕಮಾಂಡ್​​ ಎಚ್ಚರಿಕೆ ಸಂದೇಶ ರವಾನಿಸಿದೆ. ರಾಜ್ಯ ಕಾಂಗ್ರೆಸ್​ ನಾಯಕರ ಬಾಯಿಗೆ ಬೀಗ ಹಾಕುವಂತೆ ಸೂಚಿಸಿದೆ.

ಹೌದು, ಇವತ್ತು ಸಚಿವ ಸಂಪುಟ ಸಭೆಯಲ್ಲಿ ಸನಾತನ ಕದನವೇ ಹೆಚ್ಚು ಪ್ರತಿಧ್ವನಿಸಿದೆ. 2018ರ ಚುನಾವಣೆಯಲ್ಲಿ ತಿಂದ ಪೆಟ್ಟನ್ನ ಕಾಂಗ್ರೆಸ್​​ ಇನ್ನೂ ಮರೆತಿಲ್ಲ. ಮುಂದೇ ತಪ್ಪು ಹೆಜ್ಜೆ ಇಟ್ಟು ಭವಿಷ್ಯದಲ್ಲಿ ಚಪ್ಪಡಿ ಎಳೆದುಕೊಳ್ಳಬಾರದು ಎಂಬ ತೀರ್ಮಾನಕ್ಕೆ ಡಿಸಿಎಂ ಶಿವಕುಮಾರ್ ಬಂದಂತಿದೆ. ಹಾಗಾಗಿ ನಿನ್ನೆ ನಡೆದ ಕ್ಯಾಬಿನೆಟ್​​ ಮೀಟಿಂಗ್​​ನಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಡಿಸಿಎಂ ಶಿವಕುಮಾರ್ ಕೆಲ ಸಲಹೆಗಳನ್ನ ಕೊಟ್ಟಿದ್ದಾರೆ. ಅಲ್ಲದೆ, ಪಕ್ಷಕ್ಕಾಗುವ ಹಾನಿ ಬಗ್ಗೆ ಎಚ್ಚರಿಸಿದ್ದಾರೆ.

ಸೂಚನೆ 1 : ಸನಾತನ ಸಂಬಂಧ ಯಾವುದೇ ಸಚಿವರು ಮಾತನಾಡಬೇಡಿ
ಸೂಚನೆ 2 : ರಾಜ್ಯದಲ್ಲಿ ಧರ್ಮದ ವಿಚಾರ ಯಾವುದೇ ಪರಿಣಾಮ ಬೀರಲ್ಲ
ಸೂಚನೆ 3 : ಆದ್ರೆ ಬೇರೆ ರಾಜ್ಯಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ
ಸೂಚನೆ 4 : ಕರ್ನಾಟಕ ರಾಜ್ಯ ಸಚಿವರು ಧರ್ಮ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ
ಸೂಚನೆ 5 : ಕಾಂಗ್ರೆಸ್​ಗೆ ಸನಾತನ ಮೇಲೆ ನಂಬಿಕೆ ಇಲ್ಲ ಎಂದು ಬಿಂಬಿಸ್ತಾರೆ
ಸೂಚನೆ 6 : ಕಾಂಗ್ರೆಸ್ ನಾಯಕರ, ಸಚಿವರ ಹೇಳಿಕೆಗಳು ದೇಶದ್ಯಾಂತ ಚರ್ಚೆ
ಸೂಚನೆ 7 : ರಾಜಕೀಯ ಲಾಭ ಪಡೆಯಲು ಬಿಜೆಪಿ ಸದಾ ಸಿದ್ದವಾಗಿರುತ್ತದೆ

