/newsfirstlive-kannada/media/post_attachments/wp-content/uploads/2023/11/DKS-1.jpg)
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಎಷ್ಟು ಸ್ಥಾನ ಗೆಲ್ಲುತ್ತೆ ಎಂಬ ಬಗ್ಗೆ ಮಾತನಾಡಿದ್ದಾರೆ. ನ್ಯೂಸ್​ ಫಸ್ಟ್​ ವಿಶೇಷ ಸಂದರ್ಶನದಲ್ಲಿ ಭಾಗಿಯಾದ ಅವರು ರಾಜಕೀಯ ಬೆಳವಣಿಗೆ ಬಗ್ಗೆ ಮನಬಿಚ್ಚಿದ್ದಾರೆ.
ಕುಮಾರಸ್ವಾಮಿ ಜೊತೆ ಆರ್​ ಅಶೋಕ್​ ಅವರನ್ನು ಚುನಾವಣೆಯಲ್ಲಿ ಎದುರಿಸಬೇಕಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್​, ಕನಪುರದಲ್ಲಿ ಅರ್ಜಿ ಬಂದು ಹಾಕಿದ್ರು. ನನ್ನ 1 ಲಕ್ಷದ 23 ಹತ್ರತ್ರ ಓಟಲ್ಲಿ ಗೆಲ್ಲಿಸಿದ್ರು. ಅವ್ರು ಡೆಪಾಸಿಟ್​​ ಕಳೆದ್ರು. ಇನ್ನೇನು ಎದುರಿಸಲಿ ನಾನು ಎಂದು ಉತ್ತರ ನೀಡಿದ್ದಾರೆ.
ಲೋಕಸಭೆ ಚುನಾವಣೆಯ ಮೊದಲು ಅಥವಾ ನಂತರ ಡಿಕೆಶಿಯವರನ್ನ ಜೈಲಿಗೆ ಕಳುಹಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಚರ್ಚೆಯ ಕುರಿತಾದ ಚರ್ಚೆಯ ಬಗ್ಗೆಯು ಮಾತನಾಡಿದ ಅವರು, ಅಂತಹ ಷಡ್ಯಂತ್ರ ನಡೀತಾ ಇದೆ, ಪ್ರಯತ್ನ ಮಾಡ್ತಾ ಇದ್ದಾರೆ. ಅವರಿಗೆ ಯಶಸ್ವಿಯಾಗಲಿ. ಈ ಹಣೆಬರಹವನ್ನು ತಪ್ಪಿಸಲು ಸಾಧ್ಯವಾಗುತ್ತಾ. ಜೈಲಿಗೆ ಕಳುಹಿಸಿದರು ಬಂದ ಬಳಿಕ ಕಾಂಗ್ರೆಸ್​ ಪಕ್ಷದ ಅಧ್ಯಕ್ಷನಾದೆ. ಹಗಲು ರಾತ್ರಿ ನಿದ್ದೆ ಮಾಡಲಿಲ್ಲ. ಈ ಸರ್ಕಾರವನ್ನ ನಾನು ಸಿದ್ದರಾಮಯ್ಯನವರು ತಂದ್ವಿ. ಈಗ 136 ಸೀಟು ಬಂದಿದೆ ಅಂತ ನೀವು ಹೇಳ್ತಾ ಇದ್ದೀರಾ. ಉಪ ಮುಖ್ಯಮಂತ್ರಿ ಆಗಿದ್ದೀರಾ ಅಂತ ಹೇಳ್ತಾ ಇದ್ದೀರಾ. ಈ ಹಣೆಬರಹವನ್ನ ತಪ್ಪಿಸಲು ಆಯ್ತಾ ಬಿಜೆಪಿಯವರಿಗೆ ಎಂದು ಹೇಳಿದ್ದಾರೆ.
ಡಿ.ಕೆ ಶಿವಕುಮಾರ್​ ಪಂಚರಾಜ್ಯದ ಚುನಾವಣೆಯ ಕುರಿತಾಗಿ ಮಾಡಿನಾಡಿದ್ದು, ಕಾಂಗ್ರೆಸ್​ ಸರ್ಕಾರ ಎಲ್ಲ ರಾಜ್ಯಗಳಲ್ಲೂ ಬರುತ್ತೆ ಎಂದಿದ್ದಾರೆ. ಬಳಿಕ ಲೋಕಸಭೆ ಸೀಟು ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಜನವರಿ ಬರಲಿ ಆಮೇಲೆ ಮಾತನಾಡೋಣ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us