newsfirstkannada.com

ವೋಟರ್ ಐಡಿ ಮಿಸ್ ಆಗಿದ್ದರೂ ನೀವು ವೋಟ್ ಮಾಡಬಹುದು.. ಹೇಗೆ ಅನ್ನೋ ವಿವರ ಇಲ್ಲಿದೆ

Share :

Published April 26, 2024 at 6:26am

Update April 26, 2024 at 8:22am

    ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ

    ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ

    ಯಾವೆಲ್ಲ ID ತೋರಿಸಿ ವೋಟ್ ಮಾಡಬಹುದು?

ರಾಜ್ಯದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. 14 ಲೋಕಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದ್ದು ಸಂಜೆ 6 ಗಂಟೆವರೆಗೂ ನಡೆಯಲಿದೆ.

ಈಗಾಗಲೇ ಮತಪೆಟ್ಟಿಗೆಗಳನ್ನು ಮತಗಟ್ಟೆಗೆ ರವಾನಿಸಿ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಮಾತ್ರವಲ್ಲದೆ ಮಸ್ಟರಿಂಗ್ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿಗೆ ಮತದಾನ ಪ್ರಕ್ರಿಯೆ ಹೇಗೆ ನಡೆಸಬೇಕೆಂದು ಮಾರ್ಗದರ್ಶನ ನೀಡಲಾಗಿದೆ.

ಇದನ್ನೂ ಓದಿ: ಇನ್ನೇನು ಸಾಯುತ್ತಿದ್ದ ಮಹಿಳೆಗೆ ಹಂದಿಯ ಮೂತ್ರಪಿಂಡ ಕಸಿ ಯಶಸ್ವಿ, ಮರುಜನ್ಮ ಪಡೆದ ಪವಾಡಗಿತ್ತಿಯ ಕಥೆ..!

ಇನ್ನು ಮತದಾನಕ್ಕೆ ಹೋಗೋ ಸಂದರ್ಭದಲ್ಲಿ ನೀವು ರಿಜಿಸ್ಟರ್ಡ್ ವೋಟರ್ ಆಗಿಯೂ ನಿಮ್ಮ ಬಳಿ ವೋಟರ್‌ ಐಡಿ ಮಿಸ್ಸಾಗಿದ್ರೆ ಚಿಂತೆ ಬೇಡ.. ಈ ದಾಖಲೆಗಳು ನಿಮ್ಮ ಬಳಿ ಇದ್ರೆ ನೀವು ಆರಾಮಾಗಿ ಮತದಾನ ಮಾಡಬಹುದು.

ಈ ದಾಖಲೆ ಇದ್ದರೆ ಸಾಕು

  • ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್​
  • ಅಂಚೆ ಕಚೇರಿ ನೀಡಿದ ಭಾವಚಿತ್ರ ಇರುವ ಪಾಸ್ ಬುಕ್
  • ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್‌, ಪಾಸ್‌ಪೋರ್ಟ್‌
  • ಶಾಂತಿಯುತ ಮತದಾನಕ್ಕೆ ಎಲ್ಲೆಡೆ ಸಕಲ ಸಿದ್ಧತೆ

ಮತದಾನದ ವೇಳೆ ಯಾವುದೇ ಸಮಸ್ಯೆಯಾಗದಂತೆ ಚುನಾವಣಾ ಆಯೋಗ ಎಚ್ಚರಿಕೆ ವಹಿಸಿದೆ. ಮತದಾರರಿಗೆ ನೀರು, ನೆರಳು, ಪಾರ್ಕಿಂಗ್ ಸೇರಿ ಮೂಲಸೌಕರ್ಯ ಕಲ್ಪಿಸಲು ಸಿದ್ಧತೆ ಕೂಡ ನಡೆದಿದೆ. ಇನ್ನು, ಮಹಿಳೆಯರಿಗಾಗಿ ಪ್ರತಿ ಕ್ಷೇತ್ರದಲ್ಲಿ 5 ಸಖೀ ಪಿಂಕ್ ಬೂತ್ ಗಳನ್ನ ನಿರ್ಮಾಣ ಮಾಡಲಾಗಿದೆ. ದಿವ್ಯಾಂಗರಿಗೆ ವೀಲ್ ಚೇರ್ ವ್ಯವಸ್ಥೆ ಇರಲಿದ್ದು, ವಿವಿಧ ಥೀಮ್​​ಗಳ ಅಡಿಯಲ್ಲಿ ಮತಗಟ್ಟೆ ನಿರ್ಮಿಸಿ ಮತದಾರರನ್ನ ಸೆಳೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇನ್ನು ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್​ ನಿಯೋಸಲಾಗಿದೆ.

ಒಟ್ಟು 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಇವತ್ತು 2ನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಮತದಾನ ನಡೆಸಲಿದೆ.

ವೋಟರ್ ಐಡಿ ಮಿಸ್ ಆಗಿದ್ದರೂ ನೀವು ವೋಟ್ ಮಾಡಬಹುದು.. ಹೇಗೆ ಅನ್ನೋ ವಿವರ ಇಲ್ಲಿದೆ

https://newsfirstlive.com/wp-content/uploads/2024/04/VOTER-ID.jpg

Load More