newsfirstkannada.com

ಕಾಂಗ್ರೆಸ್​​ ವಿರುದ್ಧ ಹೋರಾಡಲು ಒಂದಾದ ಬಿಜೆಪಿ, ಜೆಡಿಎಸ್​​; ಇದು ಗೂಂಡಾಗಿರಿ ಎಂದ DCM ಡಿ.ಕೆ.ಶಿವಕುಮಾರ್..!

Share :

21-07-2023

    ಪ್ರಜಾಪ್ರಭುತ್ವದ ದೇಗುಲದಲ್ಲಿ ಶಾಸಕರ ಹೈಡ್ರಾಮಾ

    ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಹೋರಾಟ

    ಕಮಲ ಶಾಸಕರನ್ನ ಅಮಾನತು ಮಾಡಿದ್ದಕ್ಕೆ ಆಕ್ರೋಶ

ಬೆಂಗಳೂರು: ಪ್ರಜಾಪ್ರಭುತ್ವದ ದೇಗುಲದಲ್ಲಿ ಇತ್ತೀಚೆಗೆ ಭಾರೀ ಹೈಡ್ರಾಮಾವೇ ನಡೆದು ಹೋಗಿದೆ. ಬಿಜೆಪಿ ಶಾಸಕರ ಅತಿರೇಕದ ವರ್ತನೆಗೆ ಸದನ ರಣರಂಗವಾಗಿ ಮಾರ್ಪಾಡಾಗಿತ್ತು. ಹೀಗೆ ಸದನದಲ್ಲಿ ಗಲಾಟೆ ಎಬ್ಬಿಸಿದ್ದ ಬಿಜೆಪಿ ನಾಯಕರಿಗೆ ಅಮಾನತು ಶಿಕ್ಷೆಯೂ ಆಗಿತ್ತು. ಇದೀಗ ಶಾಸಕರನ್ನ ಸಸ್ಪೆಂಡ್ ಮಾಡಿದ್ದಕ್ಕೆ ಬಿಜೆಪಿ ಸಿಡಿದೆದ್ದು ಪ್ರತಿಭಟನೆ ನಡೆಸಿದೆ. ಅಧಿವೇಶನಕ್ಕೆ ತೆರಳದೇ ಧರಣಿ ನಡೆಸಿ ಸ್ಪೀಕರ್ ವಿರುದ್ಧವೇ ದೂರು ಕೊಟ್ಟಿದೆ. ಕಮಲ ನಾಯಕರ ನಡೆಗೆ ‘ಕೈ’ ದಲಿತ ಅಸ್ತ್ರ ಪ್ರಯೋಗಿಸಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಹೋರಾಟ. ಕಮಲ ಶಾಸಕರನ್ನ ಅಮಾನತು ಮಾಡಿದ್ದಕ್ಕೆ ಆಕ್ರೋಶ. ಸ್ಪೀಕರ್ ಆದೇಶದ ವಿರುದ್ಧ ಕೇಸರಿ ಕಲಿಗಳ ರೋಷಾವೇಶ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧಿಕ್ಕಾರ. ಇದು ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟಿಸುತ್ತಿರೋ ಪರಿ. ಅಧಿವೇಶನವನ್ನ ಧಿಕ್ಕರಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿರೋ ರೀತಿ.

ಕಾಂಗ್ರೆಸ್ ವಿರುದ್ಧ ಆಕ್ರೋಶ.. ಸ್ಪೀಕರ್ ವಿರುದ್ಧ ದೂರು

ಪ್ರಜಾಪ್ರಭುತ್ವದ ದೇಗುಲ, ಜನರ ಸಮಸ್ಯೆಗಳನ್ನು ಚರ್ಚಿಸುವ ಆಲಯ ವಿಧಾನಸಭೆ. ಈ ವಿಧಾನಸಭೆಯಲ್ಲಿ ಬಿಜೆಪಿ ನಾಯಕರು ಇತ್ತೀಚೆಗೆ ಭಾರೀ ಹೈಡ್ರಾಮಾ ಸೃಷ್ಟಿಸಿದ್ರು. ಅಧಿವೇಶನದಲ್ಲಿ ಡೆಪ್ಯೂಟಿ ಸ್ಪೀಕರ್‌ ಮೇಲೆ ಪೇಪರ್ ಹರಿದು ಹಾಕಿ ಅಗೌರವ ತೋರಿದ್ರು. ಹೀಗೆ ವಿಧಾನಸಭೆಯಲ್ಲಿ ಅತಿರೇಕದ ವರ್ತನೆ ತೋರಿದ 10 ಮಂದಿ ಬಿಜೆಪಿ ಶಾಸಕರಿಗೆ ಸದನದಿಂದ ಅಮಾನತು ಶಿಕ್ಷೆಯಾಗಿತ್ತು. ಹೀಗೆ ಅಮಾನತಾದ್ರೂ ಸದನದೊಳಗೆ ಪ್ರವೇಶಿಸಲು ಯತ್ನಿಸಿದ್ದ ಬಿಜೆಪಿ ಶಾಸಕರನ್ನ ಹೊತ್ತು ಹೊರ ಹಾಕಲಾಗಿತ್ತು. ಇದೀಗ ಸಸ್ಪೆಂಡ್ ಆದೇಶ ಹೊರಡಿಸಿದ್ದ ಸ್ಪೀಕರ್‌ ಯು.ಟಿ ಖಾದರ್ ನಡೆ ಖಂಡಿಸಿ ಕೇಸರಿ ಪಡೆ  ಬೀದಿಗಿಳಿದಿತ್ತು.

