newsfirstkannada.com

ವಿದ್ಯುತ್ ಕಂಬದಿಂದ ಅಕ್ರಮ ಕರೆಂಟ್​​ ಸಂಪರ್ಕ ಪಡೆದ ಆರೋಪ.. ಕುಮಾರಸ್ವಾಮಿಗೆ ಅಭಿನಂದಿಸ್ತೇನೆ ಎಂದ ಡಿಕೆ ಶಿವಕುಮಾರ್​

Share :

14-11-2023

    ಮನೆಯ ಮುಂದೆ ಇರುವವರೇ ವಿಡಿಯೋ ಮಾಡಿದ್ದಾರೆ

    ಮಾಧ್ಯಮ ತೋರಿಸಿದ್ದನ್ನು ಸೋಷಿಯಲ್ ಮೀಡಿಯಾ ಹಾಕಕೊಂಡಿದೆ

    ಸೋಷಿಯಲ್ ಮೀಡಿಯಾ ಅದರ ಡ್ಯೂಟಿ ಮಾಡಿದೆ ಎಂದ ಡಿಕೆಶಿ

ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್​ ಸಂಪರ್ಕ ಪಡೆದ ಆರೋಪ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಕುಮಾರಸ್ವಾಮಿ ಗೆ ಅಭಿನಂದಿಸ್ತೇನೆ. ಅವರ ಮನೆಯ ಮುಂದೆ ಇರುವವರೇ ವಿಡಿಯೋ ಮಾಡಿ ಮಾಹಿತಿ ಕೊಟ್ಟು ಮಾಧ್ಯಮಗಳಿಗೆ ನೀಡಿದ್ದಾರೆ. ಮಾಧ್ಯಮದವರು ತೋರಿಸಿದ್ದನ್ನು ನಮ್ಮ ಸೋಷಿಯಲ್ ಮೀಡಿಯಾ ಪಿಕಪ್ ಮಾಡಿದೆ. ನಮ್ಮ ಸೋಷಿಯಲ್ ಮೀಡಿಯಾ ಅದರ ಡ್ಯೂಟಿ ಮಾಡಿದೆ ಎಂದು ಹೇಳಿದ್ದಾರೆ.

ನಂತರ ಮಾತು ಮುಂದುವರಿಸಿದ ಡಿಕೆ ಶಿವಕುಮಾರ್​, ಅಚಾತುರ್ಯವೋ ಕಳ್ಳತನವೋ ಕುಮಾರಸ್ವಾಮಿ ಹೇಳಿದ್ದಾರೆ. ಬೆಸ್ಕಾಂನವರು ಏನು ಕಾನೂನು ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ತಾರೆ. ನಾವು ಇದಕ್ಕೆ ಇಂಟರ್ ಫಿಯರ್ ಆಗೋ ಅವಶ್ಯಕತೆ ಇಲ್ಲ. ಕಾಂಪೌಂಡ್ ನಾನು ಹಾಕಿದಿನೋ ಅವರು ಹಾಕಿದಾರೋ ಲೋಕಾಯುಕ್ತ ಇದೆ ದೂರು ಕೊಡಲಿ. ಅಸೂಯೆಗೆ ಮದ್ದಿಲ್ಲ, ಪಾಪ ಅವರ ಹತ್ರ ತಡೆದುಕೊಳ್ಳಲು ಆಗ್ತಿಲ್ಲ. ಎಚ್​ಡಿಕೆ ಸವಾಲುಗಳಾ ಅಯ್ಯೋ… ಅವರ ಈ ಸವಾಲುಗಳಿಗೆಲ್ಲ ಪಂಚರತ್ನಕ್ಕೆಲ್ಲ ಜನರೇ ಉತ್ತರ ಕೊಟ್ಟಿದ್ದಾರೆ. ಅವರ ಸವಾಲುಗಳು, ಅವರ ಪ್ರವಾಸಗಳು ಏನೇನು ಮಾಡಿದ್ದಾರೆ ಎಲ್ಲ ಇಟ್ಕೊಂಡು ಬರಲಿ. ನಾಲ್ಕನೇ ತಾರೀಖು ಅಸೆಂಬ್ಲಿ ಇದೆ. ಅಲ್ಲಿ ಅವರ ಬಿಚ್ಚುಮನಸ್ಸಿನ ಅವರ ನುಡಿ ಮುತ್ತುಗಳನ್ನೆಲ್ಲ ಕೇಳೋಣ ಎಂದು ಹೇಳಿದ್ದಾರೆ.

