newsfirstkannada.com

CM ಕನಸು ಕಾಣುತ್ತಿರುವ ಡಿ.ಕೆ.ಶಿವಕುಮಾರ್​ಗೆ ಓಪನ್​​ ಆಫರ್​​ ಕೊಟ್ಟ ಹೆಚ್​​.ಡಿ.ಕುಮಾರಸ್ವಾಮಿ..!

Share :

05-11-2023

  ಟಿಸಿಎಂ-ಡಿಸಿಎಂ ಅಂತ ಸರ್ಕಾರಕ್ಕೆ ಹೊಸ ಹೆಸರು ಕೊಟ್ಟ ಹೆಚ್​ಡಿಕೆ

  ಕಾಂಗ್ರೆಸ್​ನ ಸಿಎಂ ತಿಕ್ಕಾಟವನ್ನು ಕುಟುಕಿದ ಮಾಜಿ ಕುಮಾರಸ್ವಾಮಿ

  ‘ಕುಮಾರಸ್ವಾಮಿ ಒಳ್ಳೆಯ ವಿಪಕ್ಷ ನಾಯಕರಾಗಲಿ’ ಎಂದ ಡಿಕೆಶಿ

ಕಾಂಗ್ರೆಸ್​ ಸರ್ಕಾರದಲ್ಲಿನ ಸಿಎಂ ಕುರ್ಚಿ ಕಾದಾಟ ವಿಪಕ್ಷಗಳ ಪಾಲಿಗೆ ಭರ್ಜರಿ ಭೋಜನವಾಗಿದೆ. ಇದರ ಜೊತೆಗೆ ಆಪರೇಷನ್​ ಹಸ್ತಕ್ಕೆ ಮುಂದಾಗಿರುವ ಡಿಸಿಎಂ ಡಿಕೆಶಿಗೆ ಸಿಎಂ ಆಗಲು ದಳಪತಿ ಭಾರೀ ಆಫರ್​ ಕೊಟ್ಟಿದ್ದಾರೆ. ಮಾತ್ರವಲ್ಲದೇ ಸಿಎಂ ಮತ್ತು ಡಿಸಿಎಂಗೆ ಹೊಸ ನಾಮಕರಣ ಮಾಡಿದ್ದಾರೆ.

ಕಾಂಗ್ರೆಸ್​ ಭರ್ಜರಿಯಾಗಿ 135 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದದ್ದೇ ಬಂದದ್ದು ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಲೇ ಇದೆ. ಪಕ್ಷದ ಆಂತರಿಕ ಕಚ್ಚಾಟ ಗೌಪ್ಯವಾಗೇನೂ ಉಳಿದಿಲ್ಲ. ಅದರಲ್ಲೂ ಸಿಎಂ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ವರ್ಸಸ್​ ಡಿಸಿಎಂ ಡಿಕೆಶಿ ತಿಕ್ಕಾಟ ಜೋರಾಗೇ ನಡೆಯುತ್ತಿದೆ. ಮೊನ್ನೆ ಸಿದ್ದರಾಮಯ್ಯ ನಾನೇ ಸಿಎಂ ಅಂತ ಹೇಳಿದ್ಮೇಲೆ ಇದು ನೆಕ್ಸ್ಟ್​ ಲೆವೆಲ್​ಗೆ ಹೋಗಿದೆ. ಸದ್ಯ ಕಾಂಗ್ರೆಸ್ ಸರ್ಕಾರದ ಈ ಸಿಎಂ ಕುರ್ಚಿ ಕಿತ್ತಾಟ ವಿಪಕ್ಷಗಳ ಬಾಯಿಗೆ ಆಹಾರವಾಗಿದೆ.

ಕಾಂಗ್ರೆಸ್​ನ ಸಿಎಂ ತಿಕ್ಕಾಟವನ್ನು ಕುಟುಕಿದ ಮಾಜಿ ಸಿಎಂ ಕುಮಾರಸ್ವಾಮಿ
ಸಿಎಂ ಕನಸು ಕಾಣುತ್ತಿರುವ ಡಿಕೆಶಿಗೆ ಓಪನ್​​ ಆಫರ್​​ ಕೊಟ್ಟ ದಳಪತಿ

