‘ಕೇಸರಿ’ಪಡೆಯ ಅಸಮಾಧಾನಿತರಿಗೆ ‘ಹಸ್ತ’ಪಡೆ ಗಾಳ!
ವಿಜಯೇಂದ್ರಗೆ ಸಾರಥ್ಯ.. ಹಿರಿಯರಲ್ಲಿ ಬೇಸರದ ರೇಖೆ
ರಾಜ್ಯಾಧ್ಯಕ್ಷ ಸ್ಥಾನದ ಸಿಗದೇ ಸೋಮಣ್ಣ ಅಸಮಾಧಾನ
ಬೆಂಗಳೂರು: ಬಿಜೆಪಿ ಉಭಯ ಸಂಕಟದಲ್ಲಿ ಸಿಲುಕಿದೆ. ಬಿಎಸ್ವೈ ಪುತ್ರ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗುತ್ತಲೇ ಲೈಟ್ ಆಗಿ ಅಸಮಾಧಾನ ಶುರುವಾಗಿದೆ. ಇದೇ ಅಸಮಾಧಾನದ ಲಾಭಕ್ಕೆ ಕಾಂಗ್ರೆಸ್ ಮುಂದಾಗಿದೆ. ಲಿಂಗಾಯತ ಪ್ರಬಲ ನಾಯಕ ಸೋಮಣ್ಣಗೆ ಖುದ್ದು ಡಿಕೆಶಿ ಗಾಳ ಹಾಕಿದ್ದಾರೆ.
ವಿಧಾನಸಭೆ ಎಲೆಕ್ಷನ್ ಸೋಲಿನ ಬಳಿಕ ರಾಜ್ಯ ಕಮಲದಲ್ಲಿ ಬಣ ಬಂಡಾಟದ ಲಕ್ಷಣ ಕಾಣಿಸಿದೆ. ಆರಂಭದಲ್ಲಿ ವ್ಯಾಕ್ಸಿನ್ ನೀಡದ ಬಿಜೆಪಿ, ಸೋಂಕು ಉಲ್ಬಣ ಬಳಿಕ ರಾಜ್ಯಾಧ್ಯಕ್ಷರ ನೇಮಕ ಮಾಡಿದೆ. ಅಳೆದು ತೂಗಿ ಕೈಗೊಂಡ ನಿಲುವು ಹೊಸ ಕಲಹಕ್ಕೆ ಮುನ್ನುಡಿ ಬರೆದಿದೆ. ವಿಜಯೇಂದ್ರ ಆಯ್ಕೆ ಬೆನ್ನಲ್ಲೇ ಹಿರಿಯರಲ್ಲಿ ಅಸಮಾಧಾನ ಮೂಡಿದೆ. ಹೀಗೆ ಈ ಅಸಮಾಧಾನ, ಅನುಮಾನ, ಆಪರೇಷನ್ ಹಸ್ತದ ಗುಲ್ಲು ಗಲ್ಲಿ ಗಲ್ಲಿ ಹಬ್ಬಿದೆ.
ಸೋಮಣ್ಣ ಸೆಳೆಯಲು ಆಪರೇಷನ್ ಹಸ್ತಕ್ಕೆ ಪ್ಲಾನ್!
ವಿ.ಸೋಮಣ್ಣ.. ಮಾಜಿ ಸಚಿವ.. ಲಿಂಗಾಯತ ಸಮುದಾಯದ ಪ್ರಬಲ ನಾಯಕ.. ಬಿಜೆಪಿ ಹೈಕಮಾಂಡ್ ಮೆಚ್ಚಿದ ಲೋಕಲ್ ಲೀಡರ್ಸ್.. ಸಂಪನ್ಮೂಲ, ಸಂಘಟನಾ ಚತುರತೆ ಮೆಚ್ಚಿ ಸಿದ್ದು ವಿರುದ್ಧ ಸೋಮಣ್ಣಗೆ ಗರಡಿ ಮನೆಗೆ ಇಳಿಸಲಾಗಿತ್ತು.. ಆ ಬಳಿಕ ನೆಲೆ ಕಳೆದುಕೊಂಡ ಸೋಮಣ್ಣ, ಆಗಾಗ ಬುಸುಗುಟ್ಟಿ, ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಚಾತಕ ಪಕ್ಷಿಯಂತೆ ಕಾಯ್ದಿದ್ರು.. ಆದ್ರೆ, ಬದಲಾದ ಹೈಕಮಾಂಡ್ ಮನಸ್ಸು, ಬಿಎಸ್ವೈ ಪುತ್ರನಿಗೆ ಪಟ್ಟ ಕಟ್ಟಿದೆ.. ಹೀಗೆ ವಿಜಯೇಂದ್ರಗೆ ಕಟ್ಟಿದ ಪಟ್ಟವೇ ಸೋಮಣ್ಣರ ಸಿಟ್ಟಿನ ಕಟ್ಟೆ ಒಡೆದಿದೆ ಎಂದು ಹೇಳಲಾಗ್ತಿದೆ..
