newsfirstkannada.com

‘ಆರ್​.ಅಶೋಕ್​ಗೆ ಸ್ವಲ್ಪ ಸಮಸ್ಯೆ ಇದೆ, ನಾವು ಯಾಕೆ ಮೋದಿ ಸ್ವಾಗತಕ್ಕೆ ಬಂದಿಲ್ಲ ಅಂದರೆ..’ ಅಸಲಿ ವಿಚಾರ ಹೇಳಿದ ಡಿ.ಕೆ.ಶಿವಕುಮಾರ್

Share :

26-08-2023

    ಮೋದಿ ಸ್ವಾಗತ ವಿಚಾರದಲ್ಲಿ ಪ್ರೋಟೋಕಾಲ್ ಉಲ್ಲಂಘನೆ ಆರೋಪ

    ಮುಖ್ಯಮಂತ್ರಿ, ನಾನು ಮೋದಿ ಸ್ವಾಗತಿಸಲು ಸಿದ್ಧರಿದ್ದೇವು

    ಯಾರಿಗೆ ಎಷ್ಟು ಗೌರವ ಕೊಡಬೇಕು ಎಂದು ಗೊತ್ತಿದೆ

ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಇವತ್ತು ಭೇಟಿ ನೀಡಿದ್ದರು. ರಾಜ್ಯಕ್ಕೆ ಆಗಮಿಸಿದ್ದ ಮೋದಿಯ ಸ್ವಾಗತ ವಿಚಾರದಲ್ಲಿ ರಾಜ್ಯ ಸರ್ಕಾರ ಪ್ರೋಟೋಕಾಲ್‌ ಉಲ್ಲಂಘನೆ ಮಾಡಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಆರೋಪಿಸಿದ್ದರು.

ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್.. ನೋಡಿ ಆರ್‌.ಅಶೋಕ್ ಅವರಿಗೆ ಸ್ವಲ್ಪ ಸಮಸ್ಯೆ ಇದೆ. ಆರ್.ಅಶೋಕ್ ಅವರನ್ನು ಕೇಂದ್ರ ಸರ್ಕಾರ, ಪ್ರಧಾನಿ ಕಚೇರಿ ಎಷ್ಟು ದೂರ ಇಟ್ಟಿದ್ದಾರೆ ಇವೆಲ್ಲ ಸಾಕ್ಷಿ. ಸಮಯ ಪ್ರಜ್ಞೆ, ರಾಜಕೀಯ ಪ್ರಜ್ಞೆ, ಪ್ರೋಟೋಕಾಲ್, ಯಾರಿಗೆ ಎನು ಗೌರವ ನೀಡಬೇಕು ಅನ್ನೋದು ಬಿಜೆಪಿಯವರಿಗಿಂತ ನಮಗೆ ಜಾಸ್ತಿ ಗೊತ್ತಿದೆ. ಪ್ರೋಟೋಕಾಲ್ ಪ್ರಕಾರವೇ ಮೋದಿಯನ್ನು ನಾವು ರಿಸೀವ್ ಮಾಡೋಕೆ ಸಿದ್ಧರಿದ್ದೇವು. ರಾಜ್ಯಕ್ಕೆ ಮೊದಲ ಬಾರಿಗೆ ಪ್ರಧಾನಿ ಬರುತ್ತಿದ್ದರು. ಚಂದ್ರಯಾನ-3 ನಮ್ಮ ರಾಜ್ಯದಲ್ಲಿ ಯಶಸ್ವಿ ಆಗಿದೆ. ಸಿಎಂ ಸಿದ್ದರಾಮಯ್ಯ ಸೇರಿ ನಾವೆಲ್ಲರೂ ಸಿದ್ಧರಾಗಿದ್ದೇವು ಎಂದರು.

ಆದರೆ ಪ್ರಧಾನಿ ಕಚೇರಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರವಾಣಿ ಕರೆ ಬಂದಿತ್ತು. ನಾವು ಅದನ್ನು ಒಪ್ಪದೇ ಅಧಿಕೃತವಾಗಿ ಪತ್ರ ನೀಡಿ ಎಂದು ಮನವಿ ಮಾಡಿದ್ವಿ. ನಂತರ ಪ್ರಧಾನಿ ಕಚೇರಿಯಿಂದಲೇ ರಾಜ್ಯಪಾಲರು ಸೇರಿದಂತೆ ಯಾರೂ ಬರುವುದು ಬೇಡ ಎಂದು ಪತ್ರ ಬಂದಿದೆ. ನಮಗೆ ಯಾರಿಗೆ ಎಷ್ಟು ಗೌರವ ನೀಡಬೇಕು ಗೊತ್ತಿದೆ. ನಿಮಗೆ ಇಲ್ಲದೇ ಇರಬಹುದು, ನಾನು ಬೇಕಾದರೆ ದಾಖಲೆ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಆರ್​.ಅಶೋಕ್​ಗೆ ಸ್ವಲ್ಪ ಸಮಸ್ಯೆ ಇದೆ, ನಾವು ಯಾಕೆ ಮೋದಿ ಸ್ವಾಗತಕ್ಕೆ ಬಂದಿಲ್ಲ ಅಂದರೆ..’ ಅಸಲಿ ವಿಚಾರ ಹೇಳಿದ ಡಿ.ಕೆ.ಶಿವಕುಮಾರ್

https://newsfirstlive.com/wp-content/uploads/2023/08/SIDDU-9.jpg

Load More