newsfirstkannada.com

ದರ್ಶನ್​​ ಕೇಸ್​ ಮುಚ್ಚಿ ಹಾಕಲು ಡಿಕೆಶಿಗೆ ಸಂಪರ್ಕ ಮಾಡಿದ್ರಾ? ಈ ಬಗ್ಗೆ ಡಿಸಿಎಂ ಏನಂದ್ರು?

Share :

Published June 13, 2024 at 5:58pm

  ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ರೇಣುಕಾಸ್ವಾಮಿ ಕೊಲೆ ಕೇಸ್​​

  ಕೇಸಲ್ಲಿ ನಟ ದರ್ಶನ್​​ ಸೇರಿ ಬರೋಬ್ಬರಿ 13 ಮಂದಿ ಆರೋಪಿಗಳು ಅರೆಸ್ಟ್​

  ದರ್ಶನ್​​ ಕೇಸ್​ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವ್ರು ಹೇಳಿದ್ದೇನು ಗೊತ್ತಾ?​

ಬೆಂಗಳೂರು: ನಟ ದರ್ಶನ್​​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ ಮಾಡಿದ ಆರೋಪದಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಬರ್ಬರ ಹತ್ಯೆಯಾಗಿದೆ. ಕೊಲೆ ಕೇಸಲ್ಲಿ ನಟ ದರ್ಶನ್​ ಮತ್ತು ಗ್ಯಾಂಗ್​​ ಜೈಲು ಸೇರಿದೆ. ಕೋರ್ಟ್​ ಕೂಡ 6 ದಿನಗಳ ಕಾಲ ದರ್ಶನ್​ ಅವರನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಿದ್ದಾರೆ. ಪೊಲೀಸ್ರು ಕೂಡ ಕೇಸ್​ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಇದರ ಮಧ್ಯೆ ರೇಣುಕಾಸ್ವಾಮಿ ಕೊಲೆ ಕೇಸ್​ನಿಂದ ಬಚಾವ್​ ಆಗಲು ದರ್ಶನ್​ ಮತ್ತು ಗ್ಯಾಂಗ್​ ಸಾಕಷ್ಟು ಸರ್ಕಸ್​ ಮಾಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದರ್ಶನ್​ ಮತ್ತು ಗ್ಯಾಂಗನ್ನು ತಪ್ಪಿಸಲು ರಾಜ್ಯದ ಪ್ರಭಾವಿ ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿದ್ದಾರಂತೆ. ಈ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್​ ಕೇಸ್​​ ಮುಚ್ಚಿಹಾಕಲು ತಮ್ಮನ್ನು ಸಂಪರ್ಕ ಮಾಡಿದ್ರಾ ಅನ್ನೋ ವಿಚಾರಕ್ಕೆ ಸಂಬಂಧ ಡಿ.ಕೆ ಶಿವಕುಮಾರ್​​ ಮಾತಾಡಿದ್ರು. ನನ್ನ ಹತ್ರ ಯಾರು ಆ ಬಗ್ಗೆ ಮಾತಾಡಿಲ್ಲ. ಅರೆಸ್ಟ್​ ಆದ 24 ಗಂಟೆಗಳ ಬಳಿಕ ವಿಚಾರ ಗೊತ್ತಾಗಿದ್ದು. ನನ್ನ ಜೊತೆ ದರ್ಶನ್​​ ಸಂಪರ್ಕದಲ್ಲಿ ಇಲ್ಲ ಎಂದರು.

ಇನ್ನು, ಸ್ಟೇಷನ್​ಗೆ ಶ್ಯಾಮಿಯಾನ ಪರದೆ ಹಾಕಿರೋ ವಿಚಾರದ ಬಗ್ಗೆ ಮಾತಾಡಿದ ಡಿ.ಕೆ ಶಿವಕುಮಾರ್​​, ಕೆಲವೊಮ್ಮೆ ಹೀಗೆ ಆಗುತ್ತೆ. ನನ್ನನ್ನು ಸ್ಟೇಷನ್​ ಮತ್ತು ಕೋರ್ಟ್​ಗೆ ಕರೆದುಕೊಂಡು ಹೋಗುವಾಗ ದಾರಿ ಬದಲಾಯಿಸ್ತಿದ್ರು. ಅಭಿಮಾನಿಗಳು ಬಂದು ಗಲಾಟೆ ಮಾಡಬಹುದು ಎಂದು ಹೀಗೆ ಮಾಡಿರಬಹುದು ಎಂದರು.

ಇದನ್ನೂ ಓದಿ: ಕೊಲೆ ಕೇಸ್​​ನಿಂದ ಬಚಾವ್​​ ಆಗಲು ದರ್ಶನ್​​ ಮತ್ತು ಗ್ಯಾಂಗ್​ ಮಾಸ್ಟರ್​ ಪ್ಲಾನ್​​.. ಏನದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ ಕೇಸ್​ ಮುಚ್ಚಿ ಹಾಕಲು ಡಿಕೆಶಿಗೆ ಸಂಪರ್ಕ ಮಾಡಿದ್ರಾ? ಈ ಬಗ್ಗೆ ಡಿಸಿಎಂ ಏನಂದ್ರು?

https://newsfirstlive.com/wp-content/uploads/2024/06/DK-Shivkumar_Darshan.jpg

Load More