newsfirstkannada.com

‘ನಾನು ಅಭಿವೃದ್ಧಿಗೂ ಸೈ, ರಾಜಕಾರಣಕ್ಕೂ ಸೈ’- ಸಭೆಯಲ್ಲಿ ಬಿಜೆಪಿ ಶಾಸಕರಿಗೆ ವಾರ್ನಿಂಗ್​ ಕೊಟ್ರಾ ಡಿಕೆಶಿ..?

Share :

05-06-2023

    ಇಂದು ಡಿಸಿಎಂ ಡಿ.ಕೆ ಶಿವಕುಮಾರ್​​ ನೇತೃತ್ವದಲ್ಲಿ ಸಭೆ

    ಸಭೆಯಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ

    'ನಾನು ಅಭಿವೃದ್ಧಿಗೂ ಸೈ, ರಾಜಕಾರಣಕ್ಕೂ ಸೈ' ಎಂದ ಡಿಕೆಶಿ

ಇಂದು ಡಿಸಿಎಂ ಡಿ.ಕೆ ಶಿವಕುಮಾರ್​ ನೇತೃತ್ವದಲ್ಲಿ ವಿಧಾನಸೌಧಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿ ಕುರಿತು ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರಿನ ಎಲ್ಲಾ ಶಾಸಕರು, ಸಂಸದರು, ಎಂಎಲ್ಸಿಗಳು ಭಾಗಿಯಾಗಿದ್ದರು. ಈ ವೇಳೆ ಮಾತಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​​​, ನೀವು ಯಾವುದೇ ಪಕ್ಷದವರು ಆಗಿರಬಹುದು. ಬೆಂಗಳೂರಿನ ಅಭಿವೃದ್ಧಿಗಾಗಿ ಒಟ್ಟಿಗೆ ಕೆಲಸ ಮಾಡೋಣ ಎಂದರು.

ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡೋಣ. ರಾಜಕೀಯವೇ ಮಾಡ್ತೀವಿ ಅಂದರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸರಿ, ಸಂಘರ್ಷಕ್ಕೂ ರೆಡಿ. ನನಗೆ ದ್ವೇಷದ ರಾಜಕೀಯ ಬೇಕಿಲ್ಲ. ಅದರಲ್ಲಿ ನನಗೆ ಯಾವುದೇ ನಂಬಿಕೆಯಿಲ್ಲ ಎಂದರು ಡಿಸಿಎಂ ಡಿ.ಕೆ ಶಿವಕುಮಾರ್.

ಇಡೀ ಬೆಂಗಳೂರಿಗೆ ಒಳ್ಳೇ ಹೆಸರಿದೆ. ಅದರ ರಕ್ಷಣೆ ನಮ್ಮ ಹೊಣೆ. ಇದು ಬ್ಯಾಡ್​​ ಅಲ್ಲ, ಬೆಸ್ಟ್​ ಬೆಂಗಳೂರು ಆಗಬೇಕು. ಗ್ಲೋಬಲ್​ ಬೆಂಗಳೂರು ಆಗಬೇಕು. ಕುಡಿಯುವ ನೀರು, ಕಸ ಮತ್ತು ಟ್ರಾಫಿಕ್​​ ಸಮಸ್ಯೆಗಳನ್ನು ಬಗೆಹರಿಸಬೇಕು. ಮಿಷನ್​ ಬೆಂಗಳೂರು ಎಂದು ಒಂದು ಸಮಿತಿ ಮಾಡೋಣ. ಇಡೀ ನಗರದಲ್ಲಿ ಒಂದು ವಾರ್ಡ್​​ನಲ್ಲಿ ಕೆಲಸ ಆದ್ರೂ ಅದರ ದಾಖಲೆ ಬೇಕು. ವಿಡಿಯೋ ಸಮೇತ ಅದು ಅಪ್ಲೋಡ್​ ಆಗಬೇಕು. ಎಲ್ಲದಕ್ಕೂ ಫೈಲ್​ ಇರಬೇಕು, ಕಾರ್ಪೋರೇಟ್​ ಸ್ಟೈಲ್​​ನಲ್ಲಿ ಕೆಲಸ ಆಗಬೇಕು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನು ಅಭಿವೃದ್ಧಿಗೂ ಸೈ, ರಾಜಕಾರಣಕ್ಕೂ ಸೈ’- ಸಭೆಯಲ್ಲಿ ಬಿಜೆಪಿ ಶಾಸಕರಿಗೆ ವಾರ್ನಿಂಗ್​ ಕೊಟ್ರಾ ಡಿಕೆಶಿ..?

https://newsfirstlive.com/wp-content/uploads/2023/06/DK_Shivkumar.jpg

Load More