newsfirstkannada.com

ಅಯ್ಯೋ..ಒಂದೆರಡಲ್ಲ, ಫೈನಲ್​ ಗೆದ್ದ ಆಸೀಸ್​ ಮಡಿಲಿಗೆ ಸೇರಿದ್ದು ಎಷ್ಟು ಕೋಟಿ ಗೊತ್ತಾ? ಈ ಸ್ಟೋರಿ ಓದಲೇಬೇಕು

Share :

20-11-2023

    ಕೋಟಿ ಕೋಟಿ ಬಾಚಿಕೊಂಡ ಆಸ್ಟ್ರೇಲಿಯಾ!

    9 ಪಂದ್ಯ ಗೆದ್ದ ಟೀಂ ಇಂಡಿಯಾಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

    ವಿಶ್ವಕಪ್​ನಲ್ಲಿ ಸೋತ ಆರು ತಂಡಗಳ ಮಡಿಲು ಕೂಡ ತುಂಬಿದೆ

ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೇಲಿಯಾ ಗೆದ್ದಿದೆ. ಟೀಂ ಇಂಡಿಯಾವನ್ನು ಸೋಲಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಆದರೆ ವಿಶ್ವಕಪ್​ ಗೆದ್ದ ತಂಡಕ್ಕೆ ಸಿಗಗುವ ಬಹುಮಾನವೆಷ್ಟು ಗೊತ್ತಾ? ಟೀಂ ಇಂಡಿಯಾ ಇಲ್ಲಿಯವರೆಗೆ ಎಷ್ಟು ಹಣ ಬಾಚಿಕೊಂಡಿದೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ವಿಶ್ವಕಪ್​ ಇಡೀ ಟೂರ್ನಿಯ ಮೊತ್ತ 10 ಮಿಲಿಯನ್​ ಡಾಲರ್​. ಅಂದರೆ 83.29 ಕೋಟಿ . ಆಸ್ಟ್ರೇಲಿಯಾ ಈ ಬಾರಿ ಪಂದ್ಯವನ್ನು ಗೆದ್ದಿದ್ದು, 4 ಮಿಲಿಯನ್​ ಡಾಲರ್​ ತನ್ನದಾಗಿಸಿಕೊಂಡಿದೆ. ಅಂದರೆ ಕಾಂಗರೂ ಪಡೆಗಳ ಮಡಿಲಿಗೆ 33.3 ಕೋಟಿ ರೂಪಾಯಿ ಸಿಕ್ಕಿದೆ.

ಇದನ್ನು ಓದಿ: ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟ್ರಾವಿಸ್​ ಹೆಡ್​ಗೆ ಶುರುವಾಯ್ತು ನಡುಕ! ಹೆಂಡತಿ ಮತ್ತು 1 ವರ್ಷದ ಮಗುವಿನ ಮೇಲೆ ಅತ್ಯಾಚಾರ ಬೆದರಿಕೆ

ಇನ್ನು ರನ್ನರ್​ ಅಪ್​ ಆದ ಭಾರತಕ್ಕೆ 16.6 ಕೋಟಿ ರೂಪಾಯಿ ಬಕೋಹುಮಾನ ನೀಡಲಾಗಿದೆ. ಇನ್ನು ಪ್ರತಿ ಲೀಗ್​ನ ಗೆಲುವಿಗಾಗಿ 33 ಲಕ್ಷ ನೀಡಲಾಗುತ್ತದೆ. ಈವರೆಗೆ ಟೀಂ ಇಂಡಿಯಾ 9 ಪಂದ್ಯ ಗೆದ್ದಿದ್ದು, ಬರೋಬ್ಬರಿ 2.97 ಕೋಟಿ ರೂಪಾಯಿ ಜೇಬಿಗಿಳಿಸಿದೆ.

ಸೆಮಿಫೈನಲ್​ಗೆ ತಲುಪಲು ಸಾಧ್ಯವಾಗದೆ ಸೋತ ಆರು ತಂಡಗಳಿಗೂ ಹಣದ ಸುರಿಮಳೆ ಸುರಿಸಲಾಗಿದೆ. ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ – ತಲಾ 83 ಲಕ್ಷ ರೂಪಾಯಿ ಪಡೆದುಕೊಂಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಯ್ಯೋ..ಒಂದೆರಡಲ್ಲ, ಫೈನಲ್​ ಗೆದ್ದ ಆಸೀಸ್​ ಮಡಿಲಿಗೆ ಸೇರಿದ್ದು ಎಷ್ಟು ಕೋಟಿ ಗೊತ್ತಾ? ಈ ಸ್ಟೋರಿ ಓದಲೇಬೇಕು

https://newsfirstlive.com/wp-content/uploads/2023/11/world-Cup-2023-Final.jpg

Load More