/newsfirstlive-kannada/media/post_attachments/wp-content/uploads/2024/04/Dk-Shivakumar-On-HDK-1.jpg)
ಬೆಂಗಳೂರು: ನನಗೆ ಗಾಂಧಿ ಕುಟುಂಬದ ಮೇಲೆ ಪ್ರೀತಿ ಇದೆ. ಆ ಕುಟುಂಬಕ್ಕೆ ನಾನು ಲಾಯಲ್ ಆಗಿದ್ದೇನೆ, ಒಂದು ದಿನ ಫಲ ಸಿಗಲಿದೆ, ನಾನು ಅದಕ್ಕಾಗಿ ಕಾಯುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಪಕ್ಷಕ್ಕಾಗಿ ಹಣಬಲ, ತೋಳ್ಬಲ ಎರಡರ ಮೂಲಕವೂ ದುಡಿದರೂ ಸಿಎಂ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ನನ್ನ ಬಲ ಮತ್ತು ವಿಕ್ನೆಸ್ ಎರಡು ಗೊತ್ತಿದೆ. ನನ್ನ ಶಕ್ತಿಯಿಂದಲೇ ಕೊಟ್ಟಿರುವ ಕೆಲಸ ಮಾಡಿ ಮುಗಿಸಿದ್ದೇನೆ. ನನ್ನ ವೀಕ್ನೆಸ್ ಏನಂದ್ರೆ ನಾನು ಯಾವತ್ತು ಹೈಕಮಾಂಡ್​ಗೆ ಬ್ಲಾಕ್ ಮೇಲ್ ಮಾಡಿಲ್ಲ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ, ಯಾವತ್ತೂ ಹೈಕಮಾಂಡ್ ವಿರುದ್ಧ ಹೋಗುವುದಿಲ್ಲ.
ಇದನ್ನೂ ಓದಿ:ಸೇಡು ತೀರಿಸಿಕೊಳ್ಳೋದು ಶತಸಿದ್ಧ.. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ವಿರುದ್ಧ ನಿಖಿಲ್, HDK ಶಪಥ!
/newsfirstlive-kannada/media/post_attachments/wp-content/uploads/2024/06/RAHUL-DK-SHIVAKUMAR.jpg)
ನನಗೆ ಗಾಂಧಿ ಕುಟುಂಬದ ಮೇಲೆ ಪ್ರೀತಿ ಇದೆ. ಗಾಂಧಿ ಕುಟುಂಬಕ್ಕೆ ನಾನು ಲಾಯಲ್ ಆಗಿದ್ದೇನೆ. ಒಂದು ದಿನ ಅದಕ್ಕೆ ಫಲ ಸಿಗಲಿದೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆ. ಸಿಎಂ ಸ್ಥಾನದ ವಿಚಾರದಲ್ಲಿ ನಾವು ಕೆಲ ಒಪ್ಪಂದದ ಮೇಲಿದ್ದೇವೆ, ಅದನ್ನು ಹೇಳಲ್ಲ. ಆ ದಿನ ಬರಲಿ ನೋಡೊಣ ಎಂದಿದ್ದಾರೆ.
ಡಿಸಿಎಂ ಸ್ಥಾನ ಹೆಚ್ಚಿಸಬೇಕು ಎಂಬ ಒತ್ತಡ ಮತ್ತು ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಮೇಲೆ ಹಲವರ ಕಣ್ಣಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ. ಆಸೆ ಇರೋದು ತಪ್ಪಲ್ಲ. ಇಲ್ಲಿ ಯಾವುದೇ ಕುರ್ಚಿ ಖಾಲಿ ಇಲ್ಲ. ಹೈಕಮಾಂಡ್ ಮಾತ್ರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರ ಮತ್ತು ಪಕ್ಷ ಯಾರು ಮುನ್ನಡೆಸಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಅಂತಾ ಹೇಳಿದ್ದಾರೆ.
ತಮ್ಮನ ಸೋಲಿನ ಬಗ್ಗೆ ಮಾತು..
ನಾನು ಯಾವತ್ತು ನನ್ನ ತಮ್ಮ (ಡಿ.ಕೆ ಸುರೇಶ್) ಲೋಕಸಭೆ ಚುನಾವಣೆಯಲ್ಲಿ ಸೋಲುತ್ತಾರೆ ಅಂದುಕೊಂಡಿರಲಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್​ನಿಂದ ನನ್ನ ತಮ್ಮ ಒಬ್ಬರೇ ಗೆಲುವು ಸಾಧಿಸಿದ್ದರು. ನನಗೆ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಅನುಮಾನವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.
