newsfirstkannada.com

ತಾರಕಕ್ಕೇರಿದ ಕನಕಪುರ ಕದನ.. ಡಿಕೆಶಿಗೆ ವಾರ್ನಿಂಗ್​ ಕೊಟ್ಟ ಹೆಚ್​​.ಡಿ ಕುಮಾರಸ್ವಾಮಿ

Share :

26-10-2023

  ಕನಕಪುರ ಕದನ.. ಡಿಸಿಎಂ, ಮಾಜಿ ಸಿಎಂ ವಾಗ್ಬಾಣ

  ಡಿಸಿಎಂ ವಿರುದ್ಧ ಮಾಜಿ ಸಿಎಂ ವಾಗ್ಬಾಣ ಪ್ರಯೋಗ

  ‘ಬ್ರ್ಯಾಂಡ್ ಬೆಂಗಳೂರಲ್ಲ.. ಗಾರ್ಬೇಜ್ ಬೆಂಗಳೂರು’

ಬೆಂಗಳೂರು: ಡಿ.ಕೆ ಶಿವಕುಮಾರ್​​, ಹೆಚ್​​ಡಿ ಕುಮಾರಸ್ವಾಮಿ ಮಧ್ಯೆ ಕನಕಪುರ ಕದನ ಮತ್ತಷ್ಟು ತಾರಕಕ್ಕೇರಿದೆ. ಕೈ ಕ್ಯಾಪ್ಟನ್ ಬಿಟ್ಟಿದ್ದ ರಾಮಬಾಣಕ್ಕೆ ದಳಪತಿ ಕೆಂಡಾಮಂಡಲ ಆಗಿದ್ದಾರೆ. ಬ್ರ್ಯಾಂಡ್ ಬೆಂಗಳೂರಿಗೆ ಬಂಡೆಗಳ ನಾಡನ್ನ ಸೇರಿಸುವ ಕನಕಾಧಿಪತಿಯ ಚಿಂತನೆಗೆ ಕೌಂಟರ್‌ ಅಟ್ಯಾಕ್ ಮಾಡಿದ್ದಾರೆ. ಜೊತೆಗೆ ಡಿಕೆ ಹಾಕಿದ್ದ ಸವಾಲನ್ನೂ ಹೆಚ್‌ಡಿಕೆ ಸ್ವೀಕರಿಸಿದ್ದಾರೆ. ಚಾಲೆಂಜ್ ಅಕ್ಸೆಪ್ಟ್ ಮಾಡಿದ್ದಕ್ಕೆ ಡಿಸಿಎಂ ಚರ್ಚೆಗೆ ರಣವೀಳ್ಯ ಕೊಟ್ಟಿದ್ದಾರೆ.

ವೀರಭದ್ರನ ಸನ್ನಿಧಿಯಲ್ಲಿ ಕನಕಾಧಿಪತಿ ಮಾಡಿದ್ದ ಶಪಥ ದಳಪತಿಯನ್ನ ರೊಚ್ಚಿಗೇಳುವಂತೆ ಮಾಡಿದೆ. ಡಿಸಿಎಂ ವಿರುದ್ಧ ಮಾತಿನ ವಾಗ್ಬಾಣಗಳನ್ನ ಬಿಡುವಂತೆ ಮಾಡಿದೆ. ರಾಮನಗರವನ್ನ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿಸೋ ಡಿಕೆಶಿ ಚಿಂತನೆಗೆ ರಾಮನಗರದ ಸರದಾರ ಹೆಚ್‌ಡಿಕೆ ಮಾತಿನ ಬೆಂಕಿ ಮಳೆಯನ್ನೇ ಸುರಿಸಿದ್ದಾರೆ.

ಬ್ರ್ಯಾಂಡ್ ಅಲ್ಲ, ಗಾರ್ಬೇಜ್ ಬೆಂಗಳೂರು ಅಂತ ದಳಪತಿ ಕಿಡಿಕಿಡಿ!

ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡಲು ಡಿಕೆಶಿ ಕಾರ್ಯಪ್ರವೃತ್ತರಾಗಿದ್ದಾರೆ.. ಇದ್ರಿಂದ ಕುಪಿತಗೊಂಡಿರೋ ಮಾಜಿ ಸಿಎಂ ಕುಮಾರಸ್ವಾಮಿ ಕನಕಪುರದ ಕಲಿಯ ವಿರುದ್ಧ ನಿಗಿ ನಿಗಿ ಕೆಂಡವಾಗಿದ್ರು.. ಬೆಂಗಳೂರು ದಕ್ಷಿಣ ಅಂತ ಮರುನಾಮಕರಣ ಮಾಡುವ ಡಿಕೆ ಚಿಂತನೆಗೆ ಮಾತಿನ ಮಿಸೈಲ್ ದಾಳಿ ನಡೆಸಿದ್ರು. ನಿಮ್ಮದು ಬ್ರ್ಯಾಂಡ್ ಬೆಂಗಳೂರಲ್ಲ.. ಗಾರ್ಬೇಜ್ ಬೆಂಗಳೂರು ಅಂತ ಕಿಡಿಕಾರಿದ್ರು. ರಾಮನಗರದ ಜೊತೆಗಿರೋ ಭಾವನಾತ್ಮಕ ಸಂಬಂಧ ವಿವರಿಸುತ್ತಾ ಅಮರಣಾಂತ ಉಪವಾಸದ ಎಚ್ಚರಿಕೆ ನೀಡಿದ್ರು.

