newsfirstkannada.com

ಒಂದೇ ದಿನ ಮೂರು ಆಪರೇಷನ್​​​, ನಾಲ್ಕು ಕ್ಷೇತ್ರಕ್ಕೆ ದಾಳ; ಆಪರೇಷನ್​​ ಹಸ್ತಕ್ಕೆ ‘ಕೋ’ ಕೊಟ್ಟ ಡಿ.ಕೆ ಶಿವಕುಮಾರ್​

Share :

07-09-2023

  ಮೂರು ಆಪರೇಷನ್​​​.. ನಾಲ್ಕು ಕ್ಷೇತ್ರಕ್ಕೆ ದಾಳ!

  ಕೆಕೆ ಗೆಸ್ಟ್​​ಹೌಸ್​​​ನಲ್ಲಿ ನೈಟ್​ ಆಪರೇಷನ್​ ಮೀಟಿಂಗ್​

  ಹೆಬ್ಬಾರ್​, ಶಿವರಾಮೇಗೌಡ ಜೊತೆ ಡಿಕೆಶಿ ರಹಸ್ಯ ಮೀಟಿಂಗ್​​

ರಾಜ್ಯದಲ್ಲಿ ಆಪರೇಷನ್ ಕಾಂಗ್ರೆಸ್ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಆಪರೇಷನ್ ಹಸ್ತದಡಿ ಕಾಂಗ್ರೆಸ್ ಸೇರುವವರ ಪಟ್ಟಿಯಲ್ಲಿ ಹಲವು ಹೆಸರು ಮುನ್ನೆಲೆಗೆ ಬಂದಿವೆ. ಈಗಾಗಲೇ ಬಹಿರಂಗವಾಗಿ ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರಿದ್ದಾರೆ. ಎಸ್​​ಟಿಎಸ್​​, ಕಟ್ಟಾ, ರೇಣುಕಾಚಾರ್ಯ, ರಾಜೂಗೌಡ, ಬಿಸಿ ಪಾಟೀಲ್​​ ಭೇಟಿ ಬಳಿಕ ನಿನ್ನೆ ಒಂದೇ ದಿನ ಮೂವರು ನಾಯಕರ ಭೇಟಿ ಆಗಿದೆ. ಅದರಲ್ಲೂ ನೈಟ್​ ಆಪರೇಷನ್​​ ಸಾಕಷ್ಟು ಕುತೂಹಲಕ್ಕೆ ಕಾರಣ ಆಗಿದೆ.

ಆಪರೇಷನ್​ ಅಲ್ಲ, ಇದು ಕೋ ಆಪರೇಷನ್​​. ಅಂದ್ರೆ ಹೊಂದಾಣಿಕೆ, ಸ್ವಲ್ಪ ಸರಳೀಕರಿಸಿದ್ರೆ ಸಹಕಾರ ಅಂತ ಅರ್ಥ. ಅಂದಹಾಗೆಯೇ ಈ ಮಾತು ನಿನ್ನೆ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ ನಿವಾಸಕ್ಕೆ ಆಗಮಿಸಿದ್ದ ಡಿಸಿಎಂ ಡಿಕೆಶಿ, ಈ ಭೇಟಿಗೆ ಕೊಟ್ಟ ಹೊಸ ಪದ. ಆದರೆ ಯಾವ ರೀತಿಯ ಕೋ ಆಪರೇಷನ್​ ಅನ್ನೋದು ರಾಜಕೀಯ ಗರಡಿಯ ಜಗಜಟ್ಟಿ ಡಿಕೆಶಿಯನ್ನ ಹತ್ತಿರದಿಂದ ಬಲ್ಲವರು ಬಲ್ಲ ಬಹಿರಂಗ ಸತ್ಯ. ಆ ಸತ್ಯವೇ ಹತ್ತಿರವಾಗ್ತಿರುವ ಎಲೆಕ್ಷನ್​​ ಕ್ಯಾಲೆಂಡರ್​.

ಆಪರೇಷನ್​​ ಹಸ್ತಕ್ಕೆ ‘ಕೋ’ ಕೊಟ್ಟ ಡಿಸಿಎಂ ಡಿಕೆಶಿ!

