ಇವತ್ತು ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್
ಯಾವುದೇ ಕಾರಣಕ್ಕೂ ಕರೆಂಟ್ ಕಟ್ ಮಾಡದಂತೆ ಜನರ ಒತ್ತಾಯ
ಚಂದ್ರಯಾನ-3 ಕ್ಲೈಮ್ಯಾಕ್ಸ್ ಕಣ್ತುಂಬಿಕೊಳ್ಳಲು ಎಲ್ಲೆಲ್ಲೂ ಕಾತರ
ದಾವಣಗೆರೆ: ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್‌ಗೆ ಕೆಲವೇ ಗಂಟೆಗಳು ಬಾಕಿ ಇದೆ. ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ಯಶಸ್ಸಿಗೆ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸಾಧಿಸೋ ವಿಶ್ವಾಸದಲ್ಲಿದ್ದಾರೆ. ಇವತ್ತು ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಉಡಾವಣೆ ಮಾಡಿರುವ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ. ಈ ಅವಿಸ್ಮರಣೀಯ ಕ್ಷಣಗಳನ್ನ ಕಣ್ತುಂಬಿಕೊಳ್ಳಲು ಕೋಟಿ, ಕೋಟಿ ಭಾರತೀಯರು ತುದಿಗಾಲಲ್ಲಿ ನಿಂತಿದ್ದಾರೆ. ಇಂದು ಸಂಜೆ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಕುತೂಹಲದಿಂದ ಕೂಡಿದೆ 15 ನಿಮಿಷ! ಈ 4 ಹಂತಗಳನ್ನು ಪೂರೈಸಿದರೆ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಗ್ಯಾರಂಟಿ
ಚಂದ್ರಯಾನ-3 ಮಿಷನ್‌ನಲ್ಲಿ ವಿಕ್ರಂ ಲ್ಯಾಂಡರ್ ಸೇಫ್ ಲ್ಯಾಂಡ್ ಆಗುವ ಅಪರೂಪದ ಕ್ಷಣಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಇಂದು ಸಂಜೆ ಚಂದ್ರಯಾನ-3 ಮಿಷನ್ ಕಾರ್ಯಾಚರಣೆಯ ಕ್ಲೈಮ್ಯಾಕ್ಸ್ ಕಣ್ತುಂಬಿಕೊಳ್ಳಲು ದಾವಣಗೆರೆಯ ಜನ ಕೂಡ ಕಾತರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಬೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಚಂದ್ರಯಾನ-3 ಕಣ್ತುಂಬಿಕೊಳ್ಳಲು ನಾವು ಕಾತರರಾಗಿದ್ದೇವೆ. ಹೀಗಾಗಿ ಚಂದ್ರಯಾನ-3 ಸಮಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು ಎಂದು ಹತ್ತಾರು ಮಂದಿ ಪತ್ರ ಬರೆದು ಒತ್ತಾಯಿಸಿದ್ದಾರೆ. ಪತ್ರ ಬರೆಯುವುದರ ಜೊತೆಗೆ ಸಾಕಷ್ಟು ಜನರು ಕರೆ ಮಾಡಿ ಕೂಡ ವಿದ್ಯುತ್ ಕಡಿತಗೊಳಿಸದಂತೆ ಮನವಿ ಮಾಡಿದ್ದಾರೆ. ಚಂದ್ರಯಾನ ಸಕ್ಸಸ್ ಆಗಲಿ ಎಂದು ದಾವಣಗೆರೆ ಜಿಲ್ಲೆಯ ಮಕ್ಕಳು, ಹಿರಿಯರು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ಕೂಡ ಸಲ್ಲಿಸುತ್ತಿದ್ದಾರೆ. ದೇಶಾದ್ಯಂತ ಇಸ್ರೋ ಚಂದ್ರಯಾನ-3 ಯಶಸ್ವಿಯಾಗಲೆಂದು ಹೋಮ, ಯಾಗಗಳನ್ನು ಮಾಡಲಾಗುತ್ತಿದೆ. ಈ ಮೂಲಕ ಚಂದ್ರಯಾನ-3ನಲ್ಲಿ ಇಂದು ಸಂಜೆ ವಿಕ್ರಂ ಲ್ಯಾಂಡರ್ ಸೇಫ್ ಲ್ಯಾಂಡ್ ಅನ್ನೇ ಎಲ್ಲರೂ ಎದುರು ನೋಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