ಮೇಕೆದಾಟು ಯೋಜನೆ ಜಾರಿಗೆ ತರಲು ಚಿಂತನೆ
ಮೇಕೆದಾಟು ಬಗ್ಗೆ ಧ್ವನಿ ಎತ್ತಿದ ಡಿಸಿಎಂ
ಡಿಕೆಶಿ ಮಾತಿಗೆ ಕ್ಯಾತೆ ತೆಗೆದ ತಮಿಳುನಾಡು ವಿಪಕ್ಷ ನಾಯಕ
ಕಾವೇರಿ ನದಿ ಪಾತ್ರದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಒತ್ತಾಯಿಸಿತ್ತು. ಈ ಯೋಜನೆ ಜಾರಿಗೆ ಆಗ್ರಹಿಸಿ ಮೇಕೆದಾಟುವಿನಿಂದ ಬೆಂಗಳೂರು ‘ಕೈ’ ಪಾಳಯ ಪಾದಯಾತ್ರೆ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೇಕೆದಾಟು ಪಾದಯಾತ್ರೆ ನೇತೃತ್ವ ವಹಿಸಿದ್ದ ಡಿಕೆಶಿ ಇದೀಗ ಜಲಸಂಪನ್ಮೂಲ ಖಾತೆ ಸಿಗುತ್ತಿದ್ದಂತೆ ಮತ್ತೆ ಮೇಕೆದಾಟು ಬಗ್ಗೆ ಧ್ವನಿ ಎತ್ತಿದ್ದಾರೆ. ಆದ್ರೆ, ಡಿಸಿಎಂ ಹೇಳಿಕೆಗೆ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ.
ಮೇಕೆದಾಟು. ಕರ್ನಾಟಕದ ಬಹುನಿರೀಕ್ಷಿತ ನೀರಾವರಿ ಯೋಜನೆ. ಕಾವೇರಿ ವಲಯದ ರೈತರಿಗೆ ಆಸರೆಯಾಗಬೇಕಿರೋ ಯೋಜನೆ. ಈ ಯೋಜನೆ ಜಾರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಎಲ್ಲಾ ಸರ್ಕಾರಗಳು ದಶಕಗಳಿಂದ ಪ್ರಯತ್ನ ನಡೆಸುತ್ತಲೇ ಇವೆ. ಆದ್ರೆ, ತಮಿಳುನಾಡು ಈ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕುತ್ತಲೇ ಇದೆ. ನಮ್ಮ ಕಾವೇರಿ ನೀರನ್ನ ನಾವು ಪಡೆದುಕೊಳ್ಳೋದಕ್ಕೂ ಕ್ಯಾತೆ ತೆಗೆಯುತ್ತಿದೆ. ಇದೀಗ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರೋ ಕಾಂಗ್ರೆಸ್ ಮತ್ತೆ ಮೇಕೆದಾಟು ಯೋಜನೆಯ ಬಗ್ಗೆ ಧ್ವನಿ ಎತ್ತಿದೆ.
ಮೇಕೆದಾಟು ಯೋಜನೆ ಜಾರಿಗೆ ಡಿಸಿಎಂ ವರ್ಕೌಟ್!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರ್ತಿದ್ದಂತೆ ನೆನೆಗುದಿಗೆ ಬಿದ್ದಿರೋ ಮೇಕೆದಾಟು ಯೋಜನೆ ಜಾರಿಗೆ ಪ್ರಯತ್ನ ಶುರುಮಾಡಿದೆ.. ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆಯನ್ನ ಜಾರಿಗೊಳಿಸಲು ಪಣತೊಟ್ಟಿದ್ದಾರೆ.. ಈ ಹಿಂದೆ ಮೇಕೆದಾಟು ಪಾದಯಾತ್ರೆ ಮಾಡಿ ಹಿಂದಿನ ಬಿಜೆಪಿ ಸರ್ಕಾರವನ್ನ ಎಚ್ಚರಿಸಿದ್ದ ಡಿಕೆಶಿ ಇದೀಗ ತಮ್ಮ ಕೈಯ್ಯಲ್ಲೇ ನೀರಾವರಿ ಖಾತೆ ಹಿಡಿದು ತಮಿಳುನಾಡಿಗೆ ಸಂದೇಶವೊಂದನ್ನ ರವಾನಿಸಿದ್ದಾರೆ.. ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರ ಅನುವು ಮಾಡಿಕೊಡಬೇಕು ಅಂತಾ ಮನವಿ ಮಾಡಿದ್ದಾರೆ. ಅಲ್ಲದೇ ಕ್ಯಾತೆ ತೆಗೆಯದೇ ಸ್ನೇಹಪೂರ್ವಕವಾಗಿ ಮೇಕೆದಾಟು ಅಣೆಕಟ್ಟಿನ ಲಾಭ ಪಡೆಯುವಂತೆ ನೆರೆ ರಾಜ್ಯಕ್ಕೆ ತಿಳಿಸಿದ್ದಾರೆ.