ಆಪರೇಷನ್​​​ ಹಸ್ತ, ರಿವರ್ಸ್​​​ ಆಪರೇಷನ್​​​​, ಘರ್​ವಾಪ್ಸಿ ಮುನಿದು ಹೋದ ನಾಯಕರಿಗೆ ಗಾಳ ಹಾಕಲಾಗ್ತಿದೆ. ಈವರೆಗೆ ಕದ್ದುಮುಚ್ಚಿ ನಡೆಯುತ್ತಿದ್ದ ಈ ಸಂಪರ್ಕ ಕ್ರಾಂತಿ, ಈಗ ಓಪನ್​​ ಟಾರ್ಚ್​​​ನಲ್ಲೇ ಕಣ್ಣಿಗೆ ಕಾಣ್ತಿದೆ. ಪಕ್ಷ ಬಿಟ್ಟವರು ಮರಳಿ ಗೂಡಿಗೆ ಕರೆತರುವ ಯತ್ನ ಸಾಗಿದೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಟಾರ್ಗೆಟ್​ 20 ಮಿಷನ್​​ ರೀಚ್​​ ಆಗಲು ಕೈಪಡೆ ದಂಡನಾಯಕ ಡಿಕೆಶಿ ಇನ್ನಿಲ್ಲದ ಕಸರತ್ತಿಗೆ ಕೈಹಾಕಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ.

ಒಂದೇ ದಿನ ಮೂರು ಹಕ್ಕಿಗಳಿಗೆ ಡಿಕೆಶಿ ಗಾಳ!

ರಾಜ್ಯದಲ್ಲಿ ಕೈಪಡೆ​​ ಅಧಿಕಾರದ ಗದ್ದುಗೆ ಹಿಡಿಯುತ್ತಲೆ, ಘರ್​ವಾಪ್ಸಿ ಆರಂಭ ಆಗಿದೆ. ಈಗಾಗ್ಲೇ ಬಿಜೆಪಿಯ ಹಲವು ನಾಯಕರು, ಕಾಂಗ್ರೆಸ್​​ ಮನೆಯ ಹೊಸ್ತಿಲಲ್ಲಿ ನಿಂತಿದ್ದಾರೆ. ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟ ಹಲವು ನಾಯಕರು, ಹಸ್ತಲಾಘವದಿಂದ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿದ್ದಾರೆ. ಇತ್ತ, ಹಸ್ತಕ್ಕೂ ತನ್ನ ಮತಪ್ರಮಾಣ ಹೆಚ್ಚಿಸಿಕೊಳ್ಳಲು ಜಿಲ್ಲಾವಾರು ಬಲಿಷ್ಠ ನಾಯಕರ ಪಡೆಯ ಬೇಟೆ ಅನಿವಾರ್ಯ ಆಗಿದೆ. ಈ ಬೆನ್ನಲ್ಲೆ ನಿನ್ನೆ ಒಂದೇ ದಿನ ಮೂವರು ಬಿಜೆಪಿ ನಾಯಕರಿಗೆ ಕೆಪಿಸಿಸಿ ಸಾರಥಿ, ಡಿಸಿಎಂ ಡಿಕೆಶಿ ಭೇಟಿ ಆಗಿದ್ದಾರೆ. 4 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಬೇಟೆಗೆ ಇಳಿದಿದ್ದಾರೆ.

ದಿಢೀರ್ ಡಿಸಿಎಂ ಡಿಕೆಶಿ ಭೇಟಿ ಮಾಡಿದ ಬಿಜೆಪಿ ನಾಯಕರು

ಆಪರೇಷನ್ ಹಸ್ತದ ವದಂತಿ ಹೆಚ್ಚುತ್ತಿರುವ ಹೊತ್ತಲ್ಲೇ ನಿನ್ನೆ ಸಂಜೆ ಸಂಪರ್ಕ ಕ್ರಾಂತಿ ಆಗಿದೆ. ಬಿಜೆಪಿಯ ಇಬ್ಬರು ಪ್ರಬಲ ನಾಯಕರು ಕೆಕೆ ಗೆಸ್ಟ್​​ಹೌಸ್​​ನಲ್ಲಿ ಡಿಕೆಶಿ ಭೇಟಿ ಆಗಿದ್ದಾರೆ. ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್​, ಮಂಡ್ಯ ಮಾಜಿ ಸಂಸದ ಎಲ್​.​ಆರ್ ಶಿವರಾಮೇಗೌಡ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

