newsfirstkannada.com

100, 200 ಅಲ್ಲ 800 ಸಾವು; ವಿಶ್ವದಲ್ಲಿ 2ನೇ ಅತಿ ದೊಡ್ಡ ರೈಲು ದುರಂತ ಸಂಭವಿಸಿರೋದು ಭಾರತದಲ್ಲೇ ಗೊತ್ತಾ?

Share :

03-06-2023

    100, 200 ಅಲ್ಲ, ಬರೋಬ್ಬರಿ 800 ಮಂದಿ ದಾರುಣ ಸಾವು

    ವಿಶ್ವದಲ್ಲಿ 2ನೇ ಅತಿ ದೊಡ್ಡ ರೈಲು ದುರಂತ ಆಗಿದ್ದು ಎಲ್ಲಿ ಗೊತ್ತಾ..?

    42 ವರ್ಷಗಳ ಹಿಂದೆ ದೇಶದಲ್ಲಿ ಅತಿದೊಡ್ಡ ರೈಲು ದುರಂತ..

100 ಅಲ್ಲ 200 ಅಲ್ಲ ಅಬ್ಬಾ.. ಒಡಿಶಾ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 300ರ ಗಡಿ ತಲುಪಿದೆ. ಮೂರು ರೈಲುಗಳ ಡಿಕ್ಕಿಗೆ 900ಕ್ಕೂ ಹೆಚ್ಚು ಪ್ರಯಾಣಿಕರು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರು ಸಾವನ್ನು ಗೆದ್ದು ಬರಲಿ ಎಂದು ಇಡೀ ದೇಶದ ಜನರು ಪ್ರಾರ್ಥನೆ ಮಾಡುತ್ತಿದ್ದಾರೆ.

ರೈಲ್ವೇ ಹಳಿಗಳ ಮೇಲೆ ಹೆಣದ ರಾಶಿಗಳನ್ನು ನೋಡಿರೋ ಒಡಿಶಾದ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಸಾವು, ನೋವುಗಳನ್ನು ಕಂಡಿರೋ ಸ್ಥಳೀಯರು ಇಂತಹ ದುರ್ಘಟನೆ ಮರುಕಳಿಸದಿರಲಿ ಎಂದು ಆ ದೇವರಲ್ಲಿ ಬೇಡಿಕೊಂಡಿದ್ದಾರೆ. ಈ ದುರಂತದ ಸಮಯದಲ್ಲಿ 1981ರಲ್ಲಿ ಸಂಭವಿಸಿದ್ದ ಆ ದುರಂತ ಪದೆ ಪದೇ ನೆನಪಾಗುವಂತೆ ಮಾಡಿದೆ.

ಭಾರತದ ರೈಲು ದುರಂತದಲ್ಲಿ ನೂರಾರು ಜನರ ಸಾವು ಇದೇ ಮೊದಲಲ್ಲ. ಜೂನ್ 6, 1981 ಅಂದ್ರೆ ಇವತ್ತಿಗೆ ಸರಿಯಾಗಿ 42 ವರ್ಷಗಳ ಹಿಂದೆ ದೇಶದಲ್ಲಿ ಅತಿದೊಡ್ಡ ರೈಲು ದುರಂತ ಸಂಭವಿಸಿತ್ತು. ಬಿಹಾರದಲ್ಲಿ ಹಳಿ ತಪ್ಪಿ ಸೇತುವೆಯನ್ನು ದಾಟುವಾಗ ರೈಲು ಬಾಗ್ಮತಿ ನದಿಗೆ ಬಿದ್ದಿತ್ತು. ಈ ದುರಂತದಲ್ಲಿ ಬರೋಬ್ಬರಿ 700 ರಿಂದ 800 ಪ್ರಯಾಣಿಕರು ಸಾವನ್ನಪ್ಪಿದ್ದರು.

ಬಾಗ್ಮತಿ ನದಿಗೆ ರೈಲು ಬಿದ್ದ ಭಯಾನಕ ದುರಂತ ಭಾರತದ ಕರಾಳ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. 800 ಜನರನ್ನು ಬಲಿ ಪಡೆದ ಈ ಘಟನೆ ಇಡೀ ವಿಶ್ವದಲ್ಲೇ 2ನೇ ಅತಿದೊಡ್ಡ ರೈಲು ದುರಂತವಾಗಿದೆ.

ಶ್ರೀಲಂಕಾದಲ್ಲಿ 1700 ಪ್ರಯಾಣಿಕರ ಸಾವು
ಜಗತ್ತಿನಲ್ಲೇ ಅತಿ ದೊಡ್ಡ ರೈಲು ದುರಂತ ಸಂಭವಿಸಿರೋದು ನೆರೆಯ ಶ್ರೀಲಂಕಾದಲ್ಲಿ. ಸಮುದ್ರದ ರಾಣಿ ಅನ್ನೋ ಹೆಸರಿನ ಟ್ರೈನ್ ಸುನಾಮಿಗೆ ಸಿಲುಕಿ 1700 ಪ್ರಯಾಣಿಕರನ್ನ ಬಲಿ ಪಡೆದಿದೆ. 2004ರಲ್ಲಿ ಸಂಭವಿಸಿದ ಈ ಭೀಕರ ದುರಂತ ವಿಶ್ವದಲ್ಲೇ ಅತಿ ದೊಡ್ಡ ರೈಲ್ವೆ ದುರಂತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

100, 200 ಅಲ್ಲ 800 ಸಾವು; ವಿಶ್ವದಲ್ಲಿ 2ನೇ ಅತಿ ದೊಡ್ಡ ರೈಲು ದುರಂತ ಸಂಭವಿಸಿರೋದು ಭಾರತದಲ್ಲೇ ಗೊತ್ತಾ?

https://newsfirstlive.com/wp-content/uploads/2023/06/1981-Train-Accident.jpg

Load More