ಡಿಕೆಶಿ ‘ಮೇಕೆದಾಟು’ ಮಾತಿಗೆ ತಮಿಳುನಾಡು ಕ್ಯಾತೆ!
ಇನ್ನೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆ ಜಾರಿ ಪ್ರಸ್ತಾಪಕ್ಕೆ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ. ಕಾವೇರಿ ನದಿಗೆ ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡಿದ್ರೆ ಹೋರಾಟ ಮಾಡೋದಾಗಿ ತಮಿಳುನಾಡಿನ ಎಐಎಡಿಎಂಕೆ , ವಿಪಕ್ಷ ನಾಯಕ ಕೆ. ಪಳನಿಸ್ವಾಮಿ ಕ್ಯಾತೆ ತೆಗಿದಿದ್ದಾರೆ.
‘ಮೇಕೆದಾಟು ವಿರುದ್ಧ ಹೋರಾಟ’
ಕರ್ನಾಟಕ ಸರ್ಕಾರದ ನಿರ್ಧಾರದಿಂದ ಭವಿಷ್ಯದಲ್ಲಿ ತಮಿಳುನಾಡು ಮರುಭೂಮಿಯಾಗಲಿದೆ. ಅಲ್ಲದೇ ಹೊಸದಾಗಿ ನೀರಾವರಿ ಯೋಜನೆಗಳನ್ನ ಕೈಗೆತ್ತಿಕೊಳ್ಳುವಂತಿಲ್ಲ ಅಂತಾ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ.. ಹೀಗಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತೇವೆ.. ಕರ್ನಾಟಕ ಸರ್ಕಾರ ನದಿ ತೀರದ ಜನರ ಹಿತಾಸಕ್ತಿಗೆ ವಿರುದ್ಧವಾದ ನಿರ್ಣಯ ಕೈಗೊಳ್ಳಬಾರದು.
– ಕೆ. ಪಳನಿಸ್ವಾಮಿ, ತ.ನಾಡು ವಿಪಕ್ಷ ನಾಯಕ
ಇನ್ನೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡಿನ ಡಿಎಂಕೆ ಸರ್ಕಾರ ಕೂಡಾ ಡಿಕೆಶಿವಕುಮಾರ್ ಮಾತಿಗೆ ವಿರೋಧ ವ್ಯಕ್ತಪಡಿಸಿದೆ.. ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಡಿಕೆಶಿ ಮಾತಿಗೆ ಕಟುವಾಗಿ ಟೀಕಿಸಿದ್ದಾರೆ.
‘ಆಕ್ರಮಣಕಾರಿ ವರ್ತನೆ ಆಶ್ಚರ್ಯಕರ’
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಕೆಲವೇ ದಿನಗಳು ಕಳೆದಿವೆ.. ಅಷ್ಟರಲ್ಲೇ ನೆರೆಯ ರಾಜ್ಯದ ಬಗ್ಗೆ ಡಿ.ಕೆ. ಶಿವಕುಮಾರ್ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದು ಆಶ್ಚರ್ಯಕರವಾಗಿದೆ.. ಮೇಕೆದಾಟು ಕುರಿತು ಅಧಿಕಾರಿಗಳು ಇವರಿಗೆ ವಿವರವಾದ ಮಾಹಿತಿ ನೀಡಿಲ್ಲವೆಂದು ಅನಿಸುತ್ತಿದೆ.
– ದೊರೈ ಮುರುಗನ್, ತ.ನಾಡು ಜಲಸಂಪನ್ಮೂಲ ಸಚಿವ
ಒಟ್ಟಾರೆ, ಕರ್ನಾಟಕದ ಜೀವನದಿ ಕಾವೇರಿಗೆ ಡ್ಯಾಂ ನಿರ್ಮಾಣ ಮಾಡಿದ್ರೆ ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ.. ಆದ್ರೆ, ತಮಿಳುನಾಡು ಮತ್ತೆ ಕಾವೇರಿ ವಿವಾದವನ್ನ ಸೃಷ್ಟಿಸೋ ಗೋಜಿಕೆ ಕೈಹಾಕಲು ಸಜ್ಜಾಗಿದೆ.. ಅದೇನೆ ಇರ್ಲಿ, ಮೇಕೆದಾಟುಗಾಗಿ ಪಾದಯಾತ್ರೆ ನಡೆಸಿದ್ದ ಡಿಕೆಶಿಗೆ ಈ ಯೋಜನೆ ಜಾರಿಗೆ ತರೋದೆ ಮುಂದಿರೋ ದೊಡ್ಡ ಸವಾಲು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