ಸನಾತನ ಧರ್ಮ ಮತ್ತು ಸಂಸ್ಕೃತಿ ಸಂಬಂಧ ಯಾವುದೇ ಸಚಿವರು ಮಾತನಾಡಬೇಡಿ ಅಂತ ಸೂಚನೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಧರ್ಮದ ಚರ್ಚೆಯ ವಿಚಾರ ಯಾವುದೇ ಪರಿಣಾಮ ಬೀರಲ್ಲ. ಆದ್ರೆ, ಬೇರೆ ರಾಜ್ಯಗಳಲ್ಲಿ ಈ ಚರ್ಚೆ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಕರ್ನಾಟಕದ ಸಚಿವರು ಧರ್ಮ ಸೂಕ್ಷ್ಮ ವಿಚಾರವಾಗಿ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್​ಗೆ ನಾಯಕರಿಗೆ ಸನಾತನ ಧರ್ಮದ ಮೇಲೆ ನಂಬಿಕೆ ಇಲ್ಲ ಎಂದು ಬಿಂಬಿಸಲಾಗುತ್ತದೆ. ಇದೇ ವಿಚಾರ ಕಾಂಗ್ರೆಸ್ ನಾಯಕರ, ಸಚಿವರ ಹೇಳಿಕೆಗಳು ದೇಶದ್ಯಾಂತ ಚರ್ಚೆಗೆ ಗ್ರಾಸವಾಗುತ್ತೆ. ಅಲ್ಲದೆ, ನಮ್ಮ ರಾಜಕೀಯ ಬದ್ಧ ವಿರೋಧಿ ಬಿಜೆಪಿ ಇದೇ ವಿಚಾರಕ್ಕಾಗಿ ಕೂದು ಕೂತು ರಾಜಕೀಯ ಲಾಭ ಪಡೆಯುತ್ತೆ ಅಂತ ಕ್ಯಾಬಿನೆಟ್​​ ಮೀಟಿಂಗ್​​ನಲ್ಲಿ ಸಲಹೆ ರೂಪದ ಸೂಚನೆ ನೀಡಿದ್ದಾರೆ.

ಹೀಗೆ ಧರ್ಮ, ಸನಾತನ ಸಂಸ್ಕತಿ ಬಗ್ಗೆ ಯಾವುದೇ ಸಚಿವರು ಹೇಳಿಕೆ ನೀಡದಂತೆ ಡಿಸಿಎಂ ಶಿವಕುಮಾರ್ ಸೂಚನೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​​​ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಮೂರೇ ತಿಂಗಳಾಯ್ತು. ಆಗಲೇ ಧರ್ಮ ಸಂಬಂಧ ಸಂಘರ್ಷ, ಪಕ್ಷಕ್ಕೆ ಡ್ಯಾಮೇಜ್​​​ ತಂದೊಡ್ತಿದೆ. ಹೀಗಾಗಿ ಆರಂಭದಲ್ಲೇ ಈ ಮುಳ್ಳನ್ನ ಬೇಲಿಯಿಂದ ಬಿಸಾಕುವ ಯತ್ನಕ್ಕೆ ಡಿಸಿಎಂ ಡಿಕೆಶಿ ಕೈಹಾಕಿದ್ದಾರೆ.

ಒಟ್ಟಾರೆ, ಕಳೆದ ಆರು ದಿನಗಳ ಹಿಂದೆ ತಮಿಳುನಾಡಿನಲ್ಲಿ ಎದ್ದ ವಿವಾದದ ಬಿರುಗಾಳಿ, ದೇಶದಲ್ಲಿ ಸೈದ್ಧಾಂತಿಕ, ಧಾರ್ಮಿಕ, ವೈಚಾರಿಕ ಭಿನ್ನತೆಗಳ ವೈರುದ್ಯದ ಅನಾವರಣ ಆಗಿದೆ. ಈ ಬೆಂಕಿಗೆ ರಾಜ್ಯದ ಸಚಿವರು ಬೆಂಕಿ ಸುರಿಯುವ ಕೆಲಸ ಮಾಡಿದ್ದಾರೆ. ಹೀಗಾಗಿ ಡಿಕೆಶಿ ಮೂಲಕ ಹೈಕಮಾಂಡ್​​ನ ಸೂಕ್ಷ್ಮ ಸಲಹೆಗಳನ್ನ ರಾಜ್ಯ ನಾಯಕರಿಗೆ ರವಾನಿಸಿದೆ. ಅಷ್ಟಕ್ಕೂ ಡಿಕೆಶಿ ಎಚ್ಚರಿಕೆಯ ಪಾಲನೆ ಆಗುತ್ತಾ? ಧರ್ಮ ದಂಗಲ್​ ನಿಲ್ಲು0ತ್ತಾ ಅನ್ನೋದು ಕಾದುನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧರ್ಮಯುದ್ಧ ಬೇಡ.. ಸನಾತನ ವಿಚಾರವಾಗಿ ಮಾತನಾಡದಂತೆ ಸಚಿವರಿಗೆ ಡಿಕೆಶಿ ಸಲಹೆ; ಯಾಕೆ?

https://newsfirstlive.com/wp-content/uploads/2023/07/DK_Shivkumar-2.jpg

Load More