4 ತಿಂಗಳ ಹಿಂದಷ್ಟೇ ಬಿಜೆಪಿ ಸೇರಿದ್ದ ಶಿವರಾಮೇಗೌಡರು

ಕುಮಾರಕೃಪಾ ಅತಿಥಿ ಗೃಹದಲ್ಲಿ ಈ ರಹಸ್ಯ ಸಭೆ ನಡೆದಿದೆ. ಸುಮಾರು 40 ನಿಮಿಷಗಳ ಕಾಲ ಡಿಸಿಎಂ ಡಿಕೆಶಿ ಜೊತೆಗೆ ಚರ್ಚೆ ಆಗಿದೆ. ಕಾಂಗ್ರೆಸ್ ಸೇರ್ಪಡೆ ಸಂಬಂಧ ನಾಯಕರ ಮಧ್ಯೆ ಚರ್ಚೆ ಆಗಿದೆ ಎನ್ನಲಾಗಿದೆ. ಕಳೆದ 15 ದಿನಗಳಲ್ಲಿ ಶಿವರಾಂ ಹೆಬ್ಬಾರ್​​​​ 2ನೇ ಬಾರಿ ಡಿಕೆಶಿ ಭೇಟಿ ಆದ್ರೆ, ನಾಲ್ಕು ತಿಂಗಳ ಹಿಂದಷ್ಟೇ ಬಿಜೆಪಿ ಸೇರಿದ್ದ ಶಿವರಾಮೇಗೌಡ, ಆರೋಗ್ಯ ವಿಚಾರಣೆಯ ನೆಪ ಹೇಳಿದ್ದಾರೆ.

ಅಷ್ಟಮಿ ದಿನವೇ ಕೃಷ್ಣಪ್ಪ ಪುತ್ರಿ ಮನೆಗೆ ಡಿಕೆಶಿ ಭೇಟಿ!

ಇನ್ನು, ನಿನ್ನೆ ಬೆಳಗ್ಗೆ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಿವಾಸಕ್ಕೆ ಡಿ.ಕೆ ಶಿವಕುಮಾರ್ ಭೇಟಿ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣ ಆಗಿದೆ. ಆದರೆ ಭೇಟಿ ಕುರಿತು ಡಿಕೆಶಿ ನೀಡಿದ ಸ್ಪಷ್ಟನೆ ಬೇರೆಯೇ ಆಗಿತ್ತು. ಅವರ ತಂದೆ ಕೃಷ್ಣಪ್ಪ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ರು. ಅವರು ನಮ್ಮ ನಾಯಕರಾಗಿದ್ರು. ಕೃಷ್ಣ ಜನ್ಮಾಷ್ಟಮಿ ಕಾರಣ, ನಿವಾಸಕ್ಕೆ ಆಹ್ವಾನಿಸಿದ್ದರು ಅಷ್ಟೇ ಅಂದಿದ್ದಾರೆ.

ಅಂದಹಾಗೆಯೇ ಕೇವಲ ಒಂದೇ ವಾರದಲ್ಲಿ ಹಲವು ನಾಯಕರನ್ನ ಡಿಕೆಶಿ ಭೇಟಿ ಆಗಿದ್ದಾರೆ. ಕೆಲವರನ್ನ ಹಸ್ತಕ್ಕೆ ಸೆಳೆಯಲು ಯತ್ನಿಸ್ತಿದ್ದಾರೆ. ಈವರೆಗೆ ಯಾರನ್ನೆಲ್ಲಾ ಸಿಎಂ ಮತ್ತು ಡಿಸಿಎಂರನ್ನ ಬಿಜೆಪಿ, ದಳ ನಾಯಕರು ಭೇಟಿ ಆಗಿದ್ದಾರೆ ಅನ್ನೋದನ್ನ ನೋಡೋದಾದ್ರೆ,

 1. ಎಸ್​.ಟಿ ಸೋಮಶೇಖರ್​​ ಯಶವಂತಪುರ ಶಾಸಕ
 2. ಶಿವರಾಂ ಹೆಬ್ಬಾರ್​​​ ಯಲ್ಲಾಪುರ ಶಾಸಕ
 3. ಬಿಸಿ ಪಾಟೀಲ್ ಹಿರೇಕೆರೂರು ಮಾಜಿ ಶಾಸಕ
 4. ರಾಜೂಗೌಡ ಸುರಪುರ ಮಾಜಿ ಶಾಸಕ
 5. ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿ ಮಾಜಿ ಶಾಸಕ
 6. ಕಟ್ಟಾ ಸುಬ್ರಮಣ್ಯ ನಾಯ್ಡು ಮಾಜಿ ಸಚಿವ
 7. ತೇಜಸ್ವಿನಿ ಅನಂತಕುಮಾರ್​ ಬಿಜೆಪಿ ನಾಯಕಿ

