newsfirstkannada.com

ಸ್ನಾನ ಮಾಡಲು ಬಳಸುವ ಗ್ಯಾಸ್ ಗೀಸರ್ ಎಷ್ಟು ಅಪಾಯ? ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು!

Share :

12-06-2023

    ಗ್ಯಾಸ್ ಗೀಸರ್‌ನಲ್ಲಿ ಸ್ನಾನ ಮಾಡುವಾಗ ಇಬ್ಬರ ಸಾವು

    ಸ್ನಾನ ಮಾಡುವಾಗ ತಲೆ ಸುತ್ತು ಬರೋದು ಯಾಕೆ?

    ಗ್ಯಾಸ್‌ ಗೀಸರ್ ಬಳಸಲು ಈ ಮಾರ್ಗ ಅನುಸರಿಸಿ

ಬೆಂಗಳೂರು: ಗ್ಯಾಸ್ ಗೀಸರ್‌ನಲ್ಲಿ ಸ್ನಾನ ಮಾಡುವಾಗ ಹುಡುಗ, ಹುಡುಗಿ ಸಾವನ್ನಪ್ಪಿರೋ ದಾರುಣ ಘಟನೆ ಇವತ್ತು ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಚಿಕ್ಕಜಾಲದ ತರಬನಹಳ್ಳಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿ ಬಾತ್‌ರೂಂನಲ್ಲಿ ಸ್ನಾನ ಮಾಡುವಾಗ ಸಾವನ್ನಪ್ಪಿದ್ದಾರೆ.

ಇವರಿಬ್ಬರು ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಬಾತ್ ರೂಮ್‌ಗೆ ತೆರಳಿದ್ದಾರೆ. ಈ ವೇಳೆ ಬಾತ್ ರೂಮ್‌ನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿ ಇಬ್ಬರು ಸ್ನಾನ ಮಾಡಿದ್ದಾರೆ. ಗ್ಯಾಸ್ ಗೀಸರ್‌ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಇಬ್ಬರು ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.

ಈ ದುರಂತದ ಬೆನ್ನಲ್ಲೇ ಗ್ಯಾಸ್ ಗೀಸರ್‌ಗಳು ಎಷ್ಟು ಸುರಕ್ಷಿತ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಬೆಂಗಳೂರಿನಂತ ಬ್ಯೂಸಿ ನಗರದಲ್ಲಿ ಎಷ್ಟೋ ಮಂದಿ ಗ್ಯಾಸ್ ಗೀಸರ್‌ ಅನ್ನೋ ಪ್ರತಿದಿನ ಬಳಕೆ ಮಾಡುತ್ತಾರೆ. ಗ್ಯಾಸ್‌ ಗೀಜರ್ ಅನ್ನು ಸರಿಯಾದ ರೀತಿಯಲ್ಲಿ ಬಳಸುವುದನ್ನ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ.

ಸ್ನಾನ ಮಾಡುವಾಗ ತಲೆ ಸುತ್ತು ಬರೋದು ಯಾಕೆ?
ಗ್ಯಾಸ್‌ ಗೀಸರ್‌ನಲ್ಲಿ ಸ್ನಾನ ಮಾಡುವಾಗ ಸ್ನಾನದ ಕೋಣೆಯಲ್ಲಿ ತಲೆಸುತ್ತು ಬಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಗ್ಯಾಸ್ ಸಿಲಿಂಡರ್ ಕನೆಕ್ಟ್ ಮಾಡಿದ ಗೀಸರ್‌ನಿಂದ ನೀರು ಕಾಯಿಸಿ ಸ್ನಾನ ಮಾಡುವವರಿಗೆ ಕೇವಲ ಜ್ಞಾನ ತಪ್ಪುವುದು ಮಾತ್ರವಲ್ಲ, ಜೊತೆಗೆ ಪಾರ್ಶ್ವವಾಯು, ಕಾರ್ಡಿಯಾಕ್ ಅರೆಸ್ಟ್, ಪಾರ್ಕಿನ್ಸನ್ ಕಾಯಿಲೆಯ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಗ್ಯಾಸ್ ಗೀಸರ್‌ಗಳಿಂದ ಕಾರ್ಬನ್ ಮಾನಾಕ್ಸೈಡ್ ಮತ್ತು ನೈಟ್ರಸ್ ಆಕ್ಸೈಡ್ ಹೆಚ್ಚಾಗುವಂತೆ ಮಾಡುತ್ತದೆ. ಇದು ಸಾಮಾನ್ಯವಾಗಿ ತಲೆನೋವು, ತಲೆಸುತ್ತು ಮತ್ತು ಮರೆವು ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಕೆಲವರಿಗೆ ಇದರಿಂದ ಕೋಮ ಕೂಡ ಬರುವಂತಹ ಸಾಧ್ಯತೆ ಇರುತ್ತದೆ. ಗ್ಯಾಸ್ ಗೀಸರ್‌ಗಳನ್ನು ಅಳವಡಿಸುವಾಗ ಕೆಲವು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ.

ಗ್ಯಾಸ್‌ ಗೀಸರ್ ಬಳಸಲು ಈ ಮಾರ್ಗ ಅನುಸರಿಸಿ
ಗ್ಯಾಸ್ ಗೀಸರ್‌ ಅನ್ನು ಸುಲಭವಾಗಿ ಗಾಳಿ ಹೊರಬರುವ ಜಾಗದಲ್ಲಿ ಅಳವಡಿಸಬೇಕು. ಆಗಾಗ ಗ್ಯಾಸ್‌ ಲೀಕೇಜ್ ಏನಾದ್ರೂ ಆಗುತ್ತಿದೆಯಾ ಎಂದು ಪರೀಕ್ಷಿಸುತ್ತಾ ಇರಬೇಕು. ಮಕ್ಕಳಿಂದ ಆದಷ್ಟು ದೂರವಿದ್ದರೆ ತುಂಬಾ ಒಳ್ಳೆಯದು. ಸುರಕ್ಷಿತ ಕ್ರಮಗಳ ಬಗ್ಗೆ ಆಗಾಗ ನಿರ್ವಹಣೆ ಮಾಡುತ್ತಾ ಇದ್ದರೆ ಹೆಚ್ಚು ಅನುಕೂಲಕರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನಾನ ಮಾಡಲು ಬಳಸುವ ಗ್ಯಾಸ್ ಗೀಸರ್ ಎಷ್ಟು ಅಪಾಯ? ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು!

https://newsfirstlive.com/wp-content/uploads/2023/06/Gas-Gyser.jpg

Load More