newsfirstkannada.com

ಜಾರಕಿಹೊಳಿ ನಿವಾಸದ ಮೇಲೆ ಅಶ್ಲೀಲ ಪೋಸ್ಟರ್​.. ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ‘ಸಾಹುಕಾರ’ ವಾಗ್ದಾಳಿ

Share :

31-10-2023

  ಕೇಂದ್ರ ಗೃಹ ಮಂತ್ರಿಗೂ ಈ ಬಗ್ಗೆ ದೂರು ನೀಡಿ, ವಿವರಿಸುತ್ತೇನೆ

  ಜಾರಕಿಹೊಳಿ ನಿವಾಸಕ್ಕೆ ಅಶ್ಲೀಲ ಪೋಸ್ಟರ್ ಅಂಟಿಸಿದವಱರು?

  ಶಿವಕುಮಾರ್​ಗೆ ರಾಜಕೀಯವಾಗಿ ಉತ್ತರ ಕೊಡಲು ಸಿದ್ಧನಿದ್ದೇನೆ

ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಬಲಿಗರು  ಅಶ್ಲೀಲ ಬರಹದ ಪೋಸ್ಟರ್ ಅಂಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್​ಫಸ್ಟ್​ ಜೊತೆ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ತಡರಾತ್ರಿ ರಮೇಶ್ ಜಾರಕಿಹೋಳಿ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದ ಕಾಂಪೌಂಡ್​ ಗೋಡೆಗಳಿಗೆ ಪೋಸ್ಟರ್ ಅಂಟಿಸಲಾಗಿದೆ.

ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ.. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮೊದಲಿನಿಂದಲೂ ಇದೇ ಪ್ರವೃತ್ತಿ ಮಾಡಿಕೊಂಡು ಬಂದವರು. ಇದಕ್ಕೆ ಉತ್ತರ ಕೊಡಲು ನಾನು ರಾಜಕೀಯವಾಗಿ ಸಿದ್ಧನಿದ್ದೇನೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಎಲ್ಲವನ್ನೂ ವಿವರಿಸಿ ಹೇಳುತ್ತೇನೆ. ಇದಿಷ್ಟೇ ಅಲ್ಲ, ಕೇಂದ್ರ ಗೃಹ ಸಚಿವರಿಗೂ ದೂರು ಕೊಟ್ಟು, ಘಟನೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ವರ್ತನೆ ಎಂತಹದ್ದು ಎಂಬುವುದರ ಕುರಿತು ಇಂದು ಮಧ್ಯಾಹ್ನ ಮಾಧ್ಯಮಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಆಕ್ರೋಶದಿಂದ ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಾರಕಿಹೊಳಿ ನಿವಾಸದ ಮೇಲೆ ಅಶ್ಲೀಲ ಪೋಸ್ಟರ್​.. ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ‘ಸಾಹುಕಾರ’ ವಾಗ್ದಾಳಿ

https://newsfirstlive.com/wp-content/uploads/2023/10/JARAKIHOLI_DKS.jpg

Load More