ಈ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದಿದ್ದು ಯಶವಂತಪುರ ಶಾಸಕ ಎಸ್​.ಟಿ ಸೋಮಶೇಖರ್​​. ಸೋಮಶೇಖರ್​​​ ಆಪ್ತರು ಡಿಕೆಶಿ ಸಮ್ಮುಖದಲ್ಲೇ ಕಾಂಗ್ರೆಸ್​​ ಸೇರಿದ್ದಾರೆ. ಅದೇ ಹೊತ್ತಿಗೆ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್​​​ ಕೂಡ ಸಿಎಂ ಭೇಟಿ ಆಗಿದ್ದರು. ಈಗ ಡಿಕೆಶಿ ಜೊತೆ 2ನೇ ಬಾರಿ ಸಭೆ ನಡೆಸಿದ್ದಾರೆ. ಉತ್ತರ ಕನ್ನಡ ಲೋಕಸಭೆ ಟಿಕೆಟ್​​ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಹಿರೇಕೆರೂರು ಮಾಜಿ ಶಾಸಕ ಬಿಸಿ ಪಾಟೀಲ್ ಚುನಾವಣೆಯಲ್ಲಿ ಸೋಲು ಕಂಡಿದ್ದು, ಹಾವೇರಿ-ಗದಗ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಮೊನ್ನೆ ಸುದೀಪ್​​​ ಬರ್ತಡೇ ದಿನ ಸುರಪುರ ಮಾಜಿ ಶಾಸಕ ರಾಜೂಗೌಡ ಜೊತೆ ಡಿಕೆಶಿ ಜೊತೆ ಚರ್ಚೆ ನಡೆಸಿದ್ರು. ಇನ್ನು, ದಾವಣಗೆರೆ ಟಿಕೆಟ್​​ ಆಕಾಂಕ್ಷಿ ಆಗಿರುವ ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಕೂಡ ಪದೇ ಪದೇ ಸಿಎಂ, ಡಿಸಿಎಂ ಭೇಟಿ ಆಗ್ತಿದ್ದಾರೆ. ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಒಂದು ರೌಂಡ್​​ ಭೇಟಿ ಮುಗಿಸಿದ್ದಾರೆ. ಎಲ್ಲಕ್ಕೂ ಅಚ್ಚರಿ ಅಂದ್ರೆ ಬಿಜೆಪಿ ಕಟ್ಟಿ ಬೆಳೆಸಿದ ದಿವಂಗತ ಅನಂತಕುಮಾರ್​ ಪತ್ನಿ ತೇಜಸ್ವಿನಿ ಸಹ ಡಿಕೆಶಿ ಭೇಟಿ ಆಗಿದ್ರು. ಆದರೆ, ಇದರಲ್ಲಿ ರಾಜಕೀಯ ಇಲ್ಲ ಅಂತ ಸ್ವತಃ ಡಿಕೆಶಿ ತೆರೆ ಎಳೆದಿದ್ರು.

ಈಗಾಗಲೇ ಆಯನೂರು ಮಂಜುನಾಥ್​, ನಾಗರಾಜಗೌಡ ಕಾಂಗ್ರೆಸ್​ ಕೈಹಿಡಿದಿದ್ದಾರೆ. ಒಟ್ಟಾರೆ, ಅಭಿವೃದ್ಧಿ, ಸ್ನೇಹದ ಪಾಠ, ಕಾರ್ಯಕರ್ತರ ಒತ್ತಡ ಅಂತ ಭೇಟಿಗೆ ಕಾರಣಗಳ ಪಟ್ಟಿ ನೀಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಆಪರೇಷನ್​ ಹಸ್ತದ ವೇಗ ಮತ್ತಷ್ಟು ರಣವೇಗ ಪಡೆಯೋದು ಖಚಿತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ದಿನ ಮೂರು ಆಪರೇಷನ್​​​, ನಾಲ್ಕು ಕ್ಷೇತ್ರಕ್ಕೆ ದಾಳ; ಆಪರೇಷನ್​​ ಹಸ್ತಕ್ಕೆ ‘ಕೋ’ ಕೊಟ್ಟ ಡಿ.ಕೆ ಶಿವಕುಮಾರ್​

https://newsfirstlive.com/wp-content/uploads/2023/09/DKS-2.jpg

Load More