newsfirstkannada.com

ಹಿಂದೆ ಹೇಳಿಲ್ಲ, ಮುಂದೆಯೂ ಹೇಳಲ್ಲ.. ಸತೀಶ್ ಜಾರಕಿಹೊಳಿ ಕ್ರೆಡಿಟ್‌ ಮಾತಿಗೆ ಡಿಕೆಶಿ ಖಡಕ್ ರಿಯಾಕ್ಷನ್

Share :

21-10-2023

    ಚುನಾವಣೆ ಗೆಲುವಿನ ಕ್ರೆಡಿಟ್‌ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

    ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪಕ್ಕೆ ಸಿಟ್ಟಾಗಿದ್ದ ಸಾಹುಕಾರ್

    ನ್ಯೂಸ್‌ ಫಸ್ಟ್ ಸಂದರ್ಶನದಲ್ಲಿ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗಿದೆ. 135 ಶಾಸಕರ ಗೆಲುವಿನ ಕ್ರೆಡಿಟ್ ಯಾರಿಗೆ ಸಲ್ಲಬೇಕು ಅನ್ನೋದು ಪ್ರತಿಷ್ಟೆಯ ವಿಚಾರವಾಗಿದೆ. ನ್ಯೂಸ್‌ ಫಸ್ಟ್ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಕ್ರೆಡಿಟ್ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾತ್ರ ಸೀಮಿತ ಅಲ್ಲ ಎಂದು ಹೇಳಿಕೆ ನೀಡಿದ್ದರು.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪದ ವಿಚಾರ ಡಿ.ಕೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೊಳಿ ಅವರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಬೆಳಗಾವಿಯ ಬಿಸಿ ಭುಗಿಲೆದ್ದಿರುವಾಗಲೇ ಸತೀಶ್ ಜಾರಕಿಹೊಳಿ ಅವರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ನೇರವಾಗಿ ಚುನಾವಣೆ ಗೆಲುವಿನ ಕ್ರೆಡಿಟ್‌ ಬಗ್ಗೆ ಮಾತನಾಡಿರುವ ಅವರು ಕೆಪಿಸಿಸಿ ಅಧ್ಯಕ್ಷರು ಒಬ್ಬರಿಗೆ ಕಾಂಗ್ರೆಸ್‌ ಗೆಲುವಿನ ಕ್ರೆಡಿಟ್‌ ಸೀಮಿತ ಅಲ್ಲ ಎಂದಿದ್ದಾರೆ.

ಇದನ್ನೂ ಓದಿ: EXCLUSIVE: ‘ನಮ್ಮ ಕೋಟೆ ಛಿದ್ರ ಮಾಡಲು ಆಗಲ್ಲ’- ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಡಿಕೆ ಮೇಲೆ ಸತೀಶ್ ಗುಡುಗು

ಸಚಿವ ಸತೀಶ್ ಜಾರಕಿಹೊಳಿ ಅವರ ಕ್ರೆಡಿಟ್‌ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಡಿ.ಕೆ ಶಿವಕುಮಾರ್ ಅವರಿಂದಲೇ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂತು ಅಂತ ಹಿಂದೆ ಹೇಳಿಲ್ಲ, ಮುಂದೆಯೂ ಹೇಳಲ್ಲ. ಇಡೀ ಪಾರ್ಟಿ, ರಾಜ್ಯದ ಕಾರ್ಯಕರ್ತರು, ಹಳ್ಳಿ ಹಳ್ಳಿಯ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮ ಹಾಕಿದ್ದಾರೆ. ನಾಯಕರು, ಕಾರ್ಯಕರ್ತರು ಎಲ್ಲರೂ ಬಡಿದಾಡಿ ಈ ಸರ್ಕಾರ ತಂದಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಂದೆ ಹೇಳಿಲ್ಲ, ಮುಂದೆಯೂ ಹೇಳಲ್ಲ.. ಸತೀಶ್ ಜಾರಕಿಹೊಳಿ ಕ್ರೆಡಿಟ್‌ ಮಾತಿಗೆ ಡಿಕೆಶಿ ಖಡಕ್ ರಿಯಾಕ್ಷನ್

https://newsfirstlive.com/wp-content/uploads/2023/10/DKS_SATISH.jpg

Load More