newsfirstkannada.com

‘ನನಗೆ ಈ ರಾಜಕೀಯ ಸಾಕಾಗಿದೆ’- DK ಸುರೇಶ್ ಹೀಗೆ ಬಹಿರಂಗ ಅಸಮಾಧಾನ​​ ಹೊರಹಾಕಲು ಕಾರಣವೇನು?

Share :

17-06-2023

    ರಾಜಕಾರಣದ ಬಗ್ಗೆ ಕಾಂಗ್ರೆಸ್​ ಸಂಸದ ಡಿಕೆ ಸುರೇಶ್​​ ಬೇಸರ

    ಮುಂದಿನ ಚುನಾವಣೆಯಲ್ಲಿ ನಿಲ್ಲೋದು ಡೌಟ್​ ಎಂದ ಸಂಸದ

    ರಾಜಕೀಯ ಸಾಕಾಗಿದೆ ಎಂದು ಡಿ.ಕೆ ಸುರೇಶ್​​ ವೈರಾಗ್ಯದ ಮಾತು

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಸಹೋದರ ಸಂಸದ ಡಿ.ಕೆ ಸುರೇಶ್​​​ ಮತ್ತೆ ವೈರಾಗ್ಯದ ಮಾತಾಡಿದ್ದಾರೆ. ಯಾಕೋ ರಾಜಕೀಯ ಸರಿಯಿಲ್ಲ, ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಲ್ಲೋ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್​​, ನಾನು ಮುಂದೆ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನನ್ನ ನಾಯಕರು, ಮುಖಂಡರೊಂದಿಗೆ ಮಾತಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ನಿಲ್ಲೋಕೆ ಯಾರು ಸೂಕ್ತ ಎನ್ನುತ್ತಾರೆ ಅವರಿಗೆ ನನ್ನ ಬೆಂಬಲ ಎಂದರು.

ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ನನಗೆ ರಾಜಕೀಯ ಸಾಕಾಗಿದೆ. ಬೇರೆ ಯಾರಿಗಾದ್ರೂ ಅವಕಾಶ ಮಾಡಿಕೊಡಬೇಕು ಎಂಬುದು ನನ್ನ ಉದ್ದೇಶ. ಅಧಿಕಾರ ದಾಹ ಇದ್ದೋರಿಗೆ ರಾಜಕಾರಣ ಬೇಕು. ನನ್ನದು ಅಭಿವೃದ್ದಿ ದಾಹ, ಇನ್ನೂ ಒಂದು ವರ್ಷ ಇದೆ. ಸದ್ಯ ಈಗ ಅಭಿವೃದ್ದಿ ಕಡೆ ಗಮನ ಕೊಟ್ಟು ಮುಂದೆ ರಾಜಕಾರಣದ ಬಗ್ಗೆ ಮಾತಾಡುತ್ತೇನೆ ಎಂದರು ಡಿ.ಕೆ ಸುರೇಶ್​​.

ಬಿಜೆಪಿ, ಜೆಡಿಎಸ್​​ ಹೊಂದಾಣಿಕೆ ರಾಜಕೀಯ

ಇನ್ನು, ತನ್ನನ್ನು ಸೋಲಿಸಲು ಬಿಜೆಪಿ, ಜೆಡಿಎಸ್​​ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುತ್ತೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್​​ ಹೀಗೆಂದರು. ನನಗೆ ಬೇಕಿರೋದು ಒಂದು ಮತ. ಅದು ಪ್ರಧಾನಿ ಆಗೋರಿಗೆ ಹಾಕುವ ಮತ. ಹೀಗಾಗಿ ಜನರೇ ನಮ್ಮ ಭವಿಷ್ಯ ನಿರ್ಧರಿಸುತ್ತಾರೆ ಎಂದರು.

‘ನನಗೆ ಈ ರಾಜಕೀಯ ಸಾಕಾಗಿದೆ’- DK ಸುರೇಶ್ ಹೀಗೆ ಬಹಿರಂಗ ಅಸಮಾಧಾನ​​ ಹೊರಹಾಕಲು ಕಾರಣವೇನು?

https://newsfirstlive.com/wp-content/uploads/2023/06/DK-Suresh1.jpg

Load More