ಸಿದ್ದರಾಮಯ್ಯ ಸರ್ಕಾರವನ್ನೇ ಕೆಡವಲು ಸ್ಕೆಚ್
ಡಿಸಿಎಂ ಡಿ.ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಬಿಜೆಪಿ, ಜೆಡಿಎಸ್ ವಿರುದ್ಧ ಡಿಸಿಎಂ ಆರೋಪ
ಬೆಂಗಳೂರು: ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯುತ್ತೆ ಎಂಬುದಕ್ಕೆ ಮಹಾರಾಷ್ಟ್ರದ ಬೆಳವಣಿಗೆಯೇ ಸಾಕ್ಷಿ. ಈಗ ಕರ್ನಾಟಕದ ರಾಜಕೀಯದಲ್ಲೂ ಮಹಾ ಬೆಳವಣಿಗೆಯ ಸುಳಿವು ಸಿಕ್ಕಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಸಿಂಗಾಪುರದಲ್ಲಿ ಚಕ್ರವ್ಯೂಹ ರೆಡಿಯಾಗುತ್ತಿದೆ ಎಂಬ ಹೊಸ ಬಾಂಬ್ ಡಿಸಿಎಂ ಡಿ.ಕೆ ಶಿವಕುಮಾರ್ ಸಿಡಿಸಿದ್ದಾರೆ.
ಸಿದ್ದು ಸರ್ಕಾರ ಪತನಕ್ಕೆ ವಿದೇಶದಲ್ಲಿ ರೆಡಿ ಆಗುತ್ತಿದ್ಯಾ ಸ್ಕೆಚ್?
ಹೌದು, ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿರೋ ಹೇಳಿಕೆಯೀಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಪ್ರಚಂಡ ಬಹುಮತದ ಸರ್ಕಾರಕ್ಕೂ ಆಪರೇಷನ್ ಆತಂಕ ಶುರುವಾಗಿದ್ಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ ಇನ್ನೂ ಮೂರು ತಿಂಗಳು ಆಗಿಲ್ಲ. ಚುನಾವಣೆ ವೇಳೆ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರಲ್ಲೇ ಸರ್ಕಾರ ಬ್ಯುಸಿ ಆಗಿದೆ. ಮತ್ತೊಂದೆಡೆ ಸದ್ದಿಲ್ಲದ್ದೇ ರಾಜಕೀಯ ಚದುರಂಗದಾಟ ಶುರುವಾಗಿರುವ ಸುಳಿವು ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್, ಎನ್ಸಿಪಿ ತೊರೆದು ಶಿಂಧೆ ಸರ್ಕಾರದ ಜೊತೆ ಕೈ ಜೋಡಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಕರ್ನಾಟಕದಲ್ಲೂ ಅಜಿತ್ ಪವಾರ್ ಸೃಷ್ಟಿ ಆಗ್ತಾರೆ ನೋಡ್ತಿರಿ ಎಂದು ಹೇಳಿಕೆ ನೀಡಿದ್ದರು. ಇದೀಗ ಖುದ್ದು ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ತಂತ್ರ ಮಾಡಿದ್ರೆ ನಮಗೆ ಗೊತ್ತಾಗುತ್ತೆ ಎಂದು ಸಿಂಗಾಪುರದಲ್ಲಿ ಕುಳಿತು ಸರ್ಕಾರ ಪತನಕ್ಕೆ ಸಂಚು ಮಾಡ್ತಿದ್ದಾರೆ ಎಂದು ಡಿಕೆಶಿ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಿಂಗಾಪುರದಿಂದ ಸ್ಕೆಚ್ ಹಾಕಿದ ಆ ರಾಜಕಾರಣಿ ಯಾರು?
ಕಾಂಗ್ರೆಸ್ ಸರ್ಕಾರ ಪತನಕ್ಕೆ ಒಬ್ಬ ರಾಜಕಾರಣಿ ಸಿಂಗಾಪುರದಲ್ಲಿ ಕುಳಿತು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಡಿಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಆ ರಾಜಕಾರಣಿ ಯಾರು ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಕಾಡ್ಗಿಚ್ಚಿನಂತೆ ಆವರಿಸಿದೆ.
