newsfirstkannada.com

‘5 ವರ್ಷ ನಮ್ಮದೇ ಸರ್ಕಾರ, ನಾನೇ ಸಿಎಂ’ ಸಿದ್ದರಾಮಯ್ಯ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು ಗೊತ್ತಾ..?

Share :

03-11-2023

    ಹೈಕಮಾಂಡ್ ಎಚ್ಚರಿಕೆ ನಡ್ವೆಯೂ ಸಿದ್ದು ಬಹಿರಂಗ ಹೇಳಿಕೆ

    ಯಾರು ಏನೇ ಹೇಳಿದ್ರೂ ಪಕ್ಷ ಹೇಳಿದ್ದನ್ನು ಮಾಡ್ತೀವಿ-ಡಿಕೆಎಸ್​

    ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ ಸಿದ್ದರಾಮಯ್ಯರ ಹೇಳಿಕೆ

ಕಾಂಗ್ರೆಸ್​​ನಲ್ಲಿ ಪವರ್​ ಶೇರಿಂಗ್ ಫೈಟ್ ನಡುವೆ ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಹೇಳಿಕೆ ಸಾಕಷ್ಟು ರಾಜಕೀಯ ಲೆಕ್ಕಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಹೈಕಮಾಂಡ್ ಎಚ್ಚರಿಕೆ ನಡುವೆಯೂ ಸಿದ್ದರಾಮಯ್ಯ ಬಹಿರಂಗ ಹೇಳಿಕೆ ಹಿಂದೆ ಹೈಕಮಾಂಡ್ ಅಭಯ ಇದ್ಯಾ ಎಂಬ ಅನುಮಾನ ಜೋರಾಗಿದೆ.

ಕಾಂಗ್ರೆಸ್ ಸರ್ಕಾರದಲ್ಲಿ ಬಣ ರಾಜಕೀಯ ನಡೆಯುತ್ತಿದ್ದು ಅಧಿಕಾರ ಹಂಚಿಕೆ ಕುರಿತು ಸಿಎಂ-ಡಿಸಿಎಂ ಬೆಂಬಲಿಗರು ಹಾದಿ-ಬೀದಿಯಲ್ಲಿ ಹೇಳ್ತಾ ಬಂದಿದ್ದಾರೆ. ಹಾದಿ-ಬೀದಿಯಲ್ಲಿ ಮಾತನಾಡದಂತೆ ಶಾಸಕರ ಬಾಯಿಗೆ ಹೈಕಮಾಂಡ್ ಬೀಗ ಹಾಕಿದೆ. ಈ ಬೆನ್ನಲ್ಲೇ ವಿರೂಪಾಕ್ಷನ ಸನ್ನಿಧಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

5 ವರ್ಷ ನಮ್ಮದೇ ಸರ್ಕಾರ, ನಾನೇ ಸಿಎಂ’

5 ವರ್ಷ ನಮ್ಮದೇ ಸರ್ಕಾರ, ನಾನು ಈಗ ಮುಖ್ಯಮಂತ್ರಿ.. ಮುಂದಿನ 5 ವರ್ಷವೂ ನಾನೇ ಸಿಎಂ ಆಗಿ ಇರ್ತೀನಿ ಅಂತ ಹಂಪಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರದ ಬಗ್ಗೆ ನಡೆಯುತ್ತಿರುವ ಭಾರಿ ಚರ್ಚೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಡಿಸಿಎಂ ವಿಚಾರ ತೀರ್ಮಾನ ಮಾಡೋದು ಹೈಕಮಾಂಡ್. ನಮ್ಮದು ನ್ಯಾಷನಲ್ ಪಾರ್ಟಿ, ಯಾವುದೇ ತೀರ್ಮಾನವನ್ನು ಹೈಕಮಾಂಡ್ ಮಾತ್ರ ತೆಗೆದುಕೊಳ್ಳುತ್ತೆ ಅಂತ ಹೇಳುವ ಎಲ್ಲಾ ವದಂತಿಗಳಿಗೆ ತೆರೆ ಎಳೆದ್ರಾ ಎನ್ನುವ ಚರ್ಚೆ ಶುರುವಾಗಿದೆ.

ಯಾರು ಏನೇ ಹೇಳಿದ್ರೂ ಪಕ್ಷ ಹೇಳಿದ್ದನ್ನು ಮಾಡ್ತೀವಿ

5 ವರ್ಷ ನಾನೇ ಸಿಎಂ ಅನ್ನೋ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರೋ ಡಿಸಿಎಂ ಡಿ.ಕೆ.ಶಿವಕುಮಾರ್​ ಯಾರೇ ಏನೇ ಮಾತಾಡಿದ್ರೂ ಕೇಳಿಕೊಂಡು ಹೋಗ್ತೀವಿ.. ಆದ್ರೆ ಪಕ್ಷ ಹೇಳಿದ್ದಕ್ಕೆ ಮಾಡ್ತೀವಿ ಅಂತ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಸರ್ಕಾರ ಬಂದು ಐದಾರು ತಿಂಗಳಾಗಿಲ್ಲ. ಅಭಿವೃದ್ಧಿ ಮರೆತು ಬರೀ ಅಧಿಕಾರ ಹಂಚಿಕೆ ಬಗ್ಗೆ ಮಾತ್ರ ಚರ್ಚೆ ನಡೀತಿದೆ ಅಂತ ಶಾಸಕ ಜನಾರ್ದನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ರೆ. ರಾಜ್ಯದೆಲ್ಲೆಡೆ ಸುತ್ತಾಡಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ, ಹೀಗಾಗಿ ಒಂದೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗಬೇಕು ಅಂತ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಪರ ಬ್ಯಾಟ್ ಬೀಸಿದ್ದಾರೆ.

ಸಿಎಂ ಸಿದ್ದರಾಮಯ್ಯರಿಗೆ ಹಿಡಿತ ತಪ್ಪಿದೆ. ಅವರು ನಾನೇ ಸಿಎಂ ಆಗಿರುತ್ತೇನೆ ಅಂತಾರೆ. ಸರ್ಕಾರದಲ್ಲಿ ಸ್ಥಿರತೆ ಇಲ್ಲ ಅಂತ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ. ಇನ್ನು ಕಾಂಗ್ರೆಸ್ ಏನು ನಿರ್ಧಾರ ಆಗಿದ್ಯೋ ಅವರಿಗೆ ಬಿಟ್ಟದ್ದು ಅಂತ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ವಿರೂಪಾಕ್ಷನ ದರ್ಶನದ ಬಳಿಕ 5 ವರ್ಷ ನಾನೇ ಸಿಎಂ ಅಂತ ಹೇಳಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.. ಆದ್ರೆ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಡಿ.ಕೆ.ಶಿವಕುಮಾರ್‌ ಹಾಗೂ ಬೆಂಬಲಿಗರು ಯಾವ ರೀತಿ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘5 ವರ್ಷ ನಮ್ಮದೇ ಸರ್ಕಾರ, ನಾನೇ ಸಿಎಂ’ ಸಿದ್ದರಾಮಯ್ಯ ಹೇಳಿಕೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ಏನು ಗೊತ್ತಾ..?

https://newsfirstlive.com/wp-content/uploads/2023/10/SIDDU-15.jpg

Load More