ಏನಿದು ಘಟನೆ?

ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವಿರುದ್ಧ ದೀಪಾವಳಿಯ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಬಳಸಿದ ಬಗ್ಗೆ ಆರೋಪ ಕೇಳಿಬಂದಿದೆ. ಜೆ.ಪಿ ನಗರದ ನಿವಾಸವನ್ನ ಅಲಂಕರಿಸಲು ನೇರವಾಗಿ ವಿದ್ಯುತ್​ ಕಂಬದಿಂದ ವಿದ್ಯುತ್​ ಪಡೆದಿರುವ ಸಾಕ್ಷಿ ಸಮೇತ ದೃಶ್ಯ ವೈರಲ್​ ಆಗಿದೆ. ಈ ವಿಚಾರವಾಗಿ ಕಾಂಗ್ರೆಸ್​​ ಟ್ವೀಟ್​ ಮಾಡಿದೆ. ಟ್ವೀಟ್​ನಲ್ಲಿ ಮಾಜಿ ಸಿಎಂಗೆ ವಿದ್ಯುತ್ ಕದಿಯುವ ದಾರಿದ್ರ್ಯ ಬಂದಿದ್ದು ದುರಂತ. ಜಗತ್ತಿನ ಏಕೈಕ ಮಹಾ ಪ್ರಾಮಾಣಿಕ ಹೆಚ್.ಡಿ ಕುಮಾರಸ್ವಾಮಿ. ಅಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿಗೆ ಅರ್ಜಿ ಹಾಕಿ ಎಂದು ಬರೆದುಕೊಂಡಿದೆ.

ಸದ್ಯ ಈ ವಿಚಾರ ಮುನ್ನೆಲೆಗೆ ಬಂದಂತೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ವಿಷಾದ ವ್ಯಕ್ತಪಡಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಮನೆಗೆ ಅಲಂಕಾರ ಮಾಡಲು ಹೇಳಲಾಗಿತ್ತು. ಖಾಸಗಿ ಡೆಕೋರೇಟರ್ ಒಬ್ಬರಿಗೆ ಅಲಂಕಾರ ಮಾಡಲು ಹೇಳಿದ್ವಿ. ಆದರೆ ಅವರು ಪಕ್ಕದಲ್ಲಿದ್ದ ಕಂಬದಿಂದ ವಿದ್ಯುತ್ ಸಂಪರ್ಕ ಮಾಡಿದ್ದಾರೆ. ನಿನ್ನೆ ರಾತ್ರಿ ಮನೆಗೆ ಬಂದಾಗ ವಿಷಯ ಗೊತ್ತಾಗಿ ತೆಗೆಸಲು ಸೂಚನೆ ನೀಡಲಾಗಿದೆ.  ಆಚಾತುರ್ಯ ಆಗಿದೆ, ಬೆಸ್ಕಾಂ ಸಿಬ್ಬಂದಿ ಬಂದು ನೋಟಿಸ್ ನೀಡಲಿ. ಕಾಂಗ್ರೆಸ್ ದೊಡ್ಡದು ಮಾಡಿ ಪ್ರಚಾರ ಗಿಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಟ್ವೀಟ್​ ಮಾಡುವ ಮೂಲಕ ಉತ್ತರ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯುತ್ ಕಂಬದಿಂದ ಅಕ್ರಮ ಕರೆಂಟ್​​ ಸಂಪರ್ಕ ಪಡೆದ ಆರೋಪ.. ಕುಮಾರಸ್ವಾಮಿಗೆ ಅಭಿನಂದಿಸ್ತೇನೆ ಎಂದ ಡಿಕೆ ಶಿವಕುಮಾರ್​

https://newsfirstlive.com/wp-content/uploads/2023/11/DK-Shivakumar.jpg

Load More