newsfirstkannada.com

ಆಪರೇಷನ್​ ಹಸ್ತಕ್ಕೆ ಮುಂದಾದ ಡಿಕೆ ಬ್ರದರ್ಸ್​.. BJP ಮಾಜಿ ಬಿಬಿಎಂಪಿ ಸದಸ್ಯರನ್ನ ಸೆಳೆಯಲು ಬಿಗ್​ ಪ್ಲಾನ್​

Share :

12-09-2023

    ಬಿಬಿಎಂಪಿಯಲ್ಲೂ ಆಪರೇಷನ್ ಹಸ್ತ ವಾಸನೆ

    ಡಿಸಿಎಂ ಆರ್‌ ಅಶೋಕ್ ಗೆ ಠಕ್ಕರ್ ಕೊಡಲು ಕಾಂಗ್ರೆಸ್​ ಪ್ಲಾನ್

    ಬಿಜೆಪಿ ಮಾಜಿ ಬಿಬಿಎಂಪಿ ಸದಸ್ಯರನ್ನ ಕಾಂಗ್ರೆಸ್​ನತ್ತ ಬರಲು ಆಪರೇಷನ್​​

ಕಾಂಗ್ರೆಸ್ ಮುಂಬರುವ ಚುನಾವಣೆಗಾಗಿ ತನ್ನ ಚಿತ್ತವನ್ನ ಬಿಬಿಎಂಪಿಯತ್ತ ನೆಟ್ಟಿದೆ. ಹೀಗಾಗಿ ಬಿಬಿಎಂಪಿಯಲ್ಲೂ ಆಪರೇಷನ್ ಹಸ್ತ ಮುಂದುವರೆದಿದೆ. ಮಾಜಿ ಡಿಸಿಎಂ ಆರ್‌ ಅಶೋಕ್ ಗೆ ಠಕ್ಕರ್ ಕೊಡಲು ಕಾಂಗ್ರೆಸ್​ ಪ್ಲಾನ್ ಹೆಣೆದಿದೆ.

ಆರ್‌ ಅಶೋಕ್ ಕ್ಷೇತ್ರದಲ್ಲಿಯೇ ಡಿಕೆ ಬ್ರದರ್ಸ್ ಮೇಜರ್ ಸರ್ಜರಿ ನಡೆದಿದ್ದು, ಅಶೋಕ್ ಗೆಲುವಿಗೆ ರೂವಾರಿಗಳಾಗಿದ್ದವರನ್ನ ಡಿಕೆ ಬ್ರದರ್ಸ್ ಸೆಳೆಯುತ್ತಿದ್ದಾರೆ. ಪದ್ಮನಾಭನಗರದ ಬಿಜೆಪಿ ಮಾಜಿ ಬಿಬಿಎಂಪಿ ಸದಸ್ಯರನ್ನ ಕಾಂಗ್ರೆಸ್​ನತ್ತ ಬರಲು ಆಪರೇಷನ್​​ ಹಸ್ತದ ಮೊರೆ ಹೋಗಿದ್ದಾರೆ. ಇದೇ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಆಪರೇಷನ್ ಹಸ್ತದಿಂದ ಕಾಂಗ್ರೆಸ್​​ನತ್ತ ಮುಖ ಮಾಡಿದ್ದಾರೆ ಎನ್ನಲಾದ ಸದಸ್ಯರ ಪಟ್ಟಿ ಇಲ್ಲಿದೆ 

  •  ಎಲ್. ಶ್ರೀನಿವಾಸ್ , ಮಾಜಿ ಉಪ ಮಹಾಪೌರರು ಮತ್ತು ಮಾಜಿ ಪಾಲಿಕೆ ಸದಸ್ಯರು
  • ಆಂಜಿನಪ್ಪ, ಮಾಜಿ ನಗರಸಭೆ ಸದಸ್ಯರು, ಬೊಮ್ಮನಹಳ್ಳಿ
  • ಶೋಭ ಆಂಜಿನಪ್ಪ, ಮಾಜಿ ಬಿಬಿಎಂಪಿ ಸದಸ್ಯರು ಪದ್ಮನಾಭನಗರ ವಾರ್ಡ್
  • ಗೋವಿಂದ ರಾಜ್ .ಗಣೇಶ ಮಂದಿರ ವಾರ್ಡ ಮಾಜಿ ಪಾಲಿಕೆ ಸದಸ್ಯ
  • ಹೆಚ್. ನಾರಾಯಣ್, ಮಾಜಿ ಬಿಬಿಎಂಪಿ ಸದಸ್ಯರು
  • ಹೊಸಕೆರೆಹಳ್ಳಿ ವಾರ್ಡ್ ಮತ್ತು ಮಾಜಿ ಅಧ್ಯಕ್ಷರು ಆರೋಗ್ಯ ಸ್ಥಾಯಿ ಸಮಿತಿ ಬಿಬಿಎಂಪಿ
  • ವೆಂಕಟಸ್ವಾಮಿ ನಾಯ್ಡು, ಮಾಜಿ ಪಾಲಿಕೆ ಸದಸ್ಯರು, ಚಿಕ್ಕಲ್ಲಸಂದ್ರ ವಾರ್ಡ್
  • ಹೆಚ್. ಸುರೇಶ್ ಮಾಜಿ ಪಾಲಿಕೆ ಸದಸ್ಯರು, ಕುಮಾರಸ್ವಾಮಿ ಬಡಾವಣೆ ವಾರ್ಡ್
  • ಸುಪ್ರಿಯ ಶೇಖರ್, ಬಿಬಿಎಂಪಿ ಮಾಜಿ ಸದಸ್ಯರು, ಚಿಕ್ಕಕಲ್ಲಸಂದ್ರ ವಾರ್ಡ್, ಪದ್ಮನಾಭ ನಗರ
  • ಲಕ್ಷ್ಮಿ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್, ಬೆಂಗಳೂರು ನಗರ
  • ರಂಗದಾಮೇಗೌಡ , ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ
  • ಪ್ರಸಾದ್ ಬಾಬು, ಜಿಡಿಎಸ್ ಮುಖಂಡ ( ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಪರೇಷನ್​ ಹಸ್ತಕ್ಕೆ ಮುಂದಾದ ಡಿಕೆ ಬ್ರದರ್ಸ್​.. BJP ಮಾಜಿ ಬಿಬಿಎಂಪಿ ಸದಸ್ಯರನ್ನ ಸೆಳೆಯಲು ಬಿಗ್​ ಪ್ಲಾನ್​

https://newsfirstlive.com/wp-content/uploads/2023/08/DKS-1-2.jpg

Load More