ಪ್ರಧಾನಿಗೆ ದೂರು ನೀಡೋದಾಗಿ ಮಾಜಿ ಸಿಎಂ ವಾಗ್ದಾಳಿ
ಮಾಜಿ ಸಿಎಂ ಹಾಕಿದ ‘ಸವಾಲು’ ಸ್ವೀಕರಿಸಿದ ಡಿಸಿಎಂ!
ತಕ್ಕ ಉತ್ತರ ರೆಡಿ ಇದೆ ಅಂತ ದಳಪತಿಗೆ ಡಿಕೆಶಿ ತಿರುಗೇಟು
ಹೆಚ್ಡಿಕೆ VS ಡಿಕೆಶಿ ಟಾಕ್ ವಾರ್
ನೈಸ್ ಹಗರಣದ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಟಾಕ್ ವಾರ್ ಎಪಿಸೋಡ್ ಮುಂದುವರಿದಿದೆ. ಪ್ರಧಾನಿಗೆ ದೂರು ನೀಡೋದಾಗಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಡಿಕೆ ಶಿವಕುಮಾರ್ರನ್ನ ಕೆರಳಿಸಿದೆ. ತಕ್ಕ ಉತ್ತರ ರೆಡಿ ಇದೆ ಅಂತ ಸವಾಲು ಸ್ವೀಕರಿಸಿದ ಡಿಕೆ ಶಿವಕುಮಾರ್ ಸಮರಕ್ಕೆ ಸನ್ನದ್ಧ ಅಂತ ನಿಶಾನೆ ತೋರಿದ್ದಾರೆ. ಇತ್ತ, ಜ್ಯೋತಿಷ್ಯದ ವಾಕ್ಸಮರಕ್ಕೆ ರೇವಣ್ಣ ಎಂಟ್ರಿ ಆಗಿದ್ದಾರೆ. ಕೆಲ ಕುತೂಹಲದ ವಿಷಯ ಬಾಯ್ಬಿಟ್ಟಿದ್ದಾರೆ. ಒಕ್ಕಲಿಗ ಕೋಟೆಯ ಮೇಲೆ ಪಾರುಪತ್ಯಕ್ಕಾಗಿ ಮತ್ತೊಂದು ಸುತ್ತಿನ ಸಮರ ಶುರುವಾಗಿದೆ. ಹಳೇ ಮೈಸೂರು ಭಾಗದಲ್ಲಿ ಹೆಚ್.ಡಿ ಕುಮಾರಸ್ವಾಮಿ ವರ್ಸಸ್ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಈ ಕದನ ಮತ್ತೊಂದು ಮಜಲಿಗೆ ತಲುಪಿದೆ. ಚುನಾವಣೆ ಬಳಿಕ ಏರ್ಪಟ್ಟ ಈ ಕಂದಕ, ಈಗ ಮತ್ತಷ್ಟು ವಿಸ್ತಾರವಾಗ್ತಿದ್ದು, ಲೋಕಸಭೆ ಚುನಾವಣೆಗೂ ಮುನ್ನವೇ ಕುರುಕ್ಷೇತ್ರವಾಗಿ ಮಾರ್ಪಡುವ ಸೂಚನೆಗಳು ಸಿಗುತ್ತಿವೆ.
ಕುಮಾರಸ್ವಾಮಿ ಹಾಕಿದ ‘ಸವಾಲು’ ಸ್ವೀಕರಿಸಿದ ಡಿಕೆಶಿ!