ರಾಮನಗರವನ್ನ ನಾವು ಅಭಿವೃದ್ಧಿ ಮಾಡಿದ್ದೇವೆ ಎಂದ ಹೆಚ್‌ಡಿಕೆ

ಇನ್ನೂ ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡಿ ಯಾರಿಗೆ ದಕ್ಷಿಣೆ ಕೊಡಲು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡ್ತಿದ್ದೀರಿ ಅಂತ ಹೆಚ್‌ಡಿಕೆಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಜೊತೆಗೆ ನಿಮ್ಮ ಪಟಾಲಂ ಲೂಟಿ ಹೊಡೆಯೋಕೆ ಈ ಪ್ಲಾನ್‌ ಅಂತ ಟಕ್ಕರ್ ಕೊಟ್ಟಿದ್ದಾರೆ.. ಜೊತೆಗೆ ರಾಮನಗರ ಅಭಿವೃದ್ಧಿಯ ಉದಾಹರಣೆ ಕೊಟ್ಟಿದ್ದಾರೆ.

ಸಹೋದರನ ಬೆನ್ನಿಗೆ ನಿಂತ ಮಾಜಿ ಸಚಿವ ಹೆಚ್​.ಡಿ ರೇವಣ್ಣ

ಕುಮಾರಸ್ವಾಮಿ-ಡಿಕೆ ಶಿವಕುಮಾರ್‌ ನಡುವಿನ ರಾಮನಗರ ಕದನದೊಳಗೆ ಹೆಚ್‌.ಡಿ. ರೇವಣ್ಣ ಕೂಡಾ ಎಂಟ್ರಿ ಕೊಟ್ಟಿದ್ದಾರೆ. ರಾಮನಗರಕ್ಕೆ ಹೆಚ್​ಡಿಕೆಯ ಕೊಡುಗೆ ಏನು ಅಂತ ವಿವರಿಸುತ್ತಾ ಡಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಬಹಿರಂಗ ಚರ್ಚೆಗೆ ಓಕೆ ಎಂದ ಹೆಚ್‌ಡಿಕೆಗೆ ಡಿಕೆ ಸ್ವಾಗತ

ನ್ಯೂಸ್‌ಚಾನಲ್‌ನಲ್ಲಿ ಚರ್ಚೆಗೆ ಡಿಕೆಶಿ ಕೊಟ್ಟಿದ್ದ ರಣವೀಳ್ಯಕ್ಕೆ ಹೆಚ್‌ಡಿಕೆ ಓಕೆ ಎಂದಿದ್ದಾರೆ. ಇತ್ತ ದಳಪತಿ ಚರ್ಚೆಯನ್ನ ಸ್ವೀಕರಿಸ್ತಿದ್ದನ್ನ ಡಿಕೆಶಿ ಸ್ವಾಗತಿಸಿದ್ದಾರೆ. ಜೊತೆಗೆ ಅಸೆಂಬ್ಲಿಯಲ್ಲಿ ತಕ್ಕ ಉತ್ತರ ಕೊಡೋದಕ್ಕೆ ನಾ ರೆಡಿ ಎಂದಿದ್ದಾರೆ.

ಶಿವ -ಕುಮಾರ ರಾಮನಗರ ಕದನದೊಳಗೆ ಬಿಜೆಪಿ ಕೂಡಾ ಕಲ್ಲು ತೂರಿದೆ. ಆ ದಿನಗಳ ಸಾಮ್ರಾಜ್ಯ ಕಟ್ಟಿಕೊಳ್ಳಲು ಡಿಕೆಶಿ ಈ ಪ್ಲಾನ್ ಮಾಡ್ತಿದ್ದಾರೆ ಅಂತ ಲೇವಡಿ ಮಾಡಿದೆ. ಒಟ್ಟಾರೆ, ಕನಕಪುರದಿಂದ ಶುರುವಾದ ಕದನ ಮತ್ಯಾವ ಹಂತಕ್ಕೆ ತಲುಪುತ್ತೋ? ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾರಕಕ್ಕೇರಿದ ಕನಕಪುರ ಕದನ.. ಡಿಕೆಶಿಗೆ ವಾರ್ನಿಂಗ್​ ಕೊಟ್ಟ ಹೆಚ್​​.ಡಿ ಕುಮಾರಸ್ವಾಮಿ

https://newsfirstlive.com/wp-content/uploads/2023/10/HDK_DKS-1.jpg

Load More