newsfirstkannada.com

ಸರ್ಕಾರದ ವಿರುದ್ಧ ಬಾಣ ಹೂಡಿರೋ ದಳಪತಿಗೆ ಡಿ.ಕೆ.ಶಿವಕುಮಾರ್ ಸೈಲೆಂಟ್ ಸ್ಟ್ರೋಕ್..!

Share :

16-08-2023

  ಚನ್ನಪಟ್ಟಣದಲ್ಲಿ HDKಯಿಂದ ಮಾಜಿ ಶಾಸಕನ ನಿರ್ಲಕ್ಷ್ಯ ಆರೋಪ

  ತೆನೆ ಇಳಿಸಿ ಕಾಂಗ್ರೆಸ್​ ಪಕ್ಷ ಸೇರಿಸಿಕೊಳ್ಳಲು ಶಿವಕುಮಾರ್ ಪ್ಲಾನ್

  HDK ಕೋಟೆ ಕೆಡವಿ ಕಾಂಗ್ರೆಸ್ ಸಾಮ್ರಾಜ್ಯ ಕಟ್ಟಲು ಯೋಜನೆ

ರಾಮನಗರ: ಸರ್ಕಾರದ ಮೇಲೆ ಬಾಣ ಹೂಡಿರೋ ದಳಪತಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೈಲೆಂಟ್ ಆಗಿ ಸ್ಟ್ರೋಕ್ ನೀಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ನ್ಯೂಸ್​ಫಸ್ಟ್​​ಗೆ ಲಭ್ಯವಾಗಿದೆ.

ಮಾಜಿ ಮುಖ್ಯಮಂತ್ರಿ ಹೆಚ್.​ಡಿ.ಕುಮಾರಸ್ವಾಮಿ ಕೊಟೆಯನ್ನು ಕಡೆಗಲು ಶಿವಕುಮಾರ್ ಪ್ಲಾನ್ ಮಾಡಿದ್ದಾರಂತೆ. ಡಿ.ಕೆ.ಶಿವಕುಮಾರ್​ ಅವರನ್ನು ಟಾರ್ಗೆಟ್ ಮಾಡಿರುವ ಕುಮಾರಸ್ವಾಮಿ ಸರ್ಕಾರದ ಮೇಲೆ ಸಾಲು ಸಾಲ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತವರು ಜಿಲ್ಲೆಯನ್ನು ವಶಕ್ಕೆ ಪಡೆಯಲು ಶಿವಕುಮಾರ್ ತಂತ್ರ ರೂಪಿಸಿ ಮಾಜಿ ಶಾಸಕನಿಗೆ ಗಾಳ ಹಾಕಿದ್ದಾರಂತೆ.

ಚನ್ನಪಟ್ಟಣ ಜೆಡಿಎಸ್ ಮಾಜಿ ಶಾಸಕ ಎಂ.ಸಿ.ಅಶ್ವಥ್​ಗೆ ಡಿ.ಕೆ.ಶಿವಕುಮಾರ್ ಗಾಳ ಹಾಕಿದ್ದಾರಂತೆ. ದಳಪತಿಯಿಂದ ಕ್ಷೇತ್ರದ ಮಾಜಿ ಶಾಸಕನಿಗೆ ಸ್ಪಂದನೆ ಸಿಗುತ್ತಿಲ್ಲ ಅನ್ನೋದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಡಿ.ಕೆ.ಶಿವಕುಮಾರ್​, ಕಾಂಗ್ರೆಸ್​ ಪಕ್ಷಕ್ಕೆ ಅವರನ್ನು ಕರೆ ತರುವ ಪ್ಲಾನ್​​ನಲ್ಲಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಎಂ.ಸಿ.ಅಶ್ವಥ್, ಕುಮಾರಸ್ವಾಮಿ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಮಾತ್ರವಲ್ಲ, ಹೆಚ್ಚು ಮತವನ್ನು ಕುಮಾರಸ್ವಾಮಿ ಪರ ಹಾಕಿಸಿದ್ದರು. ಅಶ್ವಥ್, ಚನ್ನಪಟ್ಟಣದಲ್ಲಿ ವೈಯಕ್ತಿಕವಾಗಿಯೂ ಹೆಚ್ಚಿನ ಮತಗಳನ್ನು ಹೊಂದಿದ್ದಾರೆ. ಹೀಗಾಗಿ ಮಾಜಿ ಶಾಸಕನ ಜೊತೆ ಮಾತನಾಡಿರೋ ಡಿ.ಕೆ.ಶಿವಕುಮಾರ್, ಸದ್ಯದಲ್ಲೇ ತೆನೆ ಇಳಿಸಿ ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ದಳಪತಿ ಕೋಟೆ ಕೆಡವಲು ಡಿ.ಕೆ.ಶಿವಕುಮಾರ್ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರದ ವಿರುದ್ಧ ಬಾಣ ಹೂಡಿರೋ ದಳಪತಿಗೆ ಡಿ.ಕೆ.ಶಿವಕುಮಾರ್ ಸೈಲೆಂಟ್ ಸ್ಟ್ರೋಕ್..!

https://newsfirstlive.com/wp-content/uploads/2023/08/HDK_DKS.jpg

Load More