ಎರಡು ದಶಕದ ಬಳಿಕ ನೈಸ್ ಸಮರ ಮತ್ತೆ ಮುನ್ನೆಲೆಗೆ ಬಂದಿದೆ. ಡೆಲ್ಲಿ ಅಂಗಳಕ್ಕೆ ಕದನವನ್ನ ಕೊಂಡೊಯ್ಯಲು ದಳಪತಿ ಸಜ್ಜಾಗಿದ್ದಾರೆ. ನಿನ್ನೆ ಈ ಬಗ್ಗೆ ಸುಳಿವು ನೀಡಿದ್ದ ಕುಮಾರಸ್ವಾಮಿ, ನೇರವಾಗಿ ಡಿಕೆ ಶಿವಕುಮಾರ್ಯನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದರು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಬಳಿ ದೂರಿನ ಪಟ್ಟಿ ನೀಡಲು ಸಜ್ಜಾಗಿದ್ದಾಗಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಅಲ್ಲದೆ, ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡೋದಾಗಿ ಘೋಷಿಸಿದ್ದರು. ಕುಮಾರಸ್ವಾಮಿ ಆಡಿದ ಈ ಮಾತು, ಮತ್ತೊಂದು ಸುತ್ತಿನ ಮಾತಿನ ಮಲ್ಲಯುದ್ಧಕ್ಕೆ ಪಂಥಾಹ್ವಾನ ನೀಡಿತ್ತು. ಇದೇ ಪಂಥಾಹ್ವಾನವನ್ನ ಸ್ವೀಕರಿಸಿರುವ ಡಿಕೆ ಶಿವಕುಮಾರ್, ತಮ್ಮ ಮಾಜಿ ಜೋಡೆತ್ತಿನ ವಿರುದ್ಧ ಸವಾರಿ ಮಾಡಿದ್ದಾರೆ. ಕುಮಾರಸ್ವಾಮಿ ಆಡಿದ ಈ ಮಾತುಗಳೇ ಡಿಕೆ ಶಿವಕುಮಾರ್ ಸಿಟ್ಟಿನ ಕಟ್ಟೆಯೊಡೆಯಲು ಕಾರಣ ಆಗಿದೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಇರಲಿ ಬಿಡಿ ಬರಿ ನಿಮ್ಮ ಹತ್ರ ಮಾತನಾಡಿದ್ರೆ ಸಾಲದು. ಪಾಪ ಪ್ರೈಮ್ ಮಿನಿಸ್ಟರ್‌ವರೆಗೂ ಮಾತಾಡಿದ್ದಾರೆ. ಅವರಿಗೆ ತಕ್ಕಂತೆ ಉತ್ತರ ಕೊಡಬೇಕಲ್ವಾ ಕೊಡ್ತೇನೆ ಅಂತ ಹೆಚ್.ಡಿ ಕುಮಾರಸ್ವಾಮಿ ಸವಾಲನ್ನ ಡಿ.ಕೆ ಶಿವಕುಮಾರ್ ಸ್ವೀಕರಿಸಿದ್ದಾರೆ.
ಜ್ಯೋತಿಷ್ಯದ ಬಗ್ಗೆ ಕುಮಾರಸ್ವಾಮಿ, ಡಿಸಿಎಂ ಡಿಕೆಶಿ ವಾರ್
ಜ್ಯೋತಿಷ್ಯದ ‘ಕೃತಕಶಕ್ತಿ’ಯ ವಾಕ್ಸಮರಕ್ಕೆ ರೇವಣ್ಣ ಎಂಟ್ರಿ
ಜ್ಯೋತಿಷ್ಯದ ಬಗ್ಗೆ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ವಾಕ್ಸಮರಕ್ಕೆ ರೇವಣ್ಣ ಕೂಡ ಎಂಟ್ರಿ ಆಗಿದ್ದಾರೆ.. ಹಾಸನದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಬ್ರದರ್, ಏನ್ ತೆಲಂಗಾಣ, ಅದೇನ್ ಗೊತ್ತಿಲ್ಲಪ್ಪ, ನಾನ್ಯೇಕೆ ತೆಲಂಗಾಣಕ್ಕೆ ಹೋಗಲಿ, ವಿಶೇಷತೆ ಏನಿಲ್ಲ. ನನಗೆ ಅವರ ಹೆಸರು ಗೊತ್ತಿಲ್ಲ, ನಮ್ಮ ಮನೆಗೆ ಬಂದು ಆಶೀರ್ವಾದ ಮಾಡ್ತಿನಿ ಅಂದ್ರು, ಮಾಡಿ ಅಂದೆ ಅಷ್ಟೇ ಅಂತ ಹೇಳಿದ್ದಾರೆ. ಒಟ್ಟಾರೆ, ನೈಸ್ ಹಗರಣದ ದಾಖಲೆ ಕೇವಲ ನೆಪ ಅನ್ನೋದು ಎಲ್ಲರೂ ಬಲ್ಲ ಸತ್ಯ.. ಒಕ್ಕಲಿಗರ ಸಾಮ್ರಾಜ್ಯದಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಸಮರ ಇದು ಅನ್ನೋದೇ ಸತ್ಯ.. ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ಓಟಕ್ಕೆ ಲಗಾಮು ಹಾಕೋಡೆ ಹೆಚ್.ಡಿ ಕುಮಾರಸ್ವಾಮಿಅವರ ಮುಖ್ಯ ಅಜೆಂಡಾ.. ಈ ಅಜೆಂಡಾವೇ ಯುದ್ಧರಂಗದಲ್ಲಿ ಝೆಂಡಾ ಹಾರಲು ಕಾರಣವಾಗಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