ಇದನ್ನೂ ಓದಿ:ಹೊಸ ಮುಖ್ಯಮಂತ್ರಿ ಆಯ್ಕೆ BJPಗೆ ಚಾಲೆಂಜ್ ಆಯ್ತಾ.. ಮಹಾರಾಷ್ಟ್ರದಲ್ಲಿ ಶಿಂಧೆ ಹಿಡಿದ ಪಟ್ಟು ಏನು?
/newsfirstlive-kannada/media/post_attachments/wp-content/uploads/2024/02/DK-BROTHERS.jpg)
ಲೋಕಸಭೆ ಚುನಾವಣೆಯಲ್ಲಿ ಡಿಕೆ ಸುರೇಶ್​ಗೆ ಆಗಿರುವ ಸೋಲಿನ ಬಗ್ಗೆ ಮಾತನಾಡಿ, ಸಹೋದರ ಡಿ.ಕೆ ಸುರೇಶ್​ ಸೋಲುತ್ತಾರೆ ಅಂದುಕೊಂಡಿರಲಿಲ್ಲ. ಬಹಳಷ್ಟು ಷಡ್ಯಂತ್ರವಾಗಿತ್ತು, ಹಣ ಹಂಚಲಾಗಿತ್ತು. ಕೊನೆಗೆ ನಾವು ಫಲಿತಾಂಶ ಒಪ್ಪಿಕೊಳ್ಳಬೇಕಾಯಿತು, ಒಪ್ಪಿಕೊಂಡೆವು. ನನಗೆ ಇನ್ನೂ ತಮ್ಮನ ಸೋಲನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಚನ್ನಪಟ್ಟಣ ಕ್ಷೇತ್ರ ಖಾಲಿಯಾದ ಮೊದಲ ದಿನದಿಂದ ಕೆಲಸ ಮಾಡಿದ್ದೇನೆ. ನನಗೆ ಚುನಾವಣೆ ಮಾಡೋದು ಗೊತ್ತಿದೆ. ನಾನು ನಿರಂತರವಾಗಿ 8 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಕುಮಾರಸ್ವಾಮಿ 8 ಬಾರಿ ಚುನಾವಣೆಗೂ ಸ್ಪರ್ಧಿಸಿಲ್ಲ. ಚನ್ನಪಟ್ಟಣ ಗೆಲುವಿನಲ್ಲಿ ನನ್ನದೇ ತಂತ್ರಗಾರಿಕೆ ಮಾಡಿದೆ, ಜನ ಕೈಹಿಡಿದಿದ್ದಾರೆ. ಅದು ಒಕ್ಕಲಿಗರ ಕ್ಷೇತ್ರವಾಗಿದ್ದರೂ ನಾನು ಯಾವತ್ತೂ ಒಕ್ಕಲಿಗ ನಾಯಕ ಅಂತ ಹೇಳಿಕೊಂಡಿಲ್ಲ.
ನನ್ನ ತಮ್ಮ ಡಿ.ಕೆ.ಸುರೇಶ್​​ಗೆ ಚನ್ನಪಟ್ಟಣ ಚುನಾವಣೆಯಲ್ಲಿ ನಿಲ್ಲಿಸಲು ಒತ್ತಡ ಬಂತು. ಸಿಎಂ ಸಿದ್ದರಾಮಯ್ಯ ಸಹ ಚುನಾವಣೆಯಲ್ಲಿ ಡಿ.ಕೆ ಸುರೇಶ್ ಅವರನ್ನು ನಿಲ್ಲಿಸಲು ಹೇಳಿದರು. ಜೊತೆಗೆ ಬಹಳಷ್ಟು ನಾಯಕರು ಒತ್ತಾಯ ಮಾಡಿದರು. ಆದರೆ ನಾನು ಪಕ್ಷ ಮೊದಲು, ಕುಟುಂಬ ನಂತರ ಅಂತ ಎಂದು ಹೇಳಿದೆ ಎಂದರು.
ಇದನ್ನೂ ಓದಿ: ಹೊಸ ಮುಖ್ಯಮಂತ್ರಿ ಆಯ್ಕೆ BJPಗೆ ಚಾಲೆಂಜ್ ಆಯ್ತಾ.. ಮಹಾರಾಷ್ಟ್ರದಲ್ಲಿ ಶಿಂಧೆ ಹಿಡಿದ ಪಟ್ಟು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us