ಬಿಜೆಪಿಯಲ್ಲಿ ಮಾಜಿ ವಸತಿ ಸಚಿವರಿಗೆ ಸೂರು ಸಿಗದ ಕಾರಣ, ಕಾಂಗ್ರೆಸ್ ಆಸರೆ ಬಯಸ್ತಿದ್ದಾರೆ ಅಂತ ಗೊತ್ತಾಗಿದೆ.. ಸೋಮಣ್ಣರನ್ನ ಕಾಂಗ್ರೆಸ್ಗೆ ಕರೆತರಲು ಖುದ್ದು ಆಪರೇಷನ್ ಮಾಸ್ಟರ್ ಡಿಕೆಶಿ ಫೀಲ್ಡ್ಗಿಳಿದಿದ್ದಾರೆ.. ಹಿಂದೆ ಸೋಮಣ್ಣ ಸೇರ್ಪಡೆ ಬಗ್ಗೆ ಡಿಕೆಶಿ ಮಾತುಕತೆ ನಡೆಸಿದ್ದರು.. ಆಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣಗೆ ಈ ನಿರಾಸೆ ಆಗಿದೆ.. ಹೀಗಾಗಿ ಪಕ್ಷ ತೊರೆಯುವ ಆಲೋಚನೆಯಲ್ಲಿದ್ದಾರೆ ಅನ್ನೋ ಸುದ್ದಿ ಗಾಳಿಪಟದಂತೆ ಹಾರಾಡಾಡ್ತಿದೆ..
ಸೋಮಣ್ಣಗೆ ಕಾಂಗ್ರೆಸ್ ಆಫರ್!
ಎರಡು ಕ್ಷೇತ್ರದಿಂದ ಸೋಮಣ್ಣಗೆ ಕೈ ಪಡೆ ಆಫರ್ ಕೊಟ್ಟಿದೆ ಅನ್ನೋ ಮಾತು ಕೇಳಿ ಬರ್ತಿದೆ.. ತುಮಕೂರಿನಿಂದ ಕಣಕ್ಕಿಳಿಸಲು ಡಿಕೆ ಬ್ರದರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.. ಕಳೆದ ಬಾರಿ ತುಮಕೂರು ಕ್ಷೇತ್ರ ಬಿಜೆಪಿ ವಶವಾಗಿದೆ.. ಸೋಮಣ್ಣ ಸ್ಪರ್ಧೆಯಿಂದ ಹಳೇ ಮೈಸೂರು ಭಾಗದ ಲಿಂಗಾಯತ ಮತ ಸೆಳೆಯಲು ಪ್ಲಾನ್ ರೂಪಿಸಲಾಗಿದೆ ಎಂದು ಗೊತ್ತಾಗಿದೆ.. ಈ ಮಧ್ಯೆ, ಮೈಸೂರು – ಕೊಡಗು ಕ್ಷೇತ್ರದಿಂದ ಸೋಮಣ್ಣ ಹೆಸರು ಚರ್ಚೆ ಆಗ್ತಿದೆ..
ಸೀಟು ಹಂಚಿಕೆ ಮುನ್ನವೇ ಕ್ಷೇತ್ರಕ್ಕಾಗಿ ಕಮಲ-ದಳದ ಫೈಟ್!
ಇತ್ತ, ಸೀಟು ಹಂಚಿಕೆ ಮುನ್ನವೇ ಜೆಡಿಎಸ್-ಬಿಜೆಪಿ ತಿಕ್ಕಾಟ ಶುರುವಾಗಿದೆ.. ಮೈಸೂರ ಮತ್ತು ತುಮಕೂರು ಟಿಕೆಟ್ಗಾಗಿ ಕಮಲ-ದಳ ಫೈಟ್ ಏರ್ಪಟ್ಟಿದೆ.. ಮೈಸೂರು-ಕೊಡಗು ಟಿಕೆಟ್ಗಾಗಿ ಸಾ.ರಾ ಮಹೇಶ್ ಬೇಡಿಕೆ ಇಟ್ಟಿದ್ದಾರೆ.. ಸಾ.ರಾ.ಮಹೇಶ್ ನಿಂತರೇ ಗೆಲ್ಲಿಸ್ತೇವೆ ಅಂತ ಜಿ.ಟಿ ದೇವೇಗೌಡ ಘೋಷಣೆ ಮಾಡಿದ್ದಾರೆ.. ಅತ್ತ, ತುಮಕೂರಲ್ಲಿ ಜೆಡಿಎಸ್ಗೆ ಟಿಕೆಟ್ ನೀಡದಂತೆ ಒತ್ತಡ ಹೇರಲಾಗ್ತಿದೆ ಎಂದು ಹೇಳಲಾಗ್ತಿದೆ..
ಇತ್ತ ಹುಬ್ಬಳ್ಳಿಯಲ್ಲಿ ಮಾತ್ನಾಡಿದ ಮಾಜಿ ಸಚಿವ ನಿರಾಣಿ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಂತ ಗೇಲಿ ಮಾಡಿದ್ದಾರೆ.. ಒಳ ಜಗಳದಲ್ಲೇ ಸರ್ಕಾರ ಬಿದ್ದೋಗುತ್ತೆ ಅಂತ ಅಂತ ಬಾಂಬ್ ಸಿಡಿಸಿದ್ದಾರೆ..
ಒಟ್ಟಾರೆ, ವಿಜಯೇಂದ್ರಗೆ ಪಟ್ಟ ಸಿಗುತ್ತಲೇ ಲೈಟ್ ಆಗಿ ಕರೆಂಟ್ ಸ್ಪಾರ್ಕ್ ಆಗ್ತಿದೆ.. ಬಣ ಮೇಲಾಟದಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದ ಬಿಎಸ್ವೈ, ಎದುರಾಳಿ ಬಣಕ್ಕೆ ಶಾಕ್ ನೀಡಿದ್ದಾರೆ.. ವಿಪಕ್ಷ ನಾಯಕನ ಸ್ಥಾನ ಯಾರಿಗೆ ದಕ್ಕಲಿದೆ ಅನ್ನೋದರ ಮೇಲೆ ಬಣ ಕಿತ್ತಾಟದ ತೀವ್ರತೆ ಅವಲಂಬಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