‘ರಾಮನಗರ’ ಮರುನಾಮಕರಣಕ್ಕೆ ರಾಮಲಿಂಗಾರೆಡ್ಡಿ ಬೇಸರ
‘ಸ್ಕ್ವೇರ್ ಫೂಟ್ ಶಿವಕುಮಾರ್’ ಎಂದ ಅಶ್ವತ್ಥ್ ನಾರಾಯಣ್
ಉಪವಾಸ ಸತ್ಯಾಗ್ರಹ ಮಾಡೋದಾಗಿ ಸರ್ಕಾರಕ್ಕೆ ಹೆಚ್‌ಡಿಕೆ ಎಚ್ಚರಿಕೆ
ರಾಜ್ಯ ರಾಜಕಾರಣದಲ್ಲಿ ರಾಮನಗರ ಮರುನಾಮಕರಣ ಚರ್ಚೆ ರಣಯುದ್ಧವಾಗಿ ಮಾರ್ಪಟ್ಟಿದೆ. ಇದೀಗ ಡಿಕೆಶಿ ಬೆಂಗಳೂರು ದಕ್ಷಿಣ ಜಿಲ್ಲೆ ಚಿಂತನೆಗೆ ಸ್ವಪಕ್ಷದಲ್ಲೇ ಅಸಮಾಧಾನ ಇಣುಕಿದೆ. ರಾಮನಗರ ಉಸ್ತುವಾರಿ ಜೊತೆ ಚರ್ಚಿಸದೇ ಕನಕಾಧಿಪತಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರೋ ಮಾತು ಕೇಳಿಬಂದಿದೆ. ಇನ್ನು, ಕೈ ಕ್ಯಾಪ್ಟನ್ ಹೊಸ ವರಸೆಗೆ ಕೇಸರಿ ಪಡೆ ಕೂಡಾ ಕಿಡಿಕಾರಿದೆ. ರಾಮನಗರ ಜಿಲ್ಲೆ ಮರುನಾಮಕರಣ ರಾಜ್ಯ ರಾಜಕೀಯದಲ್ಲಿ ಜಟಾಪಟಿಗೆ ಕಾರಣವಾಗಿದೆ. ದಳಪತಿ-ಡಿಕೆಶಿ ಮಧ್ಯೆ ಏಟು ಎದಿರೇಟು ನಡೀತಿದೆ. ಈ ಮಧ್ಯೆ ಕಾಂಗ್ರೆಸ್ ಸಚಿವರೇ ರಾಮನಗರ ರಾಮಾಯಣದಿಂದ ಬೇಸರಗೊಂಡಿದ್ದಾರೆ.

ಉಸ್ತುವಾರಿ ಜೊತೆ ಚರ್ಚಿಸದೇ ನಿರ್ಧಾರ ಕೈಗೊಂಡ್ರಾ ಡಿಕೆಶಿ?
ಕನಕಪುರದಲ್ಲಿ ನಿಂತು ಡಿಕೆಶಿ ಮಾಡಿದ್ದ ಶಪಥ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನಕ್ಕೆ ಕಾರಣವಾಗಿದೆ.. ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಮಾಡುವ ಕನಕಾಧಿಪತಿ ಚಿಂತನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ.. ಜಿಲ್ಲೆಯ ಹೆಸರು ಬದಲಾವಣೆ ಬಗ್ಗೆ ಉಸ್ತುವಾರಿ ಸಚಿವರನ್ನ ಸೌಜನ್ಯಕ್ಕೂ ಪರಿಗಣಿಸಿಲ್ಲ ಅಂತಾ ರಾಮಲಿಂಗಾರೆಡ್ಡಿ ತಮ್ಮ ಆಪ್ತರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ಉಸ್ತುವಾರಿ ಕಿತ್ತುಕೊಂಡು ಇದೀಗ ರಾಮನಗರದಲ್ಲೂ ತಮ್ಮ ಮಾತನ್ನ ಪರಿಗಣಿಸ್ತಿಲ್ಲ ಅಂತ ಬೇಸರಗೊಂಡಿದ್ದಾರಂತೆ. ಜೊತೆಗೆ ಡಿಕೆಶಿವಕುಮಾರ್ ನನ್ನ ಜೊತೆ ಈ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ ಅಂತ ಬಹಿರಂಗವಾಗಿ ಹೇಳಿದ್ದಾರೆ.
ಹೆಚ್‌ಡಿಕೆ ವಿರುದ್ಧ ಮಾಗಡಿ ಶಾಸಕ ‘ರಾಮನಗರ’ ಟಾಕ್ ವಾರ್
ತುಮಕೂರು ಶಾಂತಿಗೆ ಭಂಗ ತರಬೇಡಿ’ ಎಂದ ಪರಮೇಶ್ವರ್
ರಾಮನಗರ ಜಿಲ್ಲೆಯನ್ನ ಮರುನಾಮಕರಣ ಮಾಡಿದ್ರೆ ಉಪವಾಸ ಸತ್ಯಾಗ್ರಹ ಮಾಡೋದಾಗಿ ಸರ್ಕಾರಕ್ಕೆ ಹೆಚ್‌ಡಿಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ರು.. ದಳಪತಿಯ ಈ ಮಾತಿಗೆ ಕೌಂಟರ್ ಕೊಟ್ಟಿರೋ ಮಾಗಡಿ ಶಾಸಕ ಬಾಲಕೃಷ್ಣ, ಉಪವಾಸ ಮಾಡೋದು ಬಿಡೋದು ಅವರಿಗೆ ಬಿಟ್ಟಿದ್ದು ಅಂತ ಗುಡುಗಿದ್ದಾರೆ.
ಡಿಕೆಗೆ ‘ಸ್ಕ್ವೇರ್ ಫೂಟ್ ಶಿವಕುಮಾರ್’ ಎಂದ ಅಶ್ವತ್ಥ್ ನಾರಾಯಣ್
ಬಂಡೆಗಳ ನಾಡಿಗೆ ಬೆಂಗಳೂರು ಹೆಸರಿಡಲು ಹೊರಟ ಕೈ ಕ್ಯಾಪ್ಟನ್ ವಿರುದ್ಧ ಕೇಸರಿ ಸೇನೆ ಮುಗಿಬಿದ್ದಿದೆ. ದೋಸ್ತಿಯ ಮಾತುಗಳನ್ನ ರಿಕಾಲ್ ಮಾಡುತ್ತಾ ಡಿಕೆಶಿ ವಿರುದ್ಧ ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ರಾಮನಗರ ಕದನ ತಾರಕಕ್ಕೇರಿದೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಸರ್ಕಾರದ ಗಮನಕ್ಕೆ ತರದೇ ಏಕಪಕ್ಷೀಯ ನಿರ್ಧಾರ ಕೈಗೊಂಡ್ರಾ ಎಂಬ ಚರ್ಚೆ ಶುರುವಾಗಿದೆ. ಇದೆಲ್ಲದರ ಮಧ್ಯೆ ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯಾಗುತ್ತಾ? ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