newsfirstkannada.com

×

ಸತ್ತ ವ್ಯಕ್ತಿಯ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ; ಸ್ಟೋರಿ ಓದಿದ್ರೆ ಬೆಚ್ಚಿಬೀಳ್ತೀರಾ!

Share :

Published September 25, 2024 at 6:27am

    ಯಾರಿಗೆ ಆಗಲಿ ಒಂದಷ್ಟು ವರ್ಷಗಳ ನಂತರ ಸಾವು ಅನ್ನೋದು ಸಹಜ

    ಮನುಷ್ಯ ಸತ್ತ ನಂತರ ಅವರು ಬಳಸಿದ ಎಷ್ಟೋ ವಸ್ತುಗಳು ಇದ್ದೇ ಇರುತ್ತೆ!

    ಯಾವುದೇ ಕಾರಣಕ್ಕೂ ಮೃತ ವ್ಯಕ್ತಿಗಳ ಈ ವಸ್ತುಗಳನ್ನು ಬಳಸಲೇಬೇಡಿ

ಒಂದಷ್ಟು ವರ್ಷಗಳ ನಂತರ ಸಾವು ಅನ್ನೋದು ಸಹಜ. ಮನುಷ್ಯ ಸತ್ತ ನಂತರ ಅವರು ಬಳಸಿದ ವಸ್ತುಗಳು ಇದ್ದೇ ಇರುತ್ತೆ. ಬದುಕಿದ್ದಾಗಲೇ ತಂದೆ ತಾಯಿ ವಸ್ತುಗಳಿಗಾಗಿ ಕಿತ್ತಾಡೋ ಜನ ಸತ್ತ ಮೇಲೆ ಬಿಡುತ್ತಾರೆಯೇ ಅನ್ನೋ ಒಂದು ಗಾದೆ ಮಾತಿದೆ. ಆಸ್ತಿ ಹಂಚಿಕೆ ವಿಚಾರ ಬಿಡಿ. ಮನೆಯಲ್ಲಿರೋ ರೇಷ್ಮೆ ಸೀರೆಯಿಂದ ಹಿಡಿದು ಮೈ ಮೇಲಿನ ಬಂಗಾರ ಮತ್ತು ಪಾತ್ರೆ ಪಗಡೆ ಯಾವುದು ಬಿಡಿಲ್ಲ. ಆದರೀಗ ಅಚ್ಚರಿ ವಿಚಾರದವೊಂದು ಬೆಳಕಿಗೆ ಬಂದಿದೆ.

ಹೌದು, ಯಾವುದೇ ಕಾರಣಕ್ಕೂ ಮರಣ ಹೊಂದಿದ ವ್ಯಕ್ತಿಯ ಈ ವಸ್ತುಗಳನ್ನು ಯಾರು ಬಳಸಬಾರದು. ಇದಕ್ಕೆ ಕಾರಣ ಮೃತ ವ್ಯಕ್ತಿ ಬಳಸಿದ ವಸ್ತುಗಳಲ್ಲಿ ಕೆಲವು ಆತನ ಶಕ್ತಿ ಮತ್ತು ಕರ್ಮಗಳಿಗೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ. ನೀವು ಈ ವಸ್ತುಗಳನ್ನು ಬಳಸುವುದರಿಂದ ಅವರ ಪಾಪ – ಕರ್ಮದ ಭಾಗವಾಗುತ್ತೀರಿ. ಅಷ್ಟೇ ಅಲ್ಲ ನೀವು ಮೃತ ವ್ಯಕ್ತಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಬಳಕೆ ಮಾಡಿದ್ರೆ ಅವರ ಆತ್ಮಕ್ಕೆ ಮೋಕ್ಷ ಸಿಗುವುದಿಲ್ಲ.

ಮೃತ ವ್ಯಕ್ತಿಗಳ ಯಾವ ವಸ್ತು ಬಳಸಬಾರದು!

ಸತ್ತವರಿಗೆ ಸೇರಿದ ಕೈಗಡಿಯಾರ ಅಥವಾ ವಾಚ್‌ ನಾವು ಧರಿಸಬಾರದು. ಎಷ್ಟೋ ದುಬಾರಿಯದ್ದು ಆದ್ರೂ ನಮ್ಮ ಬಳಿ ಇಟ್ಟುಕೊಳ್ಳಬಾರದು. ಅವರ ವಾಚ್​ ಬಳಸಿದ್ರೆ ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಜತೆಗೆ ಮರಣ ಹೊಂದಿದ ವ್ಯಕ್ತಿ ಬಟ್ಟೆಗಳನ್ನು ಕೂಡ ಧರಿಸಬಾರದು. ಕಾರಣ ಅವರಿಗಿರೋ ಕೆಟ್ಟ ಪ್ರವೃತ್ತಿಗಳು ನಮ್ಮೊಂದಿಗೆ ಇರುತ್ತದೆ ಎಂದು ಹೇಳಲಾಗಿದೆ. ಬದಲಿಗೆ ವಿಮೋಚನೆಗಾಗಿ ನಿರ್ಗತಿಕರಿಗೆ ಹೊಸ ಬಟ್ಟೆಗಳನ್ನು ನೀಡಿ ಹಳೆ ಬಟ್ಟೆಗಳನ್ನು ಸುಟ್ಟುಹಾಕಬೇಕು.

ಮರಣಕ್ಕೂ ಮುನ್ನ ವ್ಯಕ್ತಿ ಬಳಸುತ್ತಿದ್ದ ಪಾತ್ರೆಗಳು, ತಟ್ಟೆಗಳು, ಊಟದ ವಸ್ತುಗಳನ್ನು ಬಳಸಬಾರದು. ಇದು ಕುಟುಂಬಸ್ಥರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪೂರ್ವಜರ ಕರ್ಮ ನಾಶ ಮಾಡಲು ಈ ವಸ್ತುಗಳನ್ನು ದಾನ ಮಾಡಿ. ಇವರಿಗೆ ಸೇರಿದ ಪೂಜಾ ತಟ್ಟೆಗಳು, ವಿಗ್ರಹಗಳು, ವೈಯಕ್ತಿಕ ಧಾರ್ಮಿಕ ವಸ್ತುಗಳು ಕೂಡ ಬಳಸಬೇಡಿ. ಅದರಲ್ಲೂ ಪಿತೃಗಳಿಗೆ ಸಂಬಂಧಿಸಿದ ಪಾದರಕ್ಷೆ ನಾವು ಧರಿಸಬಾರದು. ಎಲ್ಲವೂ ದಾನ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್​ ತಂಡದಿಂದ ರೋಹಿತ್​ ಶರ್ಮಾಗೆ ಬಿಗ್​ ಆಫರ್​!

ವಿಶೇಷ ಸೂಚನೆ: ಎಲ್ಲಾ D TH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತ್ತ ವ್ಯಕ್ತಿಯ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ; ಸ್ಟೋರಿ ಓದಿದ್ರೆ ಬೆಚ್ಚಿಬೀಳ್ತೀರಾ!

https://newsfirstlive.com/wp-content/uploads/2024/09/Death.jpg

Load More