ಡಿಸಿಎಂ ಡಿಕೆಶಿ​ ಸಿಎಂ ಆಗುವುದಾದರೆ ಜೆಡಿಎಸ್​ನ 19 ​​ಶಾಸಕರ ಬೆಂಬಲ ಇದೆ ಅಂತ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಡಿಕೆಗೆ ಆಫರ್ ಕೊಟ್ಟಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗುವುದಕ್ಕೆ ನಾನೇಕೆ ಅಡ್ಡಿಯಾಗಲಿ. ನಾಳೆಯೇ ಡಿಕೆ ಸಿಎಂ ಆಗಲಿ. ನಮ್ಮ ಶಾಸಕರಿಗೆ ಆಪರೇಷನ್ ಮಾಡೋಕೆ ಪ್ರಯತ್ನ ಮಾಡ್ತಾ‌ ಇದ್ದಾರೆ. ನಾನೇ ನಮ್ಮ 19 ಜನರ ಬೆಂಬಲ ಕೊಡಿಸ್ತೀನಿ ಸಿಎಂ ಆಗಲಿ ಅಂತ ಓಪನ್ ಆಫರ್ ಕೊಟ್ಟಿದ್ದಾರೆ.

ಕಾಂಗ್ರೆಸ್​ ಸರ್ಕಾರದಲ್ಲಿ ಸಿಎಂ ಆಗಲು ಕ್ಯೂ ನಿಂತ್ಕೊಂಡಿದ್ದಾರೆ. 5 ವರ್ಷಗಳಲ್ಲಿ ಎಷ್ಟು ಜನ ಸಿಎಂ ಆಗ್ತಾರೋ ಗೊತ್ತಿಲ್ಲ. ಹೀಗಾಗಿ ಈ ಸರ್ಕಾರಕ್ಕೆ ಟಿಸಿಎಂ ಹಾಗೂ ಡಿಸಿಎಂ ಅಂತ ಹೆಸರಿಡಬೇಕು. ಟಿಸಿಎಂ ಅಂದರೆ ಟೆಂಪ್ರುವರಿ ಚೀಫ್ ಮಿನಿಸ್ಟರ್. ಡಿಸಿಎಂ ಅಂದರೆ ಡುಬ್ಲಿಕೆಟ್ ಚೀಫ್ ಮಿನಿಸ್ಟರ್  ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

‘ಹೆಚ್​ಡಿ ಕುಮಾರಸ್ವಾಮಿ ಒಳ್ಳೆಯ ವಿಪಕ್ಷ ನಾಯಕರಾಗಲಿ’

ಇನ್ನು ತಮ್ಮ ಶಾಸಕರ ಬೆಂಬಲ ನೀಡುವ ವಿಚಾರವಾಗಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ. ನಮಗೆ ಸಾಕಷ್ಟು ಬೆಂಬಲ ಇದೆ. ನೀವು NDA ನಲ್ಲಿ ಇದೀರಾ, ಕಾಂಗ್ರೆಸ್ ಪಕ್ಷದ ಬಗ್ಗೆ ಯಾಕೆ ಮಾತಾಡ್ತೀರಾ? ಅದು ಬಿಟ್ಟು ನೀವೊಬ್ಬ ಒಳ್ಳೆ ವಿಪಕ್ಷ ನಾಯಕನಾಗಿ ಕೆಲಸ ಮಾಡಿ. ಟೀಕೆ ಮಾಡುವುದು ಬಿಟ್ಟು ನಮಗೆ ಸಲಹೆ ಕೊಡಿ ಅಂತ ಹೇಳಿದ್ದಾರೆ. ಅಲ್ಲದೆ ಕುಮಾರಸ್ವಾಮಿ ದೆಹಲಿಯಲ್ಲಿ ಏನ್ ಮಾತಾಡಿದ್ರು ಅಂತಾನೂ ಗೊತ್ತಿದೆ ಅಂತ ಟಾಂಗ್ ಕೊಟ್ಟಿದ್ದಾರೆ. ಒಟ್ಟಾರೆ ಕಾಂಗ್ರೆಸ್​ನ ಸಿಎಂ ಕುರ್ಚಿಯ ಗುದ್ದಾಟ ಕಾಂಗ್ರೆಸ್​ ಪಾಳಯದಲ್ಲಿ ಕಂಪನ ಮೂಡಿಸಿದ್ರೆ ವಿಪಕ್ಷಗಳ ಬಾಯಿಗೆ ಭರ್ಜರಿ ಭೋಜನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM ಕನಸು ಕಾಣುತ್ತಿರುವ ಡಿ.ಕೆ.ಶಿವಕುಮಾರ್​ಗೆ ಓಪನ್​​ ಆಫರ್​​ ಕೊಟ್ಟ ಹೆಚ್​​.ಡಿ.ಕುಮಾರಸ್ವಾಮಿ..!

https://newsfirstlive.com/wp-content/uploads/2023/10/HDK-DKS.jpg

Load More