ಮತ್ತೊಂದು ಮೂಲಗಳ ಪ್ರಕಾರ, ಡಿ.ಕೆ ಶಿವಕುಮಾರ್, ಪರೋಕ್ಷವಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ರಾ ಎಂಬ ಸಂಶಯ ಮೂಡಿದೆ. ಸದ್ಯ ಮಾಜಿ ಸಿಎಂ ಕುಮಾರಸ್ವಾಮಿ ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್ ಮಾತುಗಳನ್ನ ಕೇಳ್ತಿದ್ರೆ, ದಳಪತಿಯತ್ತ ಸಂಶಯ ಕಣ್ಣು ತಿರುಗಿದೆ. ಯಾಕಂದ್ರೆ ಕೆಲ ದಿನಗಳ ಹಿಂದೆ ಮಾಜಿ ಸಿಎಂ ಹೆಚ್ಡಿಕೆ, ಮಹಾರಾಷ್ಟ್ರದ ಅಜಿತ್ ಪವಾರ್ನಂತೆ ಕರ್ನಾಟದಲ್ಲೂ ಹುಟ್ಟಿಕೊಳ್ಳಬಹುದು ಎಂದಿದ್ದರು. ಇನ್ನು ಮಾಜಿ ಸಚಿವ ಈಶ್ವರಪ್ಪ ಕೂಡ, ಕಾಂಗ್ರೆಸ್ ಸರ್ಕಾರದಲ್ಲಿ 3 ತಿಂಗಳಲ್ಲೇ ಪತನವಾಗಲಿದೆ ಅಂದಿದ್ರು.
ಬಹುಮತದ ಸರ್ಕಾರಕ್ಕೂ ಕಾಡ್ತಿದ್ಯಾ ಆಪರೇಷನ್ ಭೀತಿ?
ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಾಯಕರ ಹೇಳಿಕೆಗಳನ್ನು ನೋಡುತ್ತಿದ್ದರೆ, ಪ್ರಚಂಡ ಬಹುಮತದ ಸರ್ಕಾರಕ್ಕೂ ಆಪರೇಷನ್ ಆತಂಕ ಶುರುವಾಗಿದೆಯೇ ಎಂಬ ಸಂಶಯ ಮೂಡುತ್ತೆ. ಇತ್ತೀಚಿಗೆ ಬಿಜೆಪಿ-ಜೆಡಿಎಸ್ ನಾಯಕರು ಕೂಡ ದೋಸ್ತಿ ಮಾಡಿಕೊಂಡಂತೆ ಕಾಣುತ್ತಿದೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ಮೈತ್ರಿ ಲೆಕ್ಕಾಚಾರವೂ ಶುರುವಾಗಿದೆ.
‘ಆಪರೇಷನ್’ ಲೆಕ್ಕಾಚಾರ
224 ಸ್ಥಾನ ಇರುವ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 113 ಶಾಸಕರ ಬಹುಮತ ಬೇಕು. ಸದ್ಯ 135 ಶಾಸಕರ ಬಲದಿಂದ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಒಂದು ವೇಳೆ ಬಿಜೆಪಿ-ಜೆಡಿಎಸ್ ಇಬ್ಬರು ಸೇರಿದರೆ 85 ಶಾಸಕರು ಆಗಲಿದ್ದಾರೆ. ಆದರೆ ಬಹುಮತಕ್ಕೆ 113 ಶಾಸಕರ ಸಂಖ್ಯೆ ಅಗತ್ಯವಿದ್ದು, ಮೈತ್ರಿಯಾದ್ರೂ ಸರ್ಕಾರ ರಚನೆಗೆ 28 ಶಾಸಕರ ಕೊರತೆ ಆಗಲಿದೆ. ಹೀಗಾಗಿ ಕಾಂಗ್ರೆಸ್ ಬಲ ಕಡಿಮೆ ಮಾಡಲು ಆಪರೇಷನ್ ಕಮಲ ಅಗತ್ಯ. ಹೀಗಾಗಿ ಕಡಿಮೆ ಅಂದ್ರೂ 55ಕ್ಕೂ ಹೆಚ್ಚು ಶಾಸಕರನ್ನು ಸೆಳೆಯಲೇಬೇಕು. 55 ಶಾಸಕರನ್ನು ಸೆಳೆದ್ರೆ ಆಗ ಕಾಂಗ್ರೆಸ್ ಬಲ 80ಕ್ಕೆ ಕುಸಿಯಲಿದೆ. ಆಗ ಬಹುಮತ ಸಾಬೀತಿಗೆ 85 ಸಂಖ್ಯಾ ಬಲ ಬೇಕಾಗಲಿದ್ದು, ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಸರ್ಕಾರ ರಚಿಸಬಹುದು. ಆದ್ರೆ, ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶಾಸಕರನ್ನು ಸೆಳೆಯುವುದು ಕಷ್ಟದ ಮಾತೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