ಕರ್ನಾಟಕಕ್ಕೆ ಅಕ್ಕಿ ನೀಡದ ಮೋದಿ ಸರ್ಕಾರಕ್ಕೆ ಸಂಕಷ್ಟ
FCI ಇ-ಹರಾಜಿನಲ್ಲಿ ಅಕ್ಕಿ ಕೊಳ್ಳುವವರೇ ಇಲ್ಲ ಎಂದ ಡಿಕೆಶಿ
ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಡಿಸಿಎಂ ಡಿಕೆಶಿ ಕಿಡಿ
ಬೆಂಗಳೂರು: ತನ್ನ ಬಳಿ ಇರುವ ದಾಸ್ತಾನು ಹುಳ ಹಿಡಿದರೂ ಪರವಾಗಿಲ್ಲ ಕನ್ನಡಿಗರಿಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ತಯಾರಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕೆಂಡಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ವರದಿಗಳ ಪ್ರಕಾರ ಮುಕ್ತ ಮಾರುಕಟ್ಟೆ ಯೋಜನೆಯಡಿ ಕೇಂದ್ರದ ಬಳಿ ಇರುವ ಅಕ್ಕಿಯನ್ನು ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಅಷ್ಟಾದರೂ ಕನ್ನಡಿಗರಿಗೆ ಅಕ್ಕಿ ಕೊಡಲು ಬಿಜೆಪಿ ಸುತಾರಾಂ ಸಿದ್ಧವಿಲ್ಲ. ಬಡವರು ತಿನ್ನುವ ಅನ್ನದಲ್ಲೂ ರಾಜಕೀಯ ಮಾಡುವ ಕೇಂದ್ರ ಸರ್ಕಾರಕ್ಕೆ ರಾಜ್ಯದ ಜನತೆ ಹಸಿದಿದ್ದರೂ ಚಿಂತೆಯಿಲ್ಲ ಎಂದಿದ್ದಾರೆ.
ನಾವು 34 ರೂಪಾಯಿಗೆ ಅಕ್ಕಿ ಖರೀದಿ ಮಾಡುತ್ತೇವೆ ಎಂದರೂ ಒಪ್ಪದೆ ಮುಕ್ತ ಮಾರುಕಟ್ಟೆಯಲ್ಲಿ ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತೀ ರಾಜ್ಯಕ್ಕೆ ಎಫ್‌ಸಿಐನಿಂದ ಧಾನ್ಯಗಳನ್ನು ಕೊಳ್ಳುವ ಅಧಿಕಾರ ಇರುತ್ತದೆ. ನಮ್ಮ ಹಕ್ಕನ್ನೇ ಮೊಟಕುಗೊಳಿಸುತ್ತಿರುವ ಬಿಜೆಪಿಗೆ 2024ರಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅನ್ನಭಾಗ್ಯ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವದ ಸ್ಕೀಮ್. ಈ ಸ್ಕೀಮ್ ಅಡಿಯಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರೋ ರಾಜ್ಯದ ಪ್ರತೀ ಕುಟುಂಬದ ಸದಸ್ಯರಿಗೂ 10 ಕೆಜಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ಅಕ್ಕಿ ನೀಡದ ಕಾರಣ ಸಿಎಂ ಸಿದ್ದರಾಮಯ್ಯ ಸರ್ಕಾರ ಈ ತಿಂಗಳಿನಿಂದಲೇ 5 ಕೆಜಿ ಅಕ್ಕಿಯೊಂದಿಗೆ 170 ರೂ. ಹಣ ನೀಡುವುದಾಗಿ ಹೇಳಿದ್ದಾರೆ.
FCI ಇ-ಹರಾಜಿನಲ್ಲಿ ಅಕ್ಕಿ ಕೊಳ್ಳದ ರಾಜ್ಯಗಳು
ಕರ್ನಾಟಕ ಸೇರಿದಂತೆ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿಯಲ್ಲಿ ಅಕ್ಕಿ ಕೊಳ್ಳಲು FCI ಅವಕಾಶ ನಿರಾಕರಿಸಿತ್ತು. ಈ ಬೆನ್ನಲ್ಲೇ FCI ಇ-ಹರಾಜಿನಲ್ಲಿ ಅಕ್ಕಿ ಕೊಳ್ಳಲು ಯಾರು ಮುಂದೆ ಬಂದಿಲ್ಲ ಎಂದು ವರದಿಯಾಗಿದೆ.
ರಾಜ್ಯಗಳಿಗೆ ಅಕ್ಕಿ ನೀಡಬಾರದು ಎಂದಿದ್ದ ಮೋದಿ ಸರ್ಕಾರ ಸತತವಾಗಿ ಏರಿಕೆಯಾಗುತ್ತಿರೋ ಬೆಲೆಗಳ ನಿಯಂತ್ರಣಕ್ಕೆ ಅಕ್ಕಿ ಮತ್ತು ಗೋಧಿ ಧಾನ್ಯಗಳನ್ನು ಇ-ಹರಾಜು ಮಾಡಲು ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಸೂಚನೆ ನೀಡಿತ್ತು. ಕೇಂದ್ರದ ಸೂಚನೆ ಮೇರೆಗೆ ಕಳೆದ ವಾರ ಎಫ್‌ಸಿಐ 3.86 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹರಾಜಿಗಿಟ್ಟಿತ್ತು. ಆದರೆ, 3.86 ಲಕ್ಷ ಮೆಟ್ರಿಕ್ ಟನ್ ಪೈಕಿ ಕೇವಲ 170 ಮೆಟ್ರಿಕ್ ಟನ್‌ಗಳಿಗೆ ಬಿಡ್‌ಗಳನ್ನು ಸ್ವೀಕರಿಸಿದೆ. ಅಂದರೆ ಹೆಚ್ಚಿನ ಖರೀದಿದಾರರು ಮುಂದಾಗಿಲ್ಲ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