ಮೇಲ್ಮನೆ, ಕೆಳಮನೆ ಬಿಜೆಪಿ ಸದಸ್ಯರೆಲ್ಲಾ ಸದನವನ್ನ ತೊರೆದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ರು. ವಿಧಾನಸಭೆಯಿಂದ 10 ಶಾಸಕರನ್ನ ಅಮಾನತು ಮಾಡಿದ ಸ್ಪೀಕರ್ ನಡೆ ವಿರುದ್ಧ ಧಿಕ್ಕಾರ ಕೂಗಿದ್ರು. ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದ್ರು.

ಬಳಿಕ ಬಿಜೆಪಿ ನಾಯಕರು ಎಲ್ಲಾ ಒಂದಾಗಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗುತ್ತಲೇ ಪಾದಯಾತ್ರೆ ಮೂಲಕ ವಿಧಾನಸೌಧದಿಂದ ರಾಜಭವನಕ್ಕೆ ತೆರಳಿದ್ರು. ಈ ವೇಳೆ ಕೇಸರಿ ಕಲಿಗಳ ಕಿಚ್ಚು ಮತ್ತಷ್ಟು ಹೆಚ್ಚಾಗಿತ್ತು. ಕಮಲ ನಾಯಕರೆಲ್ಲಾ ರಸ್ತೆ ಮೂಲಕ ತೆರಳಿ ಸ್ಪೀಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ಗೆ ದೂರು ಸಲ್ಲಿಸಿದ್ರು.

‘ಕೈ’ಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಅಶೋಕ್‌

ಸ್ಪೀಕರ್ ಯು.ಟಿ ಖಾದರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ಕರ್ನಾಟಕದ ಇತಿಹಾಸದಲ್ಲಿ ಶಾಸಕರನ್ನ ಸಸ್ಪೆಂಡ್ ಮಾಡುವಂತ ನಿರ್ಣಯ ಆಗಿಲ್ಲ. ಕಾಂಗ್ರೆಸ್‌ ವಿಪಕ್ಷಗಳ ಧ್ವನಿ ಅಡಗಿಸೋ ಕೆಲಸ ಮಾಡ್ತಿದೆ ಅಂತಾ ಗುಡುಗಿದ್ರು.. ಇತ್ತ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದೆ ಅಂತಾ ಮಾಜಿ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ.

ದಲಿತ ಸಭಾಧ್ಯಕ್ಷರ ಮೇಲೆ ಗೂಂಡಾ ವರ್ತನೆ ಎಂದ ಡಿಕೆ

ಅತ್ತ ಬಿಜೆಪಿ ನಾಯಕರು ಸ್ಪೀಕರ್ ವಿರುದ್ಧ ದೂರು ನೀಡಿದ್ರೆ, ಇತ್ತ ಸ್ಪೀಕರ್ ಯು.ಟಿ ಖಾದರ್‌ ರಾಜ್ಯಪಾಲರನ್ನ ಭೇಟಿ ಮಾಡಿದ್ರು. ಬಳಿಕ ಮಾತನಾಡಿದ ಅವ್ರು, ಸದನದಲ್ಲಿ ನಡೆದ ಘಟನೆ ಸಂಪೂರ್ಣ ವರದಿಯನ್ನ ರಾಜ್ಯಪಾಲರಿಗೆ ಸಲ್ಲಿಕೆ ಮಾಡಿದ್ದಾಗಿ ತಿಳಿಸಿದ್ರು. ಇನ್ನೂ ಬಿಜೆಪಿ ನಾಯಕರು ಹತಾಶೆಯಿಂದ ದಲಿತ ಸಭಾಧ್ಯಕ್ಷರ ಮೇಲೆ ಪೇಪರ್ ಎಸೆದು ಗೂಂಡಾ ವರ್ತನೆ ತೋರಿದ್ದಾರೆ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ರು.

ಒಟ್ಟಾರೆ, ಸದನದಲ್ಲಿ ನಡೆಯುತ್ತಿದ್ದ ಮಾತಿನ ಕದನ ಈಗ ಬೀದಿಗೆ ಬಿದ್ದಿದೆ. ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಬೇಕಿದ್ದ ಜನಪ್ರತಿನಿಧಿಗಳು ರಾಜಕೀಯ ಯುದ್ಧಕ್ಕೆ ನಾಂದಿ ಹಾಡಿದ್ದಾರೆ. ಈ ವಾಗ್ಯುದ್ಧ ಮತ್ಯಾವ ಹಂತಕ್ಕೆ ತಲುಪುತ್ತೋ? ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ ವಿರುದ್ಧ ಹೋರಾಡಲು ಒಂದಾದ ಬಿಜೆಪಿ, ಜೆಡಿಎಸ್​​; ಇದು ಗೂಂಡಾಗಿರಿ ಎಂದ DCM ಡಿ.ಕೆ.ಶಿವಕುಮಾರ್..!

https://newsfirstlive.com/wp-content/uploads/2023/07/DK_Shivkumar-2.jpg